ಸಾರ್ವಜನಿಕರು ನಾಯಕರ ಬಳಿ ಅಹವಾಲು ಸಲ್ಲಿಸುವ ಮೂಲಕ 'ಭಿಕ್ಷೆ' ಬೇಡುತ್ತಾರೆ: ವಿವಾದ ಸೃಷ್ಟಿಸಿದ ಬಿಜೆಪಿ ಸಚಿವ

ಬಿಟ್ಟಿ ಯೋಜನೆಗಳ ಮೇಲಿನ ಅತಿಯಾದ ಅವಲಂಬನೆ ಸಮಾಜವನ್ನು ಬಲಿಷ್ಠಗೊಳಿಸುವ ಬದಲು ದುರ್ಬಲಗೊಳಿಸುತ್ತದೆ. ಭಿಕ್ಷುಕರ ಈ ಸೈನ್ಯವು ಸಮಾಜವನ್ನು ಬಲಿಷ್ಠಗೊಳಿಸುತ್ತಿಲ್ಲ, ಅದನ್ನು ದುರ್ಬಲಗೊಳಿಸುತ್ತಿದೆ.
ಪ್ರಹ್ಲಾದ್ ಪಟೇಲ್
ಪ್ರಹ್ಲಾದ್ ಪಟೇಲ್
Updated on

ಭೋಪಾಲ್: ಸಾರ್ವಜನಿಕರು ಸಲ್ಲಿಸುವ ಅಹವಾಲುಗಳನ್ನು 'ಭಿಕ್ಷಾಟನೆ' ಎಂದು ಕರೆದಿರುವ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಪ್ರಹ್ಲಾದ್ ಪಟೇಲ್ ಶನಿವಾರ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಮಧ್ಯಪ್ರದೇಶದ ರಾಜಗಢ ಜಿಲ್ಲೆಯಲ್ಲಿ ವೀರಾಂಗನಾ ರಾಣಿ ಅವಂತಿಬಾಯಿ ಲೋಧಿ ಅವರ ಪ್ರತಿಮೆಯ ಅನಾವರಣ ಸಮಾರಂಭದಲ್ಲಿ ಅವರು ನೀಡಿದ ಹೇಳಿಕೆಗಳು ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಕಾರಣವಾಗಿವೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಧ್ಯಪ್ರದೇಶ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು, ಜನರು ಸರ್ಕಾರದಿಂದ ಭಿಕ್ಷೆ ಬೇಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ನಾಯಕರು ಸಿಕ್ಕಾಗಲೆಲ್ಲ ಅವರಿಗೆ ಮನವಿ ಪತ್ರವನ್ನು ನೀಡುತ್ತಲೇ ಇರುತ್ತಾರೆ. ವೇದಿಕೆ ಮೇಲೆ ಹಾರ ಹಾಕಿ, ಕೈಗೆ ಮನವಿ ಪತ್ರವನ್ನು ಕೊಡುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ಕೇಳುವ ಬದಲು ಕೊಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಿ. ನಾನು ನಿಮಗೆ ಭರವಸೆ ನೀಡುತ್ತೇನೆ. ಇದು ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ ಮತ್ತು ಸುಸಂಸ್ಕೃತ ಸಮಾಜವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.

'ಅಲ್ಲದೆ ಬಿಟ್ಟಿ ಯೋಜನೆಗಳ ಮೇಲಿನ ಅತಿಯಾದ ಅವಲಂಬನೆ ಸಮಾಜವನ್ನು ಬಲಿಷ್ಠಗೊಳಿಸುವ ಬದಲು ದುರ್ಬಲಗೊಳಿಸುತ್ತದೆ. 'ಭಿಕ್ಷುಕರ ಈ ಸೈನ್ಯವು ಸಮಾಜವನ್ನು ಬಲಿಷ್ಠಗೊಳಿಸುತ್ತಿಲ್ಲ, ಅದನ್ನು ದುರ್ಬಲಗೊಳಿಸುತ್ತಿದೆ. ಉಚಿತ ಯೋಜನೆಗಳ ಕಡೆಗಿನ ಆಕರ್ಷಣೆಯು ಧೈರ್ಯಶಾಲಿ ಮಹಿಳೆಯರ ಗೌರವದ ಸಂಕೇತವಲ್ಲ. ಹುತಾತ್ಮರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ನಿಜವಾಗಿಯೂ ಅವರನ್ನು ಗೌರವಿಸಿದಂತಾಗುತ್ತದೆ' ಎಂದು ಹೇಳಿದರು.

'ಯಾರಾದರೂ ಭಿಕ್ಷೆ ಬೇಡಿರುವ ಹುತಾತ್ಮರ ಹೆಸರನ್ನು ನೀವು ಹೇಳಬಲ್ಲಿರಾ? ಹಾಗಿದ್ದಲ್ಲಿ, ನನಗೆ ತಿಳಿಸಿ. ಇದರ ಹೊರತಾಗಿಯೂ, ನಾವು ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ, ಭಾಷಣ ಮಾಡುತ್ತೇವೆ ಮತ್ತು ಮುಂದುವರಿಯುತ್ತೇವೆ. ನರ್ಮದಾ ಪರಿಕ್ರಮ ಯಾತ್ರಿಕನಾಗಿ, ನಾನು ಭಿಕ್ಷೆ ಕೇಳುತ್ತೇನೆ. ಆದರೆ, ಅದು ನನಗಾಗಿ ಕೇಳಿದ್ದಲ್ಲ. ಪ್ರಹ್ಲಾದ್ ಪಟೇಲ್‌ಗೆ ಏನನ್ನಾದರೂ ನೀಡಿದ್ದೇವೆಂದು ಯಾರೊಬ್ಬರೂ ಹೇಳಲು ಸಾಧ್ಯವಿಲ್ಲ' ಎಂದು ತಿಳಿಸಿದರು.

ಪ್ರಹ್ಲಾದ್ ಪಟೇಲ್
ಖಜಾನೆಯಲ್ಲಿ ಹಣವಿಲ್ಲವೇ? ಸಿಎಂಗೆ ಅನುಭವದ ಕೊರತೆ ಇದೆಯೇ?: ಗ್ಯಾರಂಟಿ ಯೋಜನೆ ಕುರಿತು ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ

ಪಟೇಲ್ ಅವರ ಈ ಹೇಳಿಕೆಗೆ ಪ್ರತಿಪಕ್ಷ ಕಾಂಗ್ರೆಸ್‌ ತೀವ್ರವಾಗಿ ಟೀಕಿಸಿದೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೀತು ಪಟ್ವಾರಿ ಅವರು ಸಚಿವರನ್ನು ಟೀಕಿಸಿದ್ದು, ಅವರ ಹೇಳಿಕೆಗಳು ರಾಜ್ಯದ ಜನರಿಗೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದಾರೆ.

'ಬಿಜೆಪಿಯ ದುರಹಂಕಾರವು ಈಗ ಸಾರ್ವಜನಿಕರನ್ನು ಭಿಕ್ಷುಕರು ಎಂದು ಕರೆಯುವ ಮಟ್ಟಕ್ಕೆ ತಲುಪಿದೆ! ಇದು ಕಷ್ಟಗಳ ಜೊತೆ ಹೋರಾಡುವವರ ಭರವಸೆ ಮತ್ತು ಕಣ್ಣೀರಿಗೆ ಮಾಡುವ ಅವಮಾನವಾಗಿದೆ. ಅವರು ಚುನಾವಣೆಯ ಮೊದಲು ಸುಳ್ಳು ಭರವಸೆಗಳನ್ನು ನೀಡುತ್ತಾರೆ ಮತ್ತು ನಂತರ ಅದನ್ನು ಈಡೇರಿಸಲು ನಿರಾಕರಿಸುತ್ತಾರೆ. ಜನರು ಅವರನ್ನು ನೆನಪಿಸಿದಾಗ, ನಾಚಿಕೆಯಿಲ್ಲದೆ ಅವರನ್ನು ಭಿಕ್ಷುಕರು ಎನ್ನುತ್ತಾರೆ! ಅವರು ನೆನಪಿಟ್ಟುಕೊಳ್ಳಲಿ, ಶೀಘ್ರದಲ್ಲೇ ಈ ಬಿಜೆಪಿ ನಾಯಕರು ಮತದ ಭಿಕ್ಷೆ ಕೇಳಲು ಬರುತ್ತಾರೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com