
ದಾವಣಗೆರೆ: ಎರಡು ತಿಂಗಳ ಹಿಂದೆ ಮದುವೆಯಾಗಿ ದಾಂಪತ್ಯ ಜೀವನದ ಕನಸು ಕಾಣುತ್ತಿದ್ದ ಯುವತಿಗೆ ಹೆತ್ತ ತಾಯಿಯೇ ಕಂಟಕಳಾಗಿದ್ದಾಳೆ. ಹೌದು... ಮಗಳ ಗಂಡನ ಜೊತೆ ತಾಯಿ ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮದುವೆ ನಡೆದ 15 ದಿನಕ್ಕೆ 55 ವರ್ಷದ ಅತ್ತೆ ಶಾಂತ ಜೊತೆ 25 ವರ್ಷದ ಗಣೇಶ್ ಅಕ್ರಮ ಸಂಬಂಧ ಬೆಳೆಸಿದ್ದಾನೆ.
ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ನಿವಾಸಿ ಶಾಂತ, ನಾಗರಾಜ್ ಎಂಬಾತನನ್ನು 13 ವರ್ಷಗಳ ಹಿಂದೆ 2ನೇ ಮದುವೆಯಾಗಿದ್ದಳು. ನಾಗರಾಜ್ ಗೆ ಅದಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದರು. ಆ ಪೈಕಿ ಹೇಮಾಳಿಗೆ ಶಾಂತಳೆ ಹುಡುಗನನ್ನು ಹುಡುಕಿ ಮದುವೆ ಮಾಡಿದ್ದಳು. ನಂತರ ಅಳಿಯನ ಜೊತೆ ಶಾಂತಾ ರೀಲ್ಸ್ ಮಾಡುವ ಖಯಾಳಿ ಶುರುವಾಗಿದೆ. ಬರಬರುತ್ತಾ ಇಬ್ಬರ ನಡುವೆ ಸಲುಗೆ ಬೆಳೆದು ಪರಸ್ಪರ ಹತ್ತಿರವಾಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೇ ತಮ್ಮ ಸರಸದ ದೃಶ್ಯಗಳನ್ನು ವಿಡಿಯೋ ಸಹ ಮಾಡಿದ್ದಾರೆ.
ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ, ಫೋಟೋ ನೋಡಿ ಮಗಳು ಶಾಕ್ ಆಗಿದ್ದಾಳೆ. ಗಂಡ ಹಾಗೂ ಮಲತಾಯಿಯ ಸರಸ ಕಂಡು ಮನೆಯವರು ಶಾಕ್ ಆಗಿದ್ದಾರೆ. ಇವರಿಬ್ಬರ ಬಣ್ಣ ಬಯಲಾಗುತ್ತಿದ್ದಂತೆ ಹಣ, ಆಭರಣ ಕದ್ದು ಗಣೇಶ್ ಜೊತೆ ಶಾಂತ ಪರಾರಿಯಾಗಿದ್ದಾಳೆ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement