ಗುಜರಾತ್: ವೇಗವಾಗಿ ಕಾರು ಚಲಾಯಿಸಿ ಮಹಿಳೆ ಕೊಂದು ರಸ್ತೆ ಮಧ್ಯೆ 'ಓಂ ನಮಃ ಶಿವಾಯ' ಘೋಷಣೆ; LLB ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿತ, Video!

ಗುಜರಾತ್ ರಾಜ್ಯದ ವಡೋದರದ ಕರೇಲಿಬಾಗ್ ಪ್ರದೇಶದಲ್ಲಿ ಕಳೆದ ರಾತ್ರಿ LLB ವಿದ್ಯಾರ್ಥಿಯೊಬ್ಬ ವೇಗವಾಗಿ ಕಾರು ಚಲಾಯಿಸಿ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಗುಜರಾತ್: ವೇಗವಾಗಿ ಕಾರು ಚಲಾಯಿಸಿ ಮಹಿಳೆ ಕೊಂದು ರಸ್ತೆ ಮಧ್ಯೆ 'ಓಂ ನಮಃ ಶಿವಾಯ' ಘೋಷಣೆ; LLB ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿತ, Video!
Updated on

ವಡೋದರ: ಗುಜರಾತ್ ರಾಜ್ಯದ ವಡೋದರದ ಕರೇಲಿಬಾಗ್ ಪ್ರದೇಶದಲ್ಲಿ ಕಳೆದ ರಾತ್ರಿ LLB ವಿದ್ಯಾರ್ಥಿಯೊಬ್ಬ ವೇಗವಾಗಿ ಕಾರು ಚಲಾಯಿಸಿ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.

ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಪಘಾತದ ನಂತರ ಪಾನಮತ್ತ ಚಾಲಕನ ಕ್ರೂರ ಅನುಚಿತ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿದ್ದು ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ಅಪಘಾತ ಮಧ್ಯರಾತ್ರಿ 12.30ರ ಸುಮಾರಿಗೆ ಅಮ್ರಪಾಲಿ ಚಾರ್ ಮುಕ್ತಾನಂದ ಕ್ರಾಸ್ ರಸ್ತೆಯಲ್ಲಿ ನಡೆದಿತ್ತು. ಕಪ್ಪು ಕಾರಿನಲ್ಲಿ ವೇಗವಾಗಿ ಬಂದ ಎಂಎಸ್ ವಿಶ್ವವಿದ್ಯಾಲಯದ 20 ವರ್ಷದ ಕಾನೂನು ವಿದ್ಯಾರ್ಥಿ ರಕ್ಷಿತ್ ರವೀಶ್ ಚೌರಾಸಿಯಾ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದನು.

ಅಪಘಾತದ ನಂತರ ರಕ್ಷಿತ್ ರವೀಶ್ ಕುಡಿದ ಮತ್ತಿನಲ್ಲಿ ತೀವ್ರವಾಗಿ ಹಾನಿಗೊಳಗಾದ ವಾಹನದಿಂದ ಹೊರಗೆ ಬಂದು ಪಶ್ಚಾತ್ತಾಪವಿಲ್ಲದೆ ದುರ್ವರ್ತನೆ ತೋರಿಸಿದ್ದನು. ಇನ್ನೊಂದು ಸುತ್ತು, ಇನ್ನೊಂದು ಸುತ್ತು ಎಂದು ಕೂಗುತ್ತಾ ಓಂ ನಮಃ ಶಿವಾಯ ಎಂದು ಕೂಗುತ್ತಿರುವುದು ಕಾಣಬಹುದು. ಸ್ಥಳೀಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಆತನನ್ನು ವಶಕ್ಕೆ ಪಡೆದರು. ಅಪಘಾತದ ವೇಳೆ ರಕ್ಷಿತ್ ರವೀಶ್ ಚೌರಾಸಿಯಾ ಜೊತೆಗಿದ್ದ ಆತನ ಸಹಚರ ಪ್ರಾಂಶು ಚೌಹಾಣ್ ನನ್ನು ಸಹ ಬಂಧಿಸಲಾಗಿದೆ.

ಗುಜರಾತ್: ವೇಗವಾಗಿ ಕಾರು ಚಲಾಯಿಸಿ ಮಹಿಳೆ ಕೊಂದು ರಸ್ತೆ ಮಧ್ಯೆ 'ಓಂ ನಮಃ ಶಿವಾಯ' ಘೋಷಣೆ; LLB ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿತ, Video!
ಪಶ್ಚಿಮ ಬಂಗಾಳ: ಮೂರು ರಿಕ್ಷಾಗಳಿಗೆ ಕಾರು ಡಿಕ್ಕಿ; ಭೀಕರ ಸರಣಿ ಅಪಘಾತದಲ್ಲಿ ಏಳು ಮಂದಿ ಸಾವು

ಉತ್ತರ ಪ್ರದೇಶದ ವಾರಣಾಸಿಯ ಮೂಲದ ಚೌರಾಸಿಯಾ ಕಾನೂನು ವಿದ್ಯಾರ್ಥಿನಿಯಾಗಿದ್ದು, ಇಲ್ಲಿನ ಪಿಜಿ ವಸತಿಗೃಹದಲ್ಲಿ ವಾಸವಾಗಿದ್ದನು. ಪ್ರತ್ಯಕ್ಷದರ್ಶಿಯೊಬ್ಬರು ಈ ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com