ED officials were attacked allegedly by Congress workers in Chhattisgarh
ಬಘೇಲ್ ನಿವಾಸದಲ್ಲಿ ಇಡಿ ಅಧಿಕಾರಿಗಳ ಮೇಲೆ ದಾಳಿonline desk

ಭೂಪೇಶ್ ಬಘೇಲ್ ಮನೆಯಲ್ಲಿ ಶೋಧ ನಡೆಸಿದ್ದಕ್ಕೆ ED ಅಧಿಕಾರಿಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ದಾಳಿ!

ದಾಳಿಕೋರರು ಕಾಂಗ್ರೆಸ್ ಕಾರ್ಯಕರ್ತರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಬಘೇಲ್ ನಿವಾಸದಲ್ಲಿ ನಡೆದ ಶೋಧದಿಂದ ಅಸಮಾಧಾನಗೊಂಡಿದ್ದ ಗುಂಪು ಈ ಕೃತ್ಯ ಎಸಗಿದೆ.
Published on

ನವದೆಹಲಿ: ಮದ್ಯ ಹಗರಣ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಭೂಪೇಶ್ ಭಘೇಲ್ ಪುತ್ರ ತನಿಖೆ ಎದುರಿಸುತ್ತಿದ್ದು, ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರ ನಿವಾಸದಲ್ಲಿ ಶೋಧ ನಡೆಸಿದ್ದ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ಮೇಲೆ ಜನರ ಗುಂಪೊಂದು ದಾಳಿ ನಡೆಸಿದೆ.

ದಾಳಿಕೋರರು ಕಾಂಗ್ರೆಸ್ ಕಾರ್ಯಕರ್ತರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಬಘೇಲ್ ನಿವಾಸದಲ್ಲಿ ನಡೆದ ಶೋಧದಿಂದ ಅಸಮಾಧಾನಗೊಂಡಿದ್ದ ಗುಂಪು ಈ ಕೃತ್ಯ ಎಸಗಿದೆ.

ED officials were attacked allegedly by Congress workers in Chhattisgarh
ಮದ್ಯ ಹಗರಣ ಕೇಸ್: ಛತ್ತೀಸ್‌ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಪುತ್ರ ಚೈತನ್ಯ ಬಘೇಲ್ ನಿವಾಸ ಮೇಲೆ ED ದಾಳಿ

ಉಪ ನಿರ್ದೇಶಕ ಶ್ರೇಣಿಯ ED ಅಧಿಕಾರಿಯ ಕಾರಿನ ಮೇಲೂ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ದಾಳಿಯ ದೃಶ್ಯಗಳಲ್ಲಿ ದೊಡ್ಡ ಗುಂಪು ED ಅಧಿಕಾರಿಗಳನ್ನು ಸುತ್ತುವರೆದು ಅವರನ್ನು ಥಳಿಸುತ್ತಿರುವುದು ಸೆರೆಯಾಗಿದೆ.

ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್, ಸಹಾಯಕ ಲಕ್ಷ್ಮಿ ನಾರಾಯಣ್ ಬನ್ಸಾಲ್ ಅಲಿಯಾಸ್ ಪಪ್ಪು ಬನ್ಸಾಲ್ ಮತ್ತು ಇತರ ಕೆಲವರ ನಿವಾಸದಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (PMLA) ನಿಬಂಧನೆಗಳ ಅಡಿಯಲ್ಲಿ ಶೋಧ ನಡೆಸಲಾಗಿದೆ.

ಚೈತನ್ಯ ಬಘೇಲ್ ಭಿಲಾಯಿ ನಿವಾಸದಲ್ಲಿ ತಮ್ಮ ತಂದೆಯೊಂದಿಗೆ ವಾಸವಿದ್ದಾರೆ. ಚೈತನ್ಯ ಬಘೇಲ್ ಮದ್ಯ ಹಗರಣದ ಪ್ರಮುಖ ಫಲಾನುಭವಿ ಎಂದು ಶಂಕಿಸಲಾಗಿದೆ. ರಾಜ್ಯದಲ್ಲಿ ಸುಮಾರು 14-15 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com