ಫರಿದಾಬಾದ್ ಮಹಿಳೆ ಕೊಲೆ: ತನಿಖೆಯಲ್ಲಿ ಮಾವನೇ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದು ಬಹಿರಂಗ!

ಕೊಲೆಯಲ್ಲಿ ಮೃತ ಮಹಿಳೆಯ ಅತ್ತೆ ಕೂಡ ಭಾಗಿಯಾಗಿದ್ದಾರೆಂದು ಹೇಳಲಾಗಿದ್ದು, ಅವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
The 10-foot-deep pit in Faridabad from where the victim's body
10 ಅಡಿ ಆಳದ ಗುಂಡಿಯಿಂದ ಮಹಿಳೆ ಶವ ಹೊರತೆಗೆದ ಸ್ಥಳ
Updated on

ಫರಿದಾಬಾದ್: ಹರಿಯಾಣದ ಫರಿದಾಬಾದ್‌ನಲ್ಲಿ ಮಹಿಳೆಯನ್ನು ಕೊಲೆ ಮಾಡಿ ಸಮಾಧಿ ಮಾಡಿದ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಕೊಲೆಗೆ ಮುನ್ನ ಆಕೆಯ ಮಾವನೇ ಸೊಸೆ ಮೇಲೆ ಅತ್ಯಾಚಾರ ಎಸಗಿರುವುದು ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಲ್ಲಿ ಮೃತ ಮಹಿಳೆಯ ಅತ್ತೆ ಕೂಡ ಭಾಗಿಯಾಗಿದ್ದಾರೆಂದು ಹೇಳಲಾಗಿದ್ದು, ಅವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಈಗ ತಲೆಮರೆಸಿಕೊಂಡಿರುವ ಸಂತ್ರಸ್ತೆಯ ಪತಿ ಅರುಣ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪ್ರಮುಖ ಆರೋಪಿ ಮಾವ ಭೂಪ್ ಸಿಂಗ್ ಅವರನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರು ಮತ್ತೆ ಮೂರು ದಿನ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಿಚಾರಣೆಯ ಸಮಯದಲ್ಲಿ, ಕೊಲೆ ಪೂರ್ವ ಯೋಜಿತ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

24 ವರ್ಷದ ತನ್ನು ಕೊಲೆಗೆ ಏಪ್ರಿಲ್ 15 ರಂದು ಯೋಜಿಸಲಾಗಿತ್ತು ಮತ್ತು ಆಕೆಯ ಪತಿ ಹಾಗೂ ಅತ್ತೆ ಕೂಡ ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಹಿರಿಯ ತನಿಖಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

The 10-foot-deep pit in Faridabad from where the victim's body
ದಾವಣಗೆರೆ: ಮದುವೆಯಾಗಿ 15 ದಿನಕ್ಕೆ 55 ವರ್ಷದ ಅತ್ತೆ ಜೊತೆ ಅಳಿಯನ ಚಕ್ಕಂದ; ಮೊಬೈಲ್​ನಲ್ಲಿ ಸರಸದ Video ನೋಡಿ ಪತ್ನಿ ಶಾಕ್​!

ತಮ್ಮ ಯೋಜನೆಯ ಪ್ರಕಾರ, ಏಪ್ರಿಲ್ 15 ರಂದು ಉತ್ತರ ಪ್ರದೇಶದ ಎಟಾದಲ್ಲಿ ನಡೆದ ಸಂಬಂಧಿಕರ ಮದುವೆಗೆ ತನ್ನ ಪತ್ನಿಯನ್ನು ಕಳುಹಿಸಿದ್ದಾರೆ. ಬಳಿಕ ಏಪ್ರಿಲ್ 21 ರ ರಾತ್ರಿ, ಅರುಣ್, ತನ್ನ ಪತ್ನಿ ತನ್ನು ಮತ್ತು ಸಹೋದರಿ ಕಾಜಲ್ ಅವರ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿರುವುದಾಗಿ ವಿಚಾರಣೆಯ ಸಮಯದಲ್ಲಿ ಭೂಪ್ ಸಿಂಗ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಳಿಕ ಇಬ್ಬರೂ ನೆಲ ಮತ್ತು ಮೊದಲ ಮಹಡಿಯಲ್ಲಿರುವ ತಮ್ಮ ಪ್ರತ್ಯೇಕ ಕೋಣೆಗಳಲ್ಲಿ ಗಾಢ ನಿದ್ರೆಗೆ ಜಾರಿದರು.

ಮಾವ ತನ್ನುಳನ್ನು ಮಾತ್ರ ಕೊಲ್ಲಬೇಕೆಂದು ನಿರ್ಧರಿಸಿದ ನಂತರ ಅರುಣ್ ನೆಲ ಮಹಡಿಯಲ್ಲಿರುವ ಕೋಣೆಗೆ ಹೋದರು. ಭೂಪ್ ಸಿಂಗ್ ತಡರಾತ್ರಿ ತನ್ನುವಿನ ಕೋಣೆಗೆ ತೆರಳಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ದುಪಟ್ಟಾದಿಂದ ಆಕೆಯ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ. ಆದರೆ ಅತ್ಯಾಚಾರ ಎಸಗಿದ ಬಗ್ಗೆ ತನ್ನ ಮಗ ಮತ್ತು ಹೆಂಡತಿಗೆ ಹೇಳಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com