
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC)ಯ ಇಬ್ಬರು ಹಿರಿಯ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಕಲ್ಯಾಣ್ ಬ್ಯಾನರ್ಜಿ ಮತ್ತೊಮ್ಮೆ ಬಹಿರಂಗವಾಗಿ ಮುಖಾಮುಖಿಯಾಗಿದ್ದಾರೆ. ಕೋಲ್ಕತ್ತಾ ಕಾನೂನು ಕಾಲೇಜು ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಮಮತಾ ಬ್ಯಾನರ್ಜಿ ಅವರ ವಿವಾದಾತ್ಮಕ ಹೇಳಿಕೆಗಳ ನಂತರ ಈ ಜಗಳ ಮುನ್ನೆಲೆಗೆ ಬಂದಿದೆ. ಆದರೆ ಈಗ ವಿವಾದ ವೈಯಕ್ತಿಕ ಆರೋಪಗಳಿಗೆ ತಲುಪಿದೆ. ಕಲ್ಯಾಣ್ ಬ್ಯಾನರ್ಜಿ, 'ಅವಳು ತನ್ನ 40 ವರ್ಷದ ದಾಂಪತ್ಯವನ್ನೇ ಮುರಿದುಕೊಂಡಿದ್ದು ಈಗ ನನಗೆ ನೈತಿಕತೆಯ ಪಾಠ ಮಾಡುತ್ತಿದ್ದಾಳೆ' ಎಂದು ಹೇಳಿದರು.
ಕಲ್ಯಾಣ್ ಬ್ಯಾನರ್ಜಿ ಮಹುವಾ ಮೊಯಿತ್ರಾ ಅವರ ವೈವಾಹಿಕ ಜೀವನದ ಮೇಲೆ ನೇರವಾಗಿ ದಾಳಿ ಮಾಡಿದ್ದು 'ಮಹುವಾ ತನ್ನ ಫಸ್ಟ್ ನೈಟ್ ನಂತರ ನನ್ನೊಂದಿಗೆ ಹೋರಾಡಲು ಹಿಂತಿರುಗಿದ್ದಾಳೆ. ನನ್ನನ್ನು ಸ್ತ್ರೀ ದ್ವೇಷಿ ಎಂದು ಕರೆದಿದ್ದಾಳೆಯೇ? ಅವಳು 40 ವರ್ಷದ ದಾಂಪತ್ಯವನ್ನು ಮುರಿದು 65 ವರ್ಷದ ವ್ಯಕ್ತಿಯನ್ನು ಮದುವೆಯಾದಳು. ಅವಳು ಆ ಮಹಿಳೆಯನ್ನು ನೋಯಿಸಲಿಲ್ಲವೇ? ಎಂದು ಪ್ರಶ್ನಿಸಿದರು.
ಮಹುವಾ ಮೊಯಿತ್ರಾ ಮಾಜಿ ಬಿಜೆಡಿ ಸಂಸದ ಪಿನಾಕಿ ಮಿಶ್ರಾ ಅವರನ್ನು ವಿವಾಹವಾಗಿದ್ದಾರೆ. 'ನೀತಿ ಉಲ್ಲಂಘನೆಗಾಗಿ ಸಂಸತ್ತಿನಿಂದ ಹೊರಹಾಕಲ್ಪಟ್ಟ ಸಂಸದೆ ನನಗೆ ಜ್ಞಾನೋದಯ ನೀಡುತ್ತಿದ್ದಾರೆ! ಆಕೆ ದೊಡ್ಡ ಸ್ತ್ರೀ ದ್ವೇಷಿ. ಅವಳಿಗೆ ತಮ್ಮ ಭವಿಷ್ಯ ಮತ್ತು ಹಣವನ್ನು ಹೇಗೆ ಗಳಿಸಬೇಕೆಂದು ಮಾತ್ರ ತಿಳಿದುಕೊಂಡಿದ್ದಾರೆ ಎಂದು ಕಲ್ಯಾಣ್ ಬ್ಯಾನರ್ಜಿ ಹೇಳಿದರು.
ಕೋಲ್ಕತ್ತಾ ಕಾನೂನು ಕಾಲೇಜಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕಲ್ಯಾಣ್ ಬ್ಯಾನರ್ಜಿ, ಅತ್ಯಾಚಾರ ಯಾಕೆ ಆಯಿತು? ಅಂತಹ ಜನರೊಂದಿಗೆ ಸುತ್ತಾಡುವವರು ಯಾರೊಂದಿಗೆ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ಯೋಚಿಸಬೇಕು. ಇಲ್ಲದಿದ್ದರೆ ಹೀಗೆ ಆಗುತ್ತೆ ಎಂದು ಹೇಳಿದ್ದರು. ಈ ಹೇಳಿಕೆಗೆ ತೀವ್ರ ಟೀಕೆ ಎದುರಾಯಿತು. ಇದನ್ನು ಸಂತ್ರಸ್ತೆಯನ್ನು ಅವಮಾನಿಸುವುದು ಮತ್ತು ಸ್ತ್ರೀ ದ್ವೇಷಿ ಎಂದು ಟೀಕಿಸಿದ್ದರು.
Advertisement