'ಕೊಲೆಯಾದ' ಮಹಿಳೆ ಜೀವಂತವಾಗಿ ಮನೆಗೆ ವಾಪಸ್; ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಾಲ್ವರು ಇನ್ನೂ ಜೈಲಿನಲ್ಲಿದ್ದಾರೆ!

35 ವರ್ಷದ ಲಲಿತಾ ಬಾಯಿ ಮಂದ್ಸೌರ್ ಜಿಲ್ಲೆಯ ಮನೆಗೆ ಹಿಂದಿರುಗಿದ ತಕ್ಷಣ, ಆಕೆಯ ತಂದೆ ಆಕೆಯನ್ನು ಗಾಂಧಿ ಸಾಗರ್ ಪೊಲೀಸ್ ಠಾಣೆಗೆ ಕರೆದೊಯ್ದು ಆಕೆಯ ಬಗ್ಗೆ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಭೋಪಾಲ್: ಮಧ್ಯ ಪ್ರದೇಶದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, 2023 ರಲ್ಲಿ ಕೊಲೆಯಾದಳು ಎಂದು ನಂಬಲಾದ ಮಹಿಳೆಯೊಬ್ಬರು ಜೀವಂತವಾಗಿ ಮನೆಗೆ ಹಿಂತಿರುಗಿದ್ದು, ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಆಘಾತ ಮತ್ತು ಆಶ್ಚರ್ಯವನ್ನುಂಟುಮಾಡಿದೆ.

35 ವರ್ಷದ ಲಲಿತಾ ಬಾಯಿ ಮಂದ್ಸೌರ್ ಜಿಲ್ಲೆಯ ಮನೆಗೆ ಹಿಂದಿರುಗಿದ ತಕ್ಷಣ, ಆಕೆಯ ತಂದೆ ಆಕೆಯನ್ನು ಗಾಂಧಿ ಸಾಗರ್ ಪೊಲೀಸ್ ಠಾಣೆಗೆ ಕರೆದೊಯ್ದು ಆಕೆಯ ಬಗ್ಗೆ ತಿಳಿಸಿದ್ದಾರೆ.

ಲಲಿತಾ ಬಾಯಿ ಅವರ "ಕೊಲೆ" ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾದ ನಾಲ್ವರು ವ್ಯಕ್ತಿಗಳು ಜೈಲಿನಲ್ಲಿ ಇನ್ನೂ ಶಿಕ್ಷೆ ಅನುಭವಿಸುತ್ತಿದ್ದಾರೆ.

ಲಲಿತಾ ಅವರ ತಂದೆಯವರ ಪ್ರಕಾರ, ಕುಟುಂಬವು ತನ್ನ ಮಗಳ ವಿರೂಪಗೊಂಡ ದೇಹದ ಅಂತ್ಯಕ್ರಿಯೆ ನಡೆಸಿದ್ದು, ಕೈಯಲ್ಲಿನ ಹಚ್ಚೆ ಮತ್ತು ಕಾಲಿಗೆ ಕಟ್ಟಲಾದ ಕಪ್ಪು ದಾರ ಸೇರಿದಂತೆ ಕೆಲವು ದೈಹಿಕ ಗುರುತುಗಳು ಆಕೆಯನ್ನು ಪತ್ತೆಹಚ್ಚಲು ಸಹಾಯ ಮಾಡಿತು ಎಂದಿದ್ದಾರೆ.

ಲಲಿತಾ ಬಾಯಿ ಅವರ "ಕೊಲೆ" ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಇಮ್ರಾನ್, ಶಾರುಖ್, ಸೋನು ಮತ್ತು ಎಜಾಜ್ ಬಂಧಿತ ಆರೋಪಿಗಳು.

ಸಾಂದರ್ಭಿಕ ಚಿತ್ರ
ಮಧ್ಯ ಪ್ರದೇಶ: ಕೊಲೆ ವಿಚಾರವಾಗಿ ಯುವಕನ ಅಪಹರಣ; ರಕ್ಷಿಸಲು ಹೋಗಿ ಹೆಣವಾದ ASI!

ಲಲಿತಾ ಈಗ ತಾನು ಶಾರುಖ್ ಜೊತೆ ಭಾನಿಪುರ ಗ್ರಾಮಕ್ಕೆ ಹೋಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಅವನು ಆಕೆಯನ್ನು ಇನ್ನೊಬ್ಬ ವ್ಯಕ್ತಿಗೆ 5 ಲಕ್ಷ ರೂ.ಗೆ ಮಾರಿದ್ದನು. ಹೀಗಾಗಿ ನಾನು ಇದುವರೆಗೆ ರಾಜಸ್ಥಾನದ ಕೋಟಾದಲ್ಲಿ ಇದ್ದೆ. ಈಗ ತಪ್ಪಿಸಿಕೊಂಡು ಮನೆಗೆ ಬಂದಿರುವುದಾಗಿ ಮಹಿಳೆ ಹೇಳಿದ್ದಾರೆ.

ಅಲ್ಲದೆ ಲಲಿತಾ ತನ್ನ ಗುರುತನ್ನು ದೃಢೀಕರಿಸಲು, ತನ್ನ ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಹಾಜರುಪಡಿಸಿದ್ದಾಳೆ.

ಮಹಿಳೆಯ ‘ಕೊಲೆ’ ಪ್ರಕರಣದಲ್ಲಿ ಜೈಲಿನಲ್ಲಿರುವ ನಾಲ್ವರ ಬಗ್ಗೆ ಮಾತನಾಡಿರುವ ಪೊಲೀಸರು, “ನಾವು ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ಜೊತೆಗೆ ಲಲಿತಾ ಅವರ ಕುಟುಂಬವು ಯಾರ ಶವವನ್ನು ಅಂತ್ಯಕ್ರಿಯೆ ಮಾಡಿದೆ ಎಂಬ ವಿಚಾರವನ್ನು ಇದೀಗ ತನಿಖೆ ಮಾಡುತ್ತಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com