ಬಿಹಾರ: ರಾಷ್ಟ್ರಗೀತೆಗೂ ಮುನ್ನ ವೇದಿಕೆಯಿಂದ ನಿರ್ಗಮಿಸಿದ ನಿತೀಶ್!

ಕೆಲವು ನಿಮಿಷಗಳ ನಂತರ ಅಧಿಕಾರಿಗಳು 70 ವರ್ಷದ ಮುಖ್ಯಮಂತ್ರಿಗಳನ್ನು ವಾಪಸ್ ಕರೆದುಕೊಂಡು ಬಂದ ನಂತರ ಕಾರ್ಯಕ್ರಮ ಪುನರಾರಂಭವಾಯಿತು.
Nitish Kumar
ನಿತೀಶ್ ಕುಮಾರ್online desk
Updated on

ಪಾಟ್ನ: ಗುರುವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಂತಾರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಗೀತೆಗೆ ಮುಂಚಿತವಾಗಿ ವೇದಿಕೆಯಿಂದ ದಿಢೀರನೆ ನಿರ್ಗಮಿಸಿದ್ದು ಭಾರಿ ಸುದ್ದಿಯಾಗುತ್ತಿದ್ದು ಆಯೋಜಕರಿಗೆ ಅಚ್ಚರಿ ಮೂಡಿಸಿದೆ.

ಕೆಲವು ನಿಮಿಷಗಳ ನಂತರ ಅಧಿಕಾರಿಗಳು 70 ವರ್ಷದ ಮುಖ್ಯಮಂತ್ರಿಗಳನ್ನು ವಾಪಸ್ ಕರೆದುಕೊಂಡು ಬಂದ ನಂತರ ಕಾರ್ಯಕ್ರಮ ಪುನರಾರಂಭವಾಯಿತು.

2025 ರ ಸೆಪಕ್ ಟಕ್ರಾ ವಿಶ್ವಕಪ್ ಪಾಟಲಿಪುತ್ರ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿದ್ದು, 21 ದೇಶಗಳ 300 ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಭಾಗವಹಿಸುತ್ತಿದ್ದಾರೆ. ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ, ರಾಷ್ಟ್ರಗೀತೆಗೆ ಸಮಯವಾಗಿದೆ ಎಂದು ಮಾಡರೇಟರ್ ಘೋಷಿಸಿದ ತಕ್ಷಣ, ಸಿಎಂ ತಮ್ಮ ಸ್ಥಾನದಿಂದ ಎದ್ದು ವೇದಿಕೆಯಿಂದ ಕೆಳಗೆ ನಡೆದಾಗ ಸಂಪುಟ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ದಿಗ್ಭ್ರಮೆಗೊಂಡರು. 74 ವರ್ಷದ ಕುಮಾರ್ ಭಾಗವಹಿಸುವವರ ಕಡೆಗೆ ನಡೆದು "ನಮಸ್ತೆ" ಮತ್ತು ಕೈ ಬೀಸಿದರು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿತ್ತು ಮತ್ತು ಪ್ರಾಣಿಯ ತಲೆಯನ್ನು ಹೋಲುವ ಮುಖವಾಡ ಧರಿಸಿದ ಪ್ರದರ್ಶಕರಲ್ಲಿ ಒಬ್ಬರು ಹಸ್ತಲಾಘವಕ್ಕಾಗಿ ಮುಖ್ಯಮಂತ್ರಿಯ ಬಳಿಗೆ ಬಂದರು.

Nitish Kumar
ಸಿಎಂ ನಿತೀಶ್ ನಿವಾಸದ ಎದುರು "ಪಲ್ಟು ಅಂಕಲ್ ಎಲ್ಲಿ"? ಎಂದು ಕಿರುಚಿದ ಲಾಲು ಪುತ್ರ Tej Pratap Yadav; 4,000 ರೂ ದಂಡ!

ರಾಜ್ಯ ವಿಧಾನಮಂಡಲದಲ್ಲಿ ಅಧಿವೇಶನದಲ್ಲಿ ಸಂತಸದಿಂದ ಕಂಡುಬಂದಿದ್ದ ನಿತೀಶ್ ಕುಮಾರ್ ಈ ಕಾರ್ಯಕ್ರಮದಲ್ಲಿ ಚಿಂತಾಕ್ರಾಂತರಾಗಿದ್ದರು. ಈ ವೇಳೆ ಮುಖವಾಡ ಧರಿಸಿದ್ದ ವ್ಯಕ್ತಿಯನ್ನು ಕಂಡು ಭಯಭೀತರಾಗಿ ಮುಖವಾಡ ತೆಗೆಯುವಂತೆ ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com