
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಜೌರಿ ಬಳಿಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಟೆರರಿಸ್ಟ್ ಗೈಡ್ ನನ್ನು (ಭಯೋತ್ಪಾದಕರ ಮಾರ್ಗದರ್ಶಿ) ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ನಾಲ್ವರು ಜೈಶ್-ಎ-ಮೊಹಮ್ಮದ್ (JEM)ಉಗ್ರರೊಂದಿಗೆ ಭಾರಿ ಶಸಾಸ್ತ್ರಗಳೊಂದಿಗೆ ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಮೊಹಮ್ಮದ್ ಆರಿಫ್ ಎಂಬಾತನನ್ನು ಭಾನುವಾರ ಸೇನಾಪಡೆಗಳು ಬಂಧಿಸಿವೆ. ಉಳಿದ ಭಯೋತ್ಪಾದಕರು ಗಾಯಗೊಂಡು, ಪಾಕಿಸ್ತಾನದ ಕಡೆಗೆ ಕಾಲ್ಕಿತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ (POK) ದತೋಟೆ ಗ್ರಾಮದ ನಿವಾಸಿ ಆರಿಫ್ ಅವರನ್ನುಗಂಭೀರ್ ಪ್ರದೇಶದ ಫಾರ್ವರ್ಡ್ ಹಜುರಾ ಪೋಸ್ಟ್‌ನಿಂದ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುನ್ಸೂಚನೆ ಪಡೆಗಳು ಶಂಕಿತ ಭಯೋತ್ಪಾದಕರ ಅನುಮಾನಾಸ್ಪದ ಚಲನವಲನಗಳನ್ನು ಪತ್ತೆ ಹಚ್ಚಿದ ನಂತರ 20 ವರ್ಷದ ಆರಿಫ್ ನನ್ನು ಸೆರೆ ಹಿಡಿಯಲಾಗಿದೆ. ಇತರ ನಾಲ್ವರು ಭಯೋತ್ಪಾದಕರು ಬಂಡೆಯಿಂದ ಜಿಗಿದು ಪಾಕಿಸ್ತಾನದ ಕಡೆಗೆ ಕಾಲ್ಕಿತ್ತಿದ್ದಾರೆ. ಪಾಕಿಸ್ತಾದ ಪೋಸ್ಟ್ ಹತ್ತಿರದಲ್ಲಿಯೇ ಇದುದ್ದರಿಂದ ಸೇನಾಪಡೆ ಉಗ್ರರ ವಿರುದ್ಧ ಗುಂಡಿನ ದಾಳಿ ನಡೆಸಲಿಲ್ಲ. ಅವರು ಗಾಯಗೊಂಡಿರುವುದನ್ನು ಡ್ರೋನ್ ದೃಶ್ಯಾವಳಿಗಳು ತೋರಿಸುವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಆರಿಫ್ ಬಳಿಯಿದ್ದ ಮೊಬೈಲ್ ಫೋನ್ ಮತ್ತು ರೂ. 20,000 ಪಾಕಿಸ್ತಾನಿ ಕರೆನ್ಸಿ ವಶಕ್ಕೆ ಪಡೆಯಲಾಗಿದೆ. ಭಾರತದೊಳಗೆ ನುಸುಳಲು ಪಾಕಿಸ್ತಾನದ ಸೇನೆಯ ಪರವಾಗಿ ಉಗ್ರರಿಗೆ ನೆರವಾಗುತ್ತಿರುವುದಾಗಿ ಆತ ವಿಚಾರಣೆ ವೇಳೆ ತಿಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Advertisement