ಯುಟ್ಯೂಬ್ ನೋಡಿ ವಿಮಾನ ನಿರ್ಮಿಸಿದ..!

ವಿಮಾನದಲ್ಲಿ ಹಾರಾಟ ಮಾಡಿ ತಿಳಿದಿಲ್ಲದ ಮತ್ತು ವಿಮಾನ ಹಾರಾಟ ನಡೆಸಿದ ಅನುಭವವೇ ಇಲ್ಲದ ಯುವಕನೊಬ್ಬ ತನ್ನ ಮದುವೆಗೆಂದು ವಿಮಾನವನ್ನು ನಿರ್ಮಿಸಿ, ಅದೇ ವಿಮಾನದಲ್ಲಿ ಮದುವೆಯಾಗಿದ್ದಾನೆ...
ತಾನೇ ನಿರ್ಮಿಸಿದ ವಿಮಾನದೊಂದಿಗೆ ಪೋಸ್ ನೀಡುತ್ತಿರುವ ಜೆಫರು (ಚಿತ್ರಕೃಪೆ:ಇಂಡಿಯಾ ಟುಡೆ)
ತಾನೇ ನಿರ್ಮಿಸಿದ ವಿಮಾನದೊಂದಿಗೆ ಪೋಸ್ ನೀಡುತ್ತಿರುವ ಜೆಫರು (ಚಿತ್ರಕೃಪೆ:ಇಂಡಿಯಾ ಟುಡೆ)
Updated on

ನವದೆಹಲಿ: ವಿಮಾನದಲ್ಲಿ ಹಾರಾಟ ಮಾಡಿ ತಿಳಿದಿಲ್ಲದ ಮತ್ತು ವಿಮಾನ ಹಾರಾಟ ನಡೆಸಿದ ಅನುಭವವೇ ಇಲ್ಲದ ಯುವಕನೊಬ್ಬ ತನ್ನ ಮದುವೆಗೆಂದು ವಿಮಾನವನ್ನು ನಿರ್ಮಿಸಿ, ಅದೇ ವಿಮಾನದಲ್ಲಿ ಮದುವೆಯಾಗಿದ್ದಾನೆ.

ಇಥಿಯೋಪಿಯಾ ಅಸ್ಮೆಲ್ಯಾಶ್ ಜೆಫೆರು ಎಂಬಾತನೇ ತನ್ನದೇ ಆದ ಸ್ವಂತ ವಿಮಾನ ನಿರ್ಮಿಸಿದ್ದು, ವಿಶೇಷವೆಂದರೆ ಈತ ವಿಮಾನ ನಿರ್ಮಾಣಕ್ಕೆ ಯಾವುದೇ ವಿಮಾನ ತಯಾರಿಕಾ ಸಂಸ್ಥೆಯ ಮೊರೆ ಹೋಗಿಲ್ಲ. ಅಥವಾ ಯಾವುದೇ ವಿಮಾನದ ತಂತ್ರಜ್ಞಾನವನ್ನು ಬಳಕೆ ಮಾಡಿಲ್ಲ. ಬದಲಿಗೆ ಇಂಟರ್ ನೆಟ್ ಮೂಲಕ ಯೂಟ್ಯೂಬ್ ನಲ್ಲಿ ವಿಮಾನ ತಯಾರಿಕಾ ವಿಡಿಯೋಗಳನ್ನು ನೋಡಿ ತಾನೇ ವಿಮಾನವನ್ನು ತಯಾರಿಸಿದ್ದಾನೆ. ಜೆಫರು ತನಗೆ ಸಿಕ್ಕ ಗುಜರಿ ವಸ್ತುಗಳನ್ನು ಮತ್ತು ಮರವನ್ನು ಬಳಸಿ ಈ ಲಘು ವಿಮಾನವನ್ನು ನಿರ್ಮಿಸಿದ್ದು, ಕೆಲ ಪ್ರಮುಖ ಭಾಗಗಳನ್ನು ಮಾರುಕಟ್ಟೆಯಲ್ಲಿ ದೊರೆಯುವ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಬಳಸಿ ಈ ವಿಮಾನ ನಿರ್ಮಿಸಿದ್ದಾನೆ.



ವಿಮಾನ ನಿರ್ಮಾಣಕ್ಕೆ ಜೆಫೆರು ಸುಮಾರು 10 ವರ್ಷ ಅಧ್ಯಯನ ಮಾಡಿದ್ದಲ್ಲದೇ ವಿಮಾನ ನಿರ್ಮಾಣಕ್ಕೆಂದೇ 570 ದಿನಗಳ ಕಾಲ ಕೆಲಸ ಮಾಡಿದ್ದಾನೆ.1920-30ರ ದಶಕಗಳಲ್ಲಿ ಅಮೆರಿಕ ಪೈಲಟ್ ತರಬೇತಿಗೆ ಬಳಸುತ್ತಿದ್ದ ಮಾದರಿಯ ವಿಮಾನ ನಿರ್ಮಿಸುವಲ್ಲಿ ಯಶಸ್ವಿಯಾಗಿರುವ ಜೆಫೆರು, ಪೈಲಟ್ ಆಗಬೇಕೆಂಬ ತನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾನೆ.

ವಿಮಾನದ ಲ್ಯಾಂಡಿಂಗ್ ಬಳಿಕ ಮದುವೆಯಾದ

ಇನ್ನು ಜೆಫರು ತಾನು ನಿರ್ಮಿಸಿದ್ದ ವಿಮಾನವನ್ನು ಯಶಸ್ವಿಯಾಗಿ ಹಾರಾಟ ಮಾಡಿ ವಿಮಾನವನ್ನು ಭೂಮಿಗೆ ಲ್ಯಾಂಡಿಂಗ್ ಮಾಡಿದ ಬಳಿಕವೇ ತನ್ನ ಗೆಳತಿ ಸೆಬಲ್ ಬೆಕೆಲೆರನ್ನು ವಿವಾಹವಾಗಿದ್ದಾನೆ. ಇದೇ ನವೆಂಬರ್ 28ರಂದು ಜೆಫರು ವಿಮಾನ ಹಾರಾಟ ನಡೆಸಿದ್ದು, ಅಂದೇ ಇವರಿಬ್ಬರ ಮದುವೆಯಾಗಿದೆ. ಇದಕ್ಕೂ ಮೊದಲು ಒಮ್ಮ ವಿಮಾನದ ಹಾರಾಟ ಪರೀಕ್ಷೆ ನಡೆಸಿದ್ದ ಜೆಫರು ಮೊದಲ ಪ್ರಯತ್ನದಲ್ಲಿ ವಿಫಲನಾಗಿದ್ದ. ಮೊದಲ ಬಾರಿಗೆ ವಿಮಾನ ಹಾರಾಟ ಮಾಡುವಾಗ ವಿಮಾನದ ಪ್ರೊಪೆಲ್ಲರ್ ಮುರಿದು ಜೆಫುರ ಹಾರಾಟ ಕನಸು ನುಚ್ಚುನೂರಾಗಿತ್ತು. ಆದರೆ ಮತ್ತೆ ತನ್ನ ಪ್ರಯತ್ನ ಮುಂದವೆರಿಸಿದ ಜೆಫರು 2ನೇ ಬಾರಿಯ ಹಾರಾಟದಲ್ಲಿ ಯಶಸ್ವಿಯಾಗಿದ್ದಾನೆ.

ಪೈಲಟ್ ಕನಸು ಈಡೇರಲಿಲ್ಲ

ಜೆಫರು ವಿಮಾನ ನಿರ್ಮಿಸಿ ಅದರಲ್ಲಿ ಹಾರಾಟ ನಡೆಸಿದ್ದಾನೆಯಾದರೂ, ಜೆಫರು ಅಧಿಕೃತವಾಗಿ ಪೈಲಟ್ ಅರ್ಹತೆಯನ್ನು ಸಂಪಾದಿಸಿಲ್ಲ. ಏಕೆಂದರೆ ಜೆಫರು ತಾನೇ ನಿರ್ಮಿಸಿದ ವಿಮಾನದಲ್ಲಿ ನಿಗದಿತ ಎತ್ತರದಲ್ಲಿ ಹಾರಾಟ ಮಾಡುವಲ್ಲಿ ಕೂದಲೆಳೆ ಅಂತರದಲ್ಲಿ ವಿಫಲನಾಗಿದ್ದಾನೆ. ತರಬೇತಿ ಪೈಲಟ್ ಗಳು ಎಷ್ಟು ಅಡಿ ಎತ್ತರದಲ್ಲಿ ಹಾರಾಟ ನಡೆಸಬೇಕು ಎಂದು ಸ್ಥಳೀಯ ವೈಮಾನಿಕ ತರಬೇತಿ ಸಂಸ್ಥೆ ಸೂಚಿಸಿದ್ದ ಎತ್ತರಕ್ಕಿಂತ ಕೆಲವೇ ಸೆಂಟಿಮೀಟರ್ ಗಳಿಗಿಂತ ಜೆಫರು ವಿಮಾನ ಹಾರಾಟ ನಡೆಸಿದ್ದು, ಇದರಿಂದ ಆತನ ಪೈಲಟ್ ಕನಸು ಭಗ್ನಗೊಂಡಿದೆ. ಆದರೂ ಛಲ ಬಿಡದ ಜೆಫರು ಮತ್ತೆ ಪ್ರಯತ್ನಿಸುವುದಾಗಿ ಹೇಳಿದ್ದಾನೆ.

ಒಟ್ಟಾರೆ ಪೈಲಟ್ ಆಗಬೇಕ ಕನಸು ಓರ್ವ ಯುವಕನನ್ನು ಪೈಲಟ್ ನೊಂದಿಗೆ ವಿಮಾನ ನಿರ್ಮಾಣಕ್ಕೂ ಹಚ್ಚಿದ್ದು, ಯುವಕನ ಪ್ರಯತ್ನ ಶ್ಲಾಘನಾರ್ಹವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com