ಉತ್ತರ ಪ್ರದೇಶ, ರಾಜಸ್ತಾನಕ್ಕೂ Nandini ಲಗ್ಗೆ: ಉತ್ತರ ಭಾರತ ಮಾರುಕಟ್ಟೆಗೆ ಕರ್ನಾಟಕದ ಹಾಲು!

ಇದು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಉತ್ತರ ಭಾರತದ ಮಾರುಕಟ್ಟೆಗೆ ವಿಸ್ತರಿಸುವ ಯೋಜನೆಯ ಭಾಗವಾಗಿದೆ.
Nandini to enter UP, Rajasthan dairy market by month-end
ಉತ್ತರ ಪ್ರದೇಶ ಮತ್ತು ರಾಜಸ್ತಾನದಲ್ಲಿ ನಂದಿನ ಹಾಲು ಉತ್ಪನ್ನಗಳು
Updated on

ನವದೆಹಲಿ: ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿ ಮಾರುಕಟ್ಟೆ ಪ್ರವೇಶಿಸಿದ್ದ ಕರ್ನಾಟಕದ ನಂದಿನಿ ಉತ್ಪನ್ನಗಳು ಇದೀಗ ಉತ್ತರ ಪ್ರದೇಶ, ರಾಜಸ್ತಾನ ಮಾರುಕಟ್ಟೆಗಳಿಗೂ ಲಗ್ಗೆ ಇಟ್ಟಿದೆ.

ಈ ತಿಂಗಳಾಂತ್ಯದಲ್ಲಿ ಉತ್ತರ ಭಾರತದ ಮಾರುಕಟ್ಟೆಗೆ ನಂದಿನಿ ಉತ್ಪನ್ನಗಳು ಪ್ರವೇಶಿಸಲಿದೆ. ಇದು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಉತ್ತರ ಭಾರತದ ಮಾರುಕಟ್ಟೆಗೆ ವಿಸ್ತರಿಸುವ ಯೋಜನೆಯ ಭಾಗವಾಗಿದೆ. ಅಲ್ಲಿ ಅದರ ಬ್ರ್ಯಾಂಡ್ ನಂದಿನಿ, ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ ಅಮುಲ್ ಜೊತೆ ಸ್ಪರ್ಧಿಸುತ್ತದೆ.

ಈ ತಿಂಗಳ ಅಂತ್ಯದ ವೇಳೆಗೆ ನಂದಿನಿ ಉತ್ಪನ್ನಗಳು ಉತ್ತರ ಉತ್ತರ ಪ್ರದೇಶ ಮತ್ತು ರಾಜಸ್ತಾನದ ಜೈಪುರದಲ್ಲಿ ಲಭ್ಯವಿರುತ್ತವೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಕೆಎಂಎಫ್ ನವೆಂಬರ್ 21, 2024 ರಂದು ರಾಷ್ಟ್ರ ರಾಜಧಾನಿಯಲ್ಲಿ ನಂದಿನಿ ಹಾಲು ಮತ್ತು ಮೊಸರನ್ನು ಬಿಡುಗಡೆ ಮಾಡಿತ್ತು. ಈಗ ದೆಹಲಿಯ ಗಡಿ ಪ್ರದೇಶಗಳಲ್ಲೂ ತನ್ನ ಅಸ್ತಿತ್ವವನ್ನು ವಿಸ್ತರಿಸುವತ್ತ ಗಮನಹರಿಸುತ್ತಿದೆ.

Nandini to enter UP, Rajasthan dairy market by month-end
ನಂದಿನಿ ಹಾಲಿನ ಮಾರಾಟ ದರ ಏರಿಕೆ ನಿಶ್ಚಿತ: ಹಾಲು ಉತ್ಪಾದಕರಿಗೆ 650 ಕೋಟಿ ರೂ ಪ್ರೋತ್ಸಾಹ ಧನ ಬಾಕಿ ಶೀಘ್ರದಲ್ಲೆ ಬಿಡುಗಡೆ

ಕೆಎಂಎಫ್ ಈಗ ದೆಹಲಿಯ ಬಳಿಯ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಹೊಸ ಹಾಲು ಪ್ಯಾಕೇಜಿಂಗ್ ಘಟಕವನ್ನು ಪ್ರಾರಂಭಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ, 'ಆಗ್ರಾ, ಮಥುರಾ ಮತ್ತು ಮೀರತ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಂದಿನಿ ಹಾಲನ್ನು ವಿತರಿಸಲು ಒಕ್ಕೂಟ ಯೋಜಿಸಿದೆ. ಮಾರ್ಚ್ 16 ರಿಂದ ಈ ಪ್ರದೇಶಗಳಲ್ಲಿ ಮಾರಾಟವನ್ನು ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಜಸ್ಥಾನದ ಜೈಪುರದಲ್ಲಿಯೂ ಮಾರಾಟವು ಈ ತಿಂಗಳೊಳಗೆ ಪ್ರಾರಂಭವಾಗಲಿದೆ" ಎಂದು ಹೇಳಿದರು.''

ಅಂತೆಯೇ "ಕೆಎಂಎಫ್ ನಂದಿನಿಯ ಮಾರಾಟವನ್ನು ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸುತ್ತಿಲ್ಲ, ಬದಲಾಗಿ ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಜಾಲವನ್ನು ಸ್ಥಿರವಾಗಿ ವಿಸ್ತರಿಸುತ್ತಿದೆ. ಒಕ್ಕೂಟವು ಈಗಾಗಲೇ ದೆಹಲಿಯಲ್ಲಿ ನಂದಿನಿ ಸ್ಯಾಚೆಟ್ ಹಾಲು, ಮೊಸರು ಮತ್ತು ಮಜ್ಜಿಗೆಯನ್ನು ಪರಿಚಯಿಸಿದೆ ಮತ್ತು ಹತ್ತಿರದ ನಗರಗಳಿಗೆ ಮತ್ತಷ್ಟು ವಿಸ್ತರಿಸುವ ಕೆಲಸ ಮಾಡುತ್ತಿದೆ" ಎಂದು ಶಿವಸ್ವಾಮಿ ಹೇಳಿದರು.

ಅಂದಹಾಗೆ ಭಾರತದ ಎರಡನೇ ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆಯಾದ ಕೆಎಂಎಫ್, ತನ್ನ ಸದಸ್ಯ ಜಿಲ್ಲಾ ಹಾಲು ಒಕ್ಕೂಟಗಳ ಮೂಲಕ 26 ಲಕ್ಷಕ್ಕೂ ಹೆಚ್ಚು ಡೈರಿ ರೈತರಿಂದ ಹಾಲನ್ನು ಸಂಗ್ರಹಿಸಿ ಸಂಸ್ಕರಿಸುತ್ತದೆ. ಕಳೆದ ಐದು ದಶಕಗಳಿಂದ, ಇದು ನಂದಿನಿ ಬ್ರಾಂಡ್ ಅಡಿಯಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com