
ಕೋಲ್ಕತ್ತಾ: RG ಕರ್ ಮೆಡಿಕಲ್ ಕಾಲೇಜು ಅತ್ಯಾಚಾರ ಕೊಲೆ ಪ್ರಕರಣ ಮಾಸುವ ಮುನ್ನವೇ ಅಂತಹುದೇ ಮತ್ತೊಂದು ದಾರುಣ ಘಟನೆ ಕೊಲ್ಕತಾದಲ್ಲಿ ವರದಿಯಾಗಿದ್ದು, ಈ ಬಾರಿ ಕಾನೂನು ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಗಳು ಪೈಶಾಚಿಕತೆ ಮೆರೆದಿದ್ದಾರೆ.
ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನಲ್ಲಿ ಬುಧವಾರ ತಡರಾತ್ರಿ ಭದ್ರತಾ ಕೊಠಡಿಯಲ್ಲಿ 24 ವರ್ಷದ ಕೋಲ್ಕತ್ತಾ ಕಾಲೇಜು ವಿದ್ಯಾರ್ಥಿನಿಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿದ್ದು, ಇದೀಗ ಈ ಸಂಬಂಧ ಸಂತ್ರಸ್ಥ ಯುವತಿ ನೀಡಿದ್ದ ದೂರಿನ ಅಂಶಗಳು ಬಯಲಾಗಿವೆ. ದೂರಿನಲ್ಲಿ ಯುವತಿ ತನ್ನ ಮೇಲೆ ದುಷ್ಕರ್ಮಿಗಳು ಹೇಗೆ ದೌರ್ಜನ್ಯ ನಡೆಸಿದರು ಎಂಬುದನ್ನು ವಿವರಿಸಿದ್ದು ಮಾತ್ರವಲ್ಲದೇ ತನ್ನ ಮೇಲೆ ಅತ್ಯಾಚಾರವಾಗುತ್ತಿರುವುದನ್ನು ಇಬ್ಬರು ಪುರುಷರು ನೋಡುತ್ತಾ ನಿಂತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಟ
ಗುರುವಾರ ಸಂಜೆ ಸಲ್ಲಿಸಿದ ದೂರಿನಲ್ಲಿ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗದ ಸಭೆಯ ನಂತರ ಸಂಜೆ 7.30 ಕ್ಕೆ 'ಜೆ', 'ಎಂ' ಮತ್ತು 'ಪಿ' ಎಂಬ ಮೊದಲಕ್ಷರಗಳಿಂದ ಮಾತ್ರ ಗುರುತಿಸಲ್ಪಟ್ಟ ಮೂವರು ಪುರುಷರು ತನ್ನನ್ನು ಏಕಾಂಗಿಯಾಗಿಸಿ ಹೊತ್ತೊಯ್ದರು. ಈ ವೇಳೆ ಕಾಲೇಜಿನ ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ಹೊರಹೋಗುವಂತೆ ಬೆದರಿಸಿದರು. ಬಳಿಕ ಭದ್ರತಾ ರೂಮಿನಲ್ಲಿ ನನ್ನನ್ನು ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದರು ಎಂದು ಸಂತ್ರಸ್ಥ ಯುವತಿ ಹೇಳಿದ್ದಾರೆ.
ನನ್ನ ಬಟ್ಟೆ ಬಿಚ್ಚಿ Rape ಮಾಡುವುದನ್ನು ನೋಡುತ್ತಾ ನಿಂತಿದ್ದರು
ಇನ್ನು ತನ್ನ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಇಬ್ಬರು ಪುರುಷರು ವೀಕ್ಷಿಸುತ್ತಿದ್ದರು. ನಾನು ಪ್ರತಿದಾಳಿ ನಡೆಸಿದೆ... ನಾನು ಅಳುತ್ತಾ ಅವನನ್ನು ಹೋಗಲು ಬಿಡುವಂತೆ ಕೇಳಿದೆ... ನಾನು ಅವನ ಪಾದಗಳನ್ನು ಮುಟ್ಟಿ ನನ್ನನ್ನು ಬಿಟ್ಟು ಬಿಡಲು ಕೇಳಿದೆ. ಆದರೆ ಅವನು ನನ್ನನ್ನು ಹೋಗಲು ಬಿಡಲಿಲ್ಲ... ಅವನು ಲೈಂಗಿಕ ಕ್ರಿಯೆ ನಡೆಸುವ ಉದ್ದೇಶದಿಂದ ನನ್ನನ್ನು ಒತ್ತಾಯಿಸಲು ಪ್ರಯತ್ನಿಸಿದನು. ನಾನು ಅವನನ್ನು ಹಿಂದಕ್ಕೆ ತಳ್ಳುತ್ತಲೇ ಇದ್ದೆ. ನನ್ನನ್ನು ಹೋಗಲು ಬಿಡುವಂತೆ ಕೇಳಿಕೊಂಡೆ. ನಾನು ಇದನ್ನು ಮಾಡಲು ಸಾಧ್ಯವಿಲ್ಲ, ನನಗೆ ಗೆಳೆಯನಿದ್ದಾನೆ ಮತ್ತು ನಾನು ಅವನನ್ನು ಪ್ರೀತಿಸುತ್ತಿದ್ದೇನೆ' ಎಂದು ನಾನು ಹೇಳಿದೆ. ಎಂದು ಯುವತಿ ದೂರಿನಲ್ಲಿ ಹೇಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
'ನನಗೆ ಪ್ಯಾನಿಕ್ ಅಟ್ಯಾಕ್ ಆಗಿತ್ತು'
ದಾಳಿಯ ಸಮಯದಲ್ಲಿ ತನಗೆ ಪ್ಯಾನಿಕ್ ಅಟ್ಯಾಕ್ ಆಯಿತು ಮತ್ತು ಇನ್ಹೇಲರ್ ಗಾಗಿ ಬೇಡಿಕೊಂಡೆ. ನನ್ನ ಉಸಿರಾಟ ಅಸ್ತವ್ಯಸ್ತವಾಗಿತ್ತು. ಉಸಿರಾಟದ ತೊಂದರೆ ಇತ್ತು. ಅದಾಗ್ಯೂ ದುಷ್ಕರ್ಮಿಗಳು ನನ್ನ ಬಿಡಲಿಲ್ಲ. ಈ ವೇಳೆ ನಾನು 'ಜೆ' 'ಎಂ' ಮತ್ತು 'ಪಿ' ಅವರನ್ನು ನಾನು ಸಹಾಯ ಕೇಳಿದೆ. ಆದರೆ ಅವರು ನನಗೆ ಸಹಾಯ ಮಾಡಲಿಲ್ಲ. ನಂತರ ನಾನು ಅವರಿಗೆ ಇನ್ಹೇಲರ್ ತರಲು ಹೇಳಿದೆ... 'ಎಂ' ಅದನ್ನು ತಂದು ಕೊಟ್ಟ. ನಾನು ಅದನ್ನು ತೆಗೆದುಕೊಂಡ ಬಳಿಕ ನನ್ನ ಉಸಿರಾಟ ಸಾಮಾನ್ಯ ಪರಿಸ್ಥಿತಿಗೆ ಬಂತು. ನಂತರ ಹೊರಗೆ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಈ ವೇಳೆ ಅವರು ನನ್ನ ಹಿಡಿದು ದಾಳಿ ಮುಂದವರೆಸಿದರು.
ಮುಖ್ಯ ದ್ವಾರವನ್ನು ಲಾಕ್ ಮಾಡಲಾಗಿತ್ತು, "ಮತ್ತು ಗಾರ್ಡ್ ಅಸಹಾಯಕನಾಗಿದ್ದನು ಮತ್ತು ಸಹಾಯ ಮಾಡಲಿಲ್ಲ. ನಂತರ ನನ್ನನ್ನು ಗಾರ್ಡ್‌ನ ಕೋಣೆಗೆ ಕೂಡಿಹಾಕಲಾಯಿತು (ಗಾರ್ಡ್ ಅನ್ನು ಹೊರಗೆ ಕಳುಹಿಸಲಾಗಿತು) ಅಲ್ಲಿ "'ಜೆ' ನನ್ನ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಲು ಪ್ರಾರಂಭಿಸಿದನು. ನಾನು ಜಗಳವಾಡಿದಾಗ ಅವನು ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಿದನು... ಎಂದು ಹೇಳಿದ್ದಾರೆ.
ಇದೇ ವೇಳೆ ಸಂತ್ರಸ್ಥೆ ದುಷ್ಕರ್ಮಿಗಳಿಗೆ ತನ್ನ ಮೇಲಾದ ಅತ್ಯಾಚಾರದ ವಿಚಾರವನ್ನು ನನ್ನ ಬಾಯ್ ಫ್ರೆಂಡ್ ಮತ್ತು ಕುಟುಂಬಸ್ಥರಿಗೆ ತಿಳಿಸದಂತೆ ಮನವಿ ಕೂಡ ಮಾಡಿದ್ದರು ಎಂದು ದೂರಿನಲ್ಲಿ ಹೇಳಿದ್ದಾರೆ.
'ಹಾಕಿ ಸ್ಟಿಕ್‌ನಿಂದ ತಲೆಗೆ ಹೊಡೆದರು'
ಇದೇ ವೇಳೆ "'ಜೆ' ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡುತ್ತಿದ್ದ... 'ಎಂ' ಮತ್ತು 'ಪಿ' ನಿಂತು ಎಲ್ಲವನ್ನೂ ನೋಡುತ್ತಿದ್ದರು..." ಲೈಂಗಿಕ ದೌರ್ಜನ್ಯ ಮುಂದುವರಿದಾಗ ಹಾಕಿ ಸ್ಟಿಕ್‌ನಿಂದ ತನ್ನ ತಲೆಗೆ ಹೊಡೆದರು. ಬಳಿಕ ರಾತ್ರಿ 10.50 ಕ್ಕೆ, ತನ್ನನ್ನು ಬಿಡುಗಡೆ ಮಾಡಿದರು.
ಈ ವೇಳೆ ಈ ವಿಚಾರ ಯಾರಿಗಾದರೂ ತಿಳಿಸಿದರೆ ಕೊಂದು ಹಾಕುವುದಾಗಿ ಎಚ್ಚರಿಸಿದರು. ಆದರೆ ಇಂದು ನಾನು ನನ್ನ ನಿರ್ಧಾರ ತೆಗೆದುಕೊಂಡೆ... ನನಗೆ ನ್ಯಾಯ ಬೇಕು. ಕಾನೂನು ವಿದ್ಯಾರ್ಥಿನಿಯಾಗಿ, ನಾನು ಈಗ ಬಲಿಪಶು ಮತ್ತು ಸಾಧ್ಯವಾದಷ್ಟು ಬೇಗ ನ್ಯಾಯ ಸಿಗಬೇಕೆಂದು ನಾನು ಬಯಸುತ್ತೇನೆ..." ಎಂದು ಸಂತ್ರಸ್ಥೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement