Manojit Mishra  is associated with the Trinamool Chhatra Parishad.
ಪ್ರಮುಖ ಆರೋಪಿ ಮನೋಜಿತ್ ಮಿಶ್ರಾ

ಕೋಲ್ಕತ್ತಾ: ಕಾನೂನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ; TMC ಕಾರ್ಯಕರ್ತ, ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರ ಬಂಧನ

ಬಂಧಿತರಲ್ಲಿ ಒಬ್ಬರ ಕಾನೂನು ಕಾಲೇಜಿನ ಮಾಜಿ ವಿದ್ಯಾರ್ಥಿ, ಉಳಿದ ಇಬ್ಬರು ಅದೇ ಸಂಸ್ಥೆಯ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳು.
Published on

ಕೋಲ್ಕತ್ತಾ: ಕಸ್ಬಾದಲ್ಲಿರುವ ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನ ಆವರಣದೊಳಗೆ ಕಾನೂನು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಸಂತ್ರಸ್ತೆಯ ದೂರಿನ ಪ್ರಕಾರ, ಈ ಘಟನೆ ಜೂನ್ 25 ಬುಧವಾರ ಸಂಜೆ 7:30 ರಿಂದ ರಾತ್ರಿ 10:50 ರ ನಡುವೆ ನಡೆದಿದೆ.

ಬಂಧಿತರಲ್ಲಿ ಒಬ್ಬರ ಕಾನೂನು ಕಾಲೇಜಿನ ಮಾಜಿ ವಿದ್ಯಾರ್ಥಿ, ಉಳಿದ ಇಬ್ಬರು ಅದೇ ಸಂಸ್ಥೆಯ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳು. ಆರೋಪಿಗಳಲ್ಲಿ ಇಬ್ಬರನ್ನು ಗುರುವಾರ ಸಂಜೆ ಬಂಧಿಸಲಾಗಿದ್ದು, ಮೂರನೆಯವರನ್ನು ಮಧ್ಯರಾತ್ರಿಯ ಸುಮಾರಿಗೆ ಬಂಧಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಕಾಲೇಜಿನ ಮಾಜಿ ವಿದ್ಯಾರ್ಥಿ ಮನೋಜಿತ್ ಮಿಶ್ರಾ (31) ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ, ಜೈಬ್ ಅಹ್ಮದ್ (19) ಮತ್ತು ಪ್ರಮಿತ್ ಮುಖೋಪಾಧ್ಯಾಯ (20) ಬಂಧಿತ ಆರೋಪಿಗಳಾಗಿದ್ದಾರೆ.

ಮನೋಜಿತ್ ಮಿಶ್ರಾ ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವಾದ ತೃಣಮೂಲ ಛತ್ರ ಪರಿಷತ್ (TMCP) ಜೊತೆ ಸಂಬಂಧ ಹೊಂದಿದ್ದಾನೆ. ಆತನ ಫೇಸ್‌ಬುಕ್ ಪ್ರೊಫೈಲ್ ನಲ್ಲಿ TMCP ಯ ದಕ್ಷಿಣ ಕೋಲ್ಕತ್ತಾ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಎಂದು ಬರೆದುಕೊಂಡಿದ್ದಾನೆ. ಆತ ಅಲಿಪೋರ್ ನ್ಯಾಯಾಲಯದಲ್ಲಿ ಕ್ರಿಮಿನಲ್ ವಕೀಲನಾಗಿಯೂ ಕಾರ್ಯನಿರ್ವಹಿಸುತ್ತಿದ್ದಾನೆ. ಇತರ ಇಬ್ಬರು ಆರೋಪಿಗಳು ಸಹ ಟಿಎಂಸಿಪಿಯೊಂದಿಗೆ ಸಂಬಂಧ ಹೊಂದಿದ್ದಾರೆ.

Manojit Mishra  is associated with the Trinamool Chhatra Parishad.
ಶ್ರೀನಗರ: 45 ವರ್ಷದ ಮಹಿಳೆ ಮೇಲೆ ಗ್ಯಾಂಗ್ ರೇಪ್, ಕೊಲೆ: ಕಣಿವೆಯಲ್ಲಿ ವ್ಯಾಪಕ ಆಕ್ರೋಶ!

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಟಿಎಂಸಿಪಿ ರಾಜ್ಯ ಅಧ್ಯಕ್ಷ ತೃಣಂಕೂರ್ ಭಟ್ಟಾಚಾರ್ಯ, “ತೃಣಮೂಲ ಪಕ್ಷದ ಯಾರೇ ಆದರೂ ಈ ಘಟನೆಯಲ್ಲಿ ಭಾಗಿಯಾಗಿರಲಿ ಅಥವಾ ಇಲ್ಲದಿರಲಿ, ಸೂಕ್ತ ಕ್ರಮ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಆರೋಪಿತ ವ್ಯಕ್ತಿ ಪ್ರಸ್ತುತ ಕಾಲೇಜಿನ ಉದ್ಯೋಗಿ, ಆತ ವಿದ್ಯಾರ್ಥಿ ಪರಿಷತ್ತಿನೊಂದಿಗೆ ಸಂಬಂಧ ಹೊಂದಿಲ್ಲ. ಈ ಘಟನೆ ಮತ್ತು ಆರೋಪ ನಿಜವಾಗಿದ್ದರೆ, ಅವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆ ಕೊಡಿಸಲು ಟಿಎಂಸಿ ಹೋರಾಟ ನಡೆಸುತ್ತದೆ ಎಂದಿದ್ದಾರೆ. ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಏತನ್ಮಧ್ಯೆ, ರಾಷ್ಟ್ರೀಯ ಮಹಿಳಾ ಆಯೋಗವು ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿದ್ದು, 72 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಕೋಲ್ಕತ್ತಾ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com