Gold price: ಮತ್ತೆ ಗಗನ ಕುಸುಮವಾದ ಚಿನ್ನ! ರಾಕೆಟ್ ವೇಗದಲ್ಲಿ ದರ ಏರಿಕೆ, ಆಭರಣ ಉದ್ಯಮದಲ್ಲಿ ತಳಮಳ!

ಮುಂಬೈನ ಸ್ಪಾಟ್ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ 10 ಗ್ರಾಂಗೆ ರೂ. 90,500 ರಿಂದ ರೂ. 90,800 ರೂಪಾಯಿಗಳವರೆಗೂ ವಹಿವಾಟಾಗುತ್ತಿದೆ.
Gold Rate jumps
ಚಿನ್ನonline desk
Updated on

ಮುಂಬೈ: ಚಿನ್ನದ ದರ ದಿನದಿಂದ ದಿನಕ್ಕೆ ಭಾರಿ ಏರಿಕೆ ಕಣುತ್ತಿದ್ದು, ಜನ ಸಾಮಾನ್ಯರಿಗೆ ಗಗನ ಕುಸುಮವಾಗಿ ಪರಿಣಮಿಸುತ್ತಿದೆ.

ಮುಂಬೈನ ಸ್ಪಾಟ್ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ 10 ಗ್ರಾಂಗೆ ರೂ. 90,500 ರಿಂದ ರೂ. 90,800 ರೂಪಾಯಿಗಳವರೆಗೂ ವಹಿವಾಟಾಗುತ್ತಿದೆ.

ಶುಕ್ರವಾರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿ ಪ್ರತಿ ಔನ್ಸ್‌ಗೆ $3,000 ದಾಟಿದ ಅಂತರರಾಷ್ಟ್ರೀಯ ಚಿನ್ನದ ಬೆಲೆಗಳು ದೇಶೀಯ ಬೇಡಿಕೆಯ ಮೇಲೆ ಪರಿಣಾಮ ಬೀರಿವೆ.

ಮದುವೆ ಸೀಸನ್ ಈಗಾಗಲೇ ಪ್ರಾರಂಭವಾಗಿರುವುದರ ನಡುವೆಯೇ ಚಿನ್ನದ ಬೆಲೆ ಏರುಗತಿಯಲ್ಲಿದ್ದು, ಬೇಡಿಕೆ ಮರಳುತ್ತದೆಯೇ ಎಂದು ಆಭರಣ ಉದ್ಯಮ ಚರ್ಚಿಸುತ್ತಿದೆ. ಪ್ರಸ್ತುತ ಹೆಚ್ಚಿನ ಬೆಲೆಗಳಲ್ಲಿ, ಪರಿಮಾಣದ ದೃಷ್ಟಿಯಿಂದ ಚಿನ್ನದ ಅತಿದೊಡ್ಡ ಖರೀದಿದಾರ ಸಮುದಾಯವಾಗಿರುವ ಕಡಿಮೆ ಮತ್ತು ಮಧ್ಯಮ-ಆದಾಯದ ಜನರಿಗೆ, ಚಿನ್ನ ಕೈಗೆಟುಕುವಂತಿಲ್ಲ ಎಂದು ಲಂಡನ್ ಮೂಲದ ಬುಲಿಯನ್ ಸಂಶೋಧನಾ ಸಂಸ್ಥೆ ಮೆಟಲ್ಸ್ ಫೋಕಸ್‌ನ ಪ್ರಧಾನ ಸಲಹೆಗಾರ ಚಿರಾಗ್ ಶೇತ್ ಹೇಳಿದ್ದಾರೆ.

Gold Rate jumps
Gold Bond ಹೂಡಿಕೆ ಮಾಡಿದ್ದವರಿಗೆ RBI ಜಾಕ್ ಪಾಟ್: 3 ಪಟ್ಟು ರಿಟರ್ನ್ಸ್ ಘೋಷಣೆ!

ಐಐಎಂ ಅಹಮದಾಬಾದ್‌ನ ಇಂಡಿಯನ್ ಗೋಲ್ಡ್ ಪಾಲಿಸಿ ಸೆಂಟರ್ 2022 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಶ್ರೀಮಂತರು ಮಾತ್ರ ಚಿನ್ನವನ್ನು ಖರೀದಿಸುತ್ತಾರೆ ಎಂಬ ಸಾಮಾನ್ಯ ಗ್ರಹಿಕೆಗೆ ವ್ಯತಿರಿಕ್ತವಾಗಿ, ಶೇಕಡಾ 56 ರಷ್ಟು ಚಿನ್ನವನ್ನು ವಾರ್ಷಿಕವಾಗಿ ರೂ. 2 ಲಕ್ಷದಿಂದ ರೂ. 10 ಲಕ್ಷದವರೆಗೆ ಗಳಿಸುವ ಜನರು ಖರೀದಿಸಿದ್ದಾರೆ.

2022 ರಿಂದ, ಚಿನ್ನದ ಬೆಲೆ ದ್ವಿಗುಣಗೊಂಡಿದೆ, ಆದರೆ ಈ ವರ್ಗದ ಖರೀದಿದಾರರ ಉಳಿತಾಯವು ದ್ವಿಗುಣಗೊಂಡಿಲ್ಲ, ಹೆಚ್ಚಿನ ಚಿನ್ನವನ್ನು ಖರೀದಿಸುವ ಅವರ ಸಾಮರ್ಥ್ಯವನ್ನು ಚಿನ್ನದ ದರ ಏರಿಕೆ ಕಡಿಮೆ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com