WD: ಮೊದಲ ಬಾರಿ ಕೊಲೆ ಮಾಡುವ ಮಹಿಳೆಯರಿಗೆ ಕಾನೂನಿನಲ್ಲಿ ಶಿಕ್ಷೆಯಿಂದ ವಿನಾಯಿತಿ ಕೊಡಿ- ರಾಷ್ಟ್ರಪತಿಗಳಿಗೆ NCP ವಿಚಿತ್ರ ಬೇಡಿಕೆ!
ನವದೆಹಲಿ: ಮಹಿಳೆಯರು ಮೊದಲ ಬಾರಿ ಕೊಲೆ ಮಾಡಿದರೆ ಅವರಿಗೆ ಕಾನೂನಲ್ಲಿ ಶಿಕ್ಷೆಯಿಂದ ವಿನಾಯಿತಿ ನೀಡಲು ಒಪ್ಪಿಗೆ ಸೂಚಿಸುವಂತೆ NCP ಪಕ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವಿಚಿತ್ರ ಬೇಡಿಕೆ ಸಲ್ಲಿಸಿವೆ.
NCP ಪಕ್ಷದ ಮಹಿಳಾ ಘಟಕ ಈ ರೀತಿಯ ವಿಚಿತ್ರ ಬೇಡಿಕೆ ಮುಂದಿಟ್ಟಿದ್ದು, ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕಾಗಿ ಮಹಿಳೆಯರು ಮೊದಲ ಬಾರಿಗೆ ಕೊಲೆ ಮಾಡಿದರೆ ಅಂತಹವರಿಗೆ ಶಿಕ್ಷೆ ಕೊಡಬಾರದು, ಶಿಕ್ಷೆಯಿಂದ ವಿನಾಯಿತಿ ನೀಡಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದೆ.
ಶರದ್ ಪವಾರ್ ನೇತೃತ್ವದ ಪಕ್ಷದ ಮಹಿಳಾ ವಿಭಾಗದ ಅಧ್ಯಕ್ಷೆ ರೋಹಿಣಿ ಖಡ್ಸೆ, ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಬರೆದ ಪತ್ರದಲ್ಲಿ, ಮಹಿಳೆಯರು ದಬ್ಬಾಳಿಕೆಯ ಮನಸ್ಥಿತಿ, ಅತ್ಯಾಚಾರಿ ಮನಸ್ಥಿತಿ ಮತ್ತು ನಿಷ್ಕ್ರಿಯ ಕಾನೂನು ಮತ್ತು ಸುವ್ಯವಸ್ಥೆಯ ಪ್ರವೃತ್ತಿಯನ್ನು ಕೊಲ್ಲಲು ಬಯಸುತ್ತಾರೆ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ಇತ್ತೀಚೆಗೆ 12 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಎತ್ತಿ ತೋರಿಸುತ್ತಾ, ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿವೆ ಎಂದು ಖಡ್ಸೆ ಹೇಳಿದರು.
"ಎಲ್ಲಾ ಮಹಿಳೆಯರ ಪರವಾಗಿ, ಒಂದು ಕೊಲೆ ಮಾಡುವುದಕ್ಕಾಗಿ (ಶಿಕ್ಷೆಯಿಂದ) ವಿನಾಯಿತಿ ನೀಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ" ಎಂದು ಖಡ್ಸೆ ಪತ್ರದಲ್ಲಿ ತಿಳಿಸಿದ್ದಾರೆ. ಮಹಿಳೆಯರು ದಬ್ಬಾಳಿಕೆಯ ಮನಸ್ಥಿತಿ, ಅತ್ಯಾಚಾರಿ ಮನಸ್ಥಿತಿ ಮತ್ತು ನಿಷ್ಕ್ರಿಯ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಕೊಲ್ಲಲು ಬಯಸುತ್ತಾರೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅಪಹರಣ ಮತ್ತು ಕೌಟುಂಬಿಕ ಹಿಂಸಾಚಾರ ಸೇರಿದಂತೆ ಅಪರಾಧಗಳು ಮಹಿಳೆಯರ ವಿರುದ್ಧ ನಡೆಯುತ್ತಿರುವುದರಿಂದ ಭಾರತವು ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ದೇಶವಾಗಿದೆ ಎಂದು ಹೇಳುವ ಸಮೀಕ್ಷಾ ವರದಿಯನ್ನು ಸಹ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.
"ಗಂಭೀರವಾಗಿ ಯೋಚಿಸಿದ ನಂತರ ನಮ್ಮ ಬೇಡಿಕೆಯನ್ನು ಈಡೇರಿಸಲಾಗುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಖಡ್ಸೆ ಪತ್ರದಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ