
ವಡೋದರ: ಗುಜರಾತ್ ರಾಜ್ಯದ ವಡೋದರದ ಕರೇಲಿಬಾಗ್ ಪ್ರದೇಶದಲ್ಲಿ ಕಳೆದ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ. ಪಾನಮತ್ತ ವಿದ್ಯಾರ್ಥಿ ಚಾಲಕನ ಅಜಾಗರೂಕತೆಯಿಂದ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಪಘಾತದ ನಂತರ ಪಾನಮತ್ತ ಚಾಲಕನ ಕ್ರೂರ ಅನುಚಿತ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿದೆ. ಈ ಅಪಘಾತ ಮಧ್ಯರಾತ್ರಿ 12.30ರ ಸುಮಾರಿಗೆ ಅಮ್ರಪಾಲಿ ಚಾರ್ ಮುಕ್ತಾನಂದ ಕ್ರಾಸ್ ರಸ್ತೆಯಲ್ಲಿ ಸಂಭವಿಸಿದೆ. ಕಪ್ಪು ಕಾರಿನಲ್ಲಿ ವೇಗವಾಗಿ ಬಂದ ಚಾಲಕ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಗುದ್ದಿದ್ದಲ್ಲದೆ ರಸ್ತೆ ಬದಿ ನಿಂತ ಹಲವರಿಗೆ ಗಾಯವಾಗಿದೆ.
ಹೇಮಾಲಿಬೆನ್ ಪಟೇಲ್ ಎಂಬ ಮಹಿಳೆ ಸ್ಕೂಟರ್ ಚಲಾಯಿಸುತ್ತಿದ್ದರು. ಅವರಿಗೆ ಚಾಲಕ ಡಿಕ್ಕಿ ಹೊಡೆದಿದ್ದರಿಂದ ಸ್ಕೂಟರ್ ನಿಂದ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟರೆ ನಾಲ್ವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪಶ್ಚಾತ್ತಾಪವಿಲ್ಲದೆ ದುರ್ವರ್ತನೆ
ಅಪಘಾತದ ನಂತರ, ಚಾಲಕ ಕುಡಿದ ಮತ್ತಿನಲ್ಲಿ ತೀವ್ರವಾಗಿ ಹಾನಿಗೊಳಗಾದ ವಾಹನದಿಂದ ಹೊರಗೆ ಬಂದು ಪಶ್ಚಾತ್ತಾಪವಿಲ್ಲದೆ ದುರ್ವರ್ತನೆ ತೋರಿಸಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದು ಸುತ್ತು, ಇನ್ನೊಂದು ಸುತ್ತು ಎಂದು ಕೂಗುತ್ತಾ ಓಂ ನಮಃ ಶಿವಾಯ ಎಂದು ಹೇಳುತ್ತಿರುವುದನ್ನು ಕಾಣಬಹುದು. ಸ್ಥಳೀಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಆತನನ್ನು ವಶಕ್ಕೆ ಪಡೆದರು. ಈತ ಎಂಎಸ್ ವಿಶ್ವವಿದ್ಯಾಲಯದ 20 ವರ್ಷದ ಕಾನೂನು ವಿದ್ಯಾರ್ಥಿ ರಕ್ಷಿತ್ ರವೀಶ್ ಚೌರಾಸಿಯಾ ಎಂದು ಗುರುತಿಸಲಾಗಿದ್ದು, ಘಟನೆಯ ಸಮಯದಲ್ಲಿ ಅವನೊಂದಿಗಿದ್ದನೆಂದು ನಂಬಲಾದ ಅವನ ಸಹಚರ ಪ್ರಾಂಶು ಚೌಹಾಣ್ ನನ್ನು ಸಹ ಬಂಧಿಸಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯ ಮೂಲದ ಚೌರಾಸಿಯಾ ಕಾನೂನು ವಿದ್ಯಾರ್ಥಿನಿಯಾಗಿದ್ದು, ಇಲ್ಲಿನ ಪಿಜಿ ವಸತಿಗೃಹದಲ್ಲಿ ವಾಸವಾಗಿದ್ದನು ಎಂದು ಮೊಮಯಾ ಸುದ್ದಿಗಾರರಿಗೆ ತಿಳಿಸಿದರು.
ಕಾರು ಸ್ನೇಹಿತ ಮಿತ್ ಚೌಹಾಣ್ ಗೆ ಸೇರಿದ್ದಾಗಿದ್ದು, ಸಹ ಚಾಲಕನ ಸೀಟಿನಲ್ಲಿ ಕುಳಿತಿದ್ದನು.
ಪ್ರತ್ಯಕ್ಷದರ್ಶಿಯೊಬ್ಬರು ಸೆರೆಹಿಡಿದ ವೀಡಿಯೊದಲ್ಲಿ, ಚೌಹಾಣ್ ಕಾರಿನಿಂದ ಹೊರಬಂದು, ಮುಂಭಾಗದ ಭಾಗವು ಜಖಂಗೊಂಡಿದ್ದು, ಅಪಘಾತಕ್ಕೆ ಚೌರಾಸಿಯಾ ಅವರನ್ನೇ ದೂಷಿಸುತ್ತಿದ್ದಾನೆ. ಚೌರಾಸಿಯಾ ಇನ್ನೊಂದು ಸುತ್ತು ಇನ್ನೊಂದು ಸುತ್ತು ಎಂದು ನಿರಂತರವಾಗಿ ಕೂಗುತ್ತಿದ್ದಾನೆ.
ಚೌರಾಸಿಯಾನನ್ನು ಪಕ್ಕದಲ್ಲಿದ್ದ ಜನರು ಥಳಿಸುತ್ತಿರುವುದನ್ನು ಕಾಣಬಹುದು, ನಂತರ ಅವರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
Advertisement