ಬೆಟ್ಟಿಂಗ್ ಆ್ಯಪ್ ಪ್ರಚಾರ: ಪ್ರಕಾಶ್ ರಾಜ್, ದೇವರಕೊಂಡ, ರಾಣಾ ಸೇರಿ 25 ಮಂದಿ ವಿರುದ್ಧ ಪ್ರಕರಣ ದಾಖಲು

ಬೆಟ್ಟಿಂಗ್ ಆಪ್ ಗಳಲ್ಲಿ ಹಣ ಹಾಕಿ ಯುವ ಜನತೆ ನಷ್ಟಕ್ಕೆ ತುತ್ತಾಗಿದ್ದಾರೆ. ಈ ಆಪ್‌ನಲ್ಲಿ ಹಣ ಕಳೆದುಕೊಂಡು ಹಲವು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಟಾಲಿವುಡ್ ನಟರು.
ಟಾಲಿವುಡ್ ನಟರು.
Updated on

ಹೈದರಾಬಾದ್‌: ಬೆಟ್ಟಿಂಗ್‌ ಆ್ಯಪ್ ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ನಟ ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಸೇರಿದಂತೆ ಟಾಲಿವುಡ್'ನ 25 ಕ್ಕೂ ಹೆಚ್ಚು ನಟ- ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಹೋರಾಟಗಾರ ಫಣೀಂದ್ರ ಶರ್ಮಾ ಎಂಬುವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಮಿಯಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಟಾಲಿವುಡ್'ನ ಹಲವು ನಟ-ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತನ್ನು ನೀಡುವ ಮೂಲಕ ಬೆಟ್ಟಿಂಗ್ ಆ್ಯಪ್'ನ್ನು ಪ್ರಚಾರ ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಟ್ಟಿಂಗ್ ಆಪ್ ಗಳಲ್ಲಿ ಹಣ ಹಾಕಿ ಯುವ ಜನತೆ ನಷ್ಟಕ್ಕೆ ತುತ್ತಾಗಿದ್ದಾರೆ. ಈ ಆಪ್‌ನಲ್ಲಿ ಹಣ ಕಳೆದುಕೊಂಡು ಹಲವು ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಟ್ಟಿಂಗ್ ಆಪ್ ಪ್ರಚಾರಕ್ಕೆ ತೆಲಂಗಾಣ ಸರ್ಕಾರ ಈಗಾಗಲೇ ನಿಷೇಧ ಹೇರಿದೆ. ಇದರ ಹೊರತಾಗಿಯೂ ಬೆಟ್ಟಿಂ ಗ್ಆಪ್ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

ಟಾಲಿವುಡ್ ನಟರು.
ಮೈಸೂರು: ಆನ್ ಲೈನ್ ಬೆಟ್ಟಿಂಗ್ ಚಟಕ್ಕೆ ಮೂರು ಬಲಿ; ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಆ್ಯಪ್ ಸುಲಭವಾಗಿ ಲಭ್ಯವಿಲ್ಲದಿದ್ದರೂ, ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ನೀಡಿ, ಜನರನ್ನು ಪ್ರಚೋದಿಸಲಾಗುತ್ತಿದೆ. ಆ್ಯಪ್'ಗಳು ದೊಡ್ಡ ಮೊತ್ತ ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತಿದ್ದು, ಅಂತಿಮವಾಗಿ ಜನರು ಜೂಜಾಟಕ್ಕೆ ವ್ಯಸನಿಯಾಗುವಂತೆ ಕಾರಣವಾಗುತ್ತಿವೆ.

ದೂರು ಹಿನ್ನೆಲೆ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಪ್ರಣೀತಾ, ಲಕ್ಷ್ಮಿ ಮಂಚು ಮತ್ತು ನಿಧಿ ಅಗರ್ವಾಲ್, ಅನನ್ಯ ನಾಗೆಲ್ಲ, ಸಿರಿ ಹನುಮಂತು, ಶ್ರೀಮುಖಿ, ವರ್ಷಿಣಿ ಸೌಂದರರಾಜನ್, ವಸಂತಿ ಕೃಷ್ಣನ್, ಶೋಬಾ ಪಟ್ಟಾನಿ, ಪವನ್ ಪಟ್ಟಾನಿ, ಪವನ್ ಶೆಟ್ಟಿ ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಬಯ್ಯ ಸನ್ನಿ ಯಾದವ್, ಶ್ಯಾಮಲಾ, ಟೇಸ್ಟಿ ತೇಜಾ, ರಿತು ಚೌಧರಿ ಮತ್ತು ಬಂಡಾರು ಶೇಷಾಯನಿ ಸುಪ್ರಿತಾ ಸೇರಿದಂತೆ ಹಲವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ತೆಲಂಗಾಣ ಗೇಮಿಂಗ್ ಕಾಯ್ದೆಯ ಸೆಕ್ಷನ್ 3, 3(ಎ), ಮತ್ತು 4, ಬಿಎನ್‌ಎಸ್‌ನ ಸೆಕ್ಷನ್ 49, ಸೆಕ್ಷನ್ 318(4) ಮತ್ತು 112 ಮತ್ತು ಐಟಿ ಕಾಯ್ದೆಯ ಸೆಕ್ಷನ್ 66-ಡಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com