
ಜೈಪುರ: ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಗುರುವಾರ ವೇಗವಾಗಿ ಬಂದ ಕಾರು, ಟ್ರಕ್‌ಗೆ ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಆರು ಜನ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಬು ರಸ್ತೆಯ ಕಿವ್ರಾಲಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಮೌಂಟ್ ಅಬುವಿನ ವೃತ್ತ ಅಧಿಕಾರಿ ಗೋಮರಾಮ್ ಅವರು ಹೇಳಿದ್ದಾರೆ.
ಮೃತರನ್ನು ನಾರಾಯಣ್ ಪ್ರಜಾಪತ್, ಅವರ ಪತ್ನಿ ಪೋಷಿ ದೇವಿ, ಮಗ ದುಷ್ಯಂತ್, ಚಾಲಕ ಕಲುರಾಮ್ ಮತ್ತು ಇತರ ಇಬ್ಬರು ಎಂದು ಗುರುತಿಸಲಾಗಿದೆ.
ಮೃತ ದುರ್ದೈವಿಗಳು ಅಹಮದಾಬಾದ್ ನಿವಾಸಿಗಳು ಎಂದು ಗೋಮರಾಮ್ ಅವರು ತಿಳಿಸಿದ್ದಾರೆ.
Advertisement