
ಮುಂಬೈ: ವಿವಾದಾತ್ಮಕ ಹೇಳಿಕೆ ನೀಡಿ ಮಹಾರಾಷ್ಟ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ಬೆಂಬಲಕ್ಕೆ ನಿಂತ ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಅವರ ಹೇಳಿಕೆ ಸತ್ಯವಾಗಿದ್ದು, ಸಾರ್ವಜನಿಕ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಸೋಮವಾ ಪ್ರತಿಪಾದಿಸಿದ್ದಾರೆ.
ಇಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, 'ಗದ್ದರ್' ರನ್ನು 'ಗದ್ದರ್' ಎಂದು ಕರೆಯುವುದು ಯಾರ ಮೇಲಿನ ದಾಳಿಯಲ್ಲ. "ಕುನಾಲ್ ಕಾಮ್ರಾ ಅವರು ಯಾವುದೇ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ. 'ಗದ್ದರ್' ಅವರನ್ನು 'ಗದ್ದರ್' ಎಂದು ಕರೆಯುವುದರಲ್ಲಿ ತಪ್ಪೇನಿದೆ. ಕುನಾಲ್ ಕಾಮ್ರಾ ಸತ್ಯವನ್ನೇ ಹೇಳಿದ್ದಾರೆ; ಜನರು ಏನು ಭಾವಿಸುತ್ತಾರೆ ಎಂಬುದನ್ನು ಅವರು ವ್ಯಕ್ತಪಡಿಸಿದ್ದಾರೆ" ಎಂದರು.
ಕುನಾಲ್ ಕಮ್ರಾ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡ ಠಾಕ್ರೆ, "ಅವರು ಸತ್ಯವನ್ನೇ ಹೇಳಿದ್ದಾರೆ. ಆದ್ದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ. ಕಾರ್ಯಕ್ರಮದಲ್ಲಿ ಕುನಾಲ್ ಕಾಮ್ರಾ ಅವರು ಹಾಡಿದ ಪೂರ್ಣ ಹಾಡನ್ನು ಕೇಳಿ ಮತ್ತು ಅದನ್ನು ಇತರರಿಗೂ ಕೇಳುವಂತೆ ಮಾಡಿ" ಎಂದು ಹೇಳಿದರು.
ಹ್ಯಾಬಿಟ್ಯಾಟ್ ಕಾಮಿಡಿ ಕ್ಲಬ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯಕ್ಕೂ ತಮ್ಮ ಶಿವಸೇನಾ ಘಟಕಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಅದನ್ನು "ಗದ್ದರ್ ಸೇನಾ" ಮಾಡಿದೆ ಎಂದು ಯುಬಿಟಿ ಸೇನಾ ಮುಖ್ಯಸ್ಥರು ಹೇಳಿದ್ದಾರೆ.
"ಈ ದಾಳಿಗೂ ಶಿವಸೇನೆ(ಯುಬಿಟಿ)ಗೆ ಯಾವುದೇ ಸಂಬಂಧವಿಲ್ಲ; ಇದನ್ನು 'ಗದ್ದರ್ ಸೇನಾ' ಮಾಡಿದೆ. ರಕ್ತದಲ್ಲಿ 'ಗದ್ದರ್' ಇರುವವರು ಎಂದಿಗೂ ಶಿವಸೈನಿಕರಾಗಲು ಸಾಧ್ಯವಿಲ್ಲ" ಎಂದು ಮಾಜಿ ಸಿಎಂ ತಿಳಿಸಿದ್ದಾರೆ.
Advertisement