ಮಹಾರಾಷ್ಟ್ರ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಸೇನಾ-ಯುಬಿಟಿಯ ಭಾಸ್ಕರ್ ಜಾಧವ್ ನೇಮಕ

ಈ ಕುರಿತ ಪತ್ರವನ್ನು ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸಲ್ಲಿಸಲಾಗಿದೆ.
ಭಾಸ್ಕರ್ ಜಾಧವ್
ಭಾಸ್ಕರ್ ಜಾಧವ್
Updated on

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇನಾ-ಯುಬಿಟಿ ಶಾಸಕ ಭಾಸ್ಕರ್ ಜಾಧವ್ ಅವರು ನೇಮಕವಾಗಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ(ಎಲ್‌ಒಪಿ) ಸ್ಥಾನಕ್ಕೆ ಹಕ್ಕು ಮಂಡಿಸಿದ್ದು, ಹಿರಿಯ ಶಾಸಕ ಭಾಸ್ಕರ್ ಜಾಧವ್ ಅವರನ್ನು ಕ್ಯಾಬಿನೆಟ್ ಮಟ್ಟದ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ಸೇನಾ-ಯುಬಿಟಿ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಂಗಳವಾರ ತಿಳಿಸಿದ್ದಾರೆ.

ಈ ಕುರಿತ ಪತ್ರವನ್ನು ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸಲ್ಲಿಸಲಾಗಿದೆ.

ಭಾಸ್ಕರ್ ಜಾಧವ್
ಮಹಾರಾಷ್ಟ್ರ: ಹತ್ಯೆ ಪ್ರಕರಣದಲ್ಲಿ ಆಪ್ತ ಸಹಾಯಕನ ಬಂಧನ; ಸಚಿವ ಸ್ಥಾನಕ್ಕೆ ಧನಂಜಯ ಮುಂಡೆ ರಾಜಿನಾಮೆ

"ಶಿವಸೇನೆ(ಯುಬಿಟಿ) ಎಲ್‌ಒಪಿ ಹುದ್ದೆಗೆ ಹಕ್ಕು ಮಂಡಿಸಿದೆ. ನಾವು ಈ ಬಗ್ಗೆ ಸ್ಪೀಕರ್‌ಗೆ ಪತ್ರ ನೀಡಿದ್ದೇವೆ. ಅವರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನಮಗೆ ವಿಶ್ವಾಸವಿದೆ" ಎಂದು ಜಾಧವ್ ಹೇಳಿದ್ದಾರೆ.

ಬಜೆಟ್ ಅಧಿವೇಶನಕ್ಕೂ ಮುನ್ನ ಎಲ್ಒಪಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಜಾಧವ್ ತಿಳಿಸಿದ್ದಾರೆ.

ಶಿವಸೇನೆ-ಯುಬಿಟಿ ವಿಧಾನಸಭೆಯಲ್ಲಿ 20 ಶಾಸಕರನ್ನು ಹೊಂದಿದ್ದು, ನಂತರ ಕಾಂಗ್ರೆಸ್ (16) ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ-ಶರದ್ಚಂದ್ರ ಪವಾರ್(10) ಶಾಸಕರನ್ನು ಹೊಂದಿದೆ. ಇಲ್ಲಿಯವರೆಗೆ ಕಾಂಗ್ರೆಸ್ ಅಥವಾ ಎನ್ ಸಿಪಿ-ಶರದ್ಚಂದ್ರ ಪವಾರ್ ಅಧಿಕೃತವಾಗಿ ಪ್ರತಿಪಕ್ಷ ಸ್ಥಾನಕ್ಕೆ ಹಕ್ಕು ಮಂಡಿಸಿರಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com