
ಲಖನೌ: ಯೂಟ್ಯೂಬ್ ನೋಡಿ ವ್ಯಕ್ತಿಯೊಬ್ಬ ತನಗೆ ತಾನೇ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ತೀವ್ರವಾದ ಹೊಟ್ಟೆನೋವು( ಅಪೆಂಡಿಕ್ಸ್) ನಿಂದ ಪಾರಾಗಲು ಹೇಗೆ ಶಸ್ತ್ರ ಚಿಕಿತ್ಸೆ ಮಾಡಬಹುದು ಎಂಬುದನ್ನು ಯೂಟ್ಯೂಬ್ ನೋಡಿ ತಿಳಿದುಕೊಂಡ 32 ವರ್ಷದ ವೃಂದಾವನದ ವ್ಯಕ್ತಿಯೊಬ್ಬರು ತನಷ್ಟಕ್ಕೆ ತಾನೇ ಹೊಟ್ಟೆಯನ್ನು ಕತ್ತರಿಸಿಕೊಂಡು ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದಾರೆ.
ಹೌದು. ಹಲವು ವರ್ಷಗಳಿಂದ ಅಪೆಂಡಿಸೈಟಿಸ್‌ನಿಂದ ಬಳಲುತ್ತಿದ್ದ ಸುನ್ರಖ್ ಗ್ರಾಮದ ರಾಜಾ ಬಾಬು ಅವರಿಗೆ ಬುಧವಾರ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿದೆ. ಬಳಿಕ ಅವರ ಸೋದರಳಿಯೊಂದಿಗೆ ಆಸ್ಪತ್ರೆಗೆ ಧಾವಿಸಿದ್ದರು.
ಆತ ತನ್ನ ಹೊಟ್ಟೆಯನ್ನು ಕತ್ತರಿಸಿಕೊಳ್ಳಲು ಮಾರುಕಟ್ಟೆಯಿಂದ ಖರೀದಿಸಿದ ಸರ್ಜಿಕಲ್ ಬ್ಲೇಡ್, ಸೂಜಿ ಮತ್ತು ಹೊಲಿಗೆ ದಾರ ಬಳಸಿದ್ದು, ತದನಂತರ ಹೊಟ್ಟೆ ಸುತ್ತ 11 ಹೊಲಿಗೆ ಹಾಕಿದ್ದಾರೆ ಎಂದು ವೃಂದಾವನ ಜಿಲ್ಲಾ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕ ಡಾ.ಶಶಿ ರಂಜನ್ ತಿಳಿಸಿದ್ದಾರೆ.
ಸದ್ಯ ರಾಜು ಬಾಬು ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು 14ನೇ ವಯಸ್ಸಿನಲ್ಲಿಯೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಎನ್ನಲಾಗಿದೆ.
Advertisement