ತಮಿಳು ಚಿತ್ರ ಗಳನ್ನು ಹಿಂದಿಗೆ ಡಬ್ ಮಾಡಬೇಡಿ : ತಮಿಳುನಾಡಿನ ಹಿಂದಿ ವಿರೋಧಿ ನಿಲುವಿಗೆ ಪವನ್ ಕಲ್ಯಾಣ್ ಟೀಕೆ

ಸಂಸ್ಕೃತವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸುತ್ತಾರೆ. ದಕ್ಷಿಣದ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂದು ಅವರು ಹೇಳುತ್ತಾರೆ. ಆದರೆ ಎಲ್ಲಾ ಭಾರತೀಯ ಭಾಷೆಗಳು ನಮ್ಮ ಸಂಸ್ಕೃತಿಯ ಭಾಗವಲ್ಲವೇ? ಎಂದು ಅವರು ಪ್ರಶ್ನಿಸಿದರು.
pavan kalyan
ಪವನ್ ಕಲ್ಯಾಣ್
Updated on

ಅಮರಾವತಿ: ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಸಂಬಂಧಿಸಿದಂತೆ ತಮಿಳುನಾಡು ಹಾಗೂ ಕೇಂದ್ರ ಸರ್ಕಾರದ ನಡುವಣ ವಾಗ್ವಾದಕ್ಕೆ ಪ್ರತಿಕ್ರಿಯೆ ನೀಡಿರುವ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, 'ದೇಶಕ್ಕೆ ಕೇವಲ ಎರಡಲ್ಲ, ಬಹುಭಾಷೆಗಳ ಅಗತ್ಯವಿದೆ' ಎಂದು ಹೇಳಿದ್ದಾರೆ.

'ದೇಶದ ಭಾಷಾ ವೈವಿಧ್ಯತೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ' ಎಂದು ಅವರು ಕೇಂದ್ರ ಸರ್ಕಾರಕ್ಕೆ ಬಂಬಲ ಸೂಚಿಸಿದ್ದಾರೆ. ಜನಸೇನಾ ಪಕ್ಷದ 12ನೇ ಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ದೇಶಕ್ಕೆ ತಮಿಳು ಸೇರಿದಂತೆ ಬಹುಭಾಷೆಗಳ ಅಗತ್ಯವಿದೆ. ಆ ಮೂಲಕ ಏಕತೆ ಹಾಗೂ ಪ್ರೀತಿಯನ್ನು ಪಸರಿಸಬಹುದಾಗಿದೆ' ಎಂದು ಹೇಳಿದ್ದಾರೆ. ತ್ರಿಭಾಷಾ ಸೂತ್ರವನ್ನು ಖಂಡಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿದ್ದರು.

ಈ ಸಂಬಂಧ ಡಿಎಂಕೆ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಪವಣ್ ಕಲ್ಯಾಣ್, 'ಅವರು ಹಿಂದಿ ಭಾಷೆಯನ್ನು ವಿರೋಧಿಸುತ್ತಾರೆ. ಆದರೆ ಹಣಕಾಸಿನ ಲಾಭಕ್ಕಾಗಿ ತಮಿಳು ಚಲನಚಿತ್ರಗಳನ್ನು ಹಿಂದಿಯಲ್ಲಿ ಡಬ್ಬಿಂಗ್ ಮಾಡುತ್ತಾರೆ. ಅವರಿಗೆ ಬಾಲಿವುಡ್‌ನಿಂದ ದುಡ್ಡು ಬೇಕಿದೆ. ಇದೆಂಥಹ ನ್ಯಾಯ' ಎಂದು ಪ್ರಶ್ನಿಸಿದ್ದಾರೆ. 'ವಿವಿಧತೆಯಲ್ಲಿ ಏಕತೆಯೇ ನನ್ನ ಸಿದ್ಧಾಂತ ಎಂದಿರುವ ಕಲ್ಯಾಣ್, ಸನಾತನ ಧರ್ಮ ನನ್ನ ರಕ್ತದಲ್ಲಿ ಅಡಗಿದೆ' ಎಂದು ಹೇಳಿದ್ದಾರೆ.

ನಾವು ಮಾತನಾಡುವಾಗ, ಸಂಸ್ಕೃತವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸುತ್ತಾರೆ. ದಕ್ಷಿಣದ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂದು ಅವರು ಹೇಳುತ್ತಾರೆ. ಆದರೆ ಎಲ್ಲಾ ಭಾರತೀಯ ಭಾಷೆಗಳು ನಮ್ಮ ಸಂಸ್ಕೃತಿಯ ಭಾಗವಲ್ಲವೇ? ಎಂದು ಅವರು ಪ್ರಶ್ನಿಸಿದರು.

pavan kalyan
ಬಜೆಟ್ ಮೇಲೆ ರೂಪಾಯಿ ಲೋಗೋವನ್ನು ತಮಿಳು ಅಕ್ಷರದೊಂದಿಗೆ ಬದಲಾಯಿಸಿದ ತಮಿಳುನಾಡು ಸರ್ಕಾರ!

ಹಾಗಿದ್ದಲ್ಲಿ, ಅವರು ತಮಿಳು ಚಲನಚಿತ್ರಗಳನ್ನು ಹಿಂದಿಯಲ್ಲಿ ಏಕೆ ಡಬ್ ಮಾಡುತ್ತಾರೆ? ಅವರು ಉತ್ತರ ಪ್ರದೇಶ, ಬಿಹಾರ ಮತ್ತು ಛತ್ತೀಸ್‌ಗಢದಂತಹ ಹಿಂದಿ ಮಾತನಾಡುವ ರಾಜ್ಯಗಳಿಂದ ಹಣ ಸಂಪಾದಿಸಲು ಬಯಸುತ್ತಾರೆ. ಜೊತೆಗೆ ಅವರು ಬಿಹಾರದ ಕಾರ್ಮಿಕರನ್ನು ಅವಲಂಬಿಸಿದ್ದಾರೆ. ಆದರೂ, ಅವರು ಹಿಂದಿಯನ್ನು ತಿರಸ್ಕರಿಸುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಇದು ಹೇಗೆ ನ್ಯಾಯಯುತವಾಗಿದೆ?" ಅವರು ಹೇಳಿದರು.

ಯಾರಾದರೂ ಕೋಪಗೊಂಡಾಗಲೆಲ್ಲಾ ದೇಶವನ್ನು ವಿಭಜಿಸಲು ಯತ್ನಿಸುತ್ತಾರೆ, ಭಾರತ ಒಂದು ಕೇಕ್ ತುಂಡೇ ಎಂದು ಅವರು ಪ್ರಶ್ನಿಸಿದ್ದಾರೆ, ಯಾರಾದರೂ ಭಾರತದ ಸಮಗ್ರತೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರೆ, ಅದನ್ನು ರಕ್ಷಿಸಲು ನನ್ನಂತಹ ಕೋಟ್ಯಂತರ ಜನರು ಎದ್ದು ನಿಲ್ಲುತ್ತಾರೆ, ದೇಶಕ್ಕಾಗಿ ಸಾಯಲು ಸಿದ್ಧವಿದ್ದೇನೆ' ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com