"ಏಕ್ ನಾಥ್ ಶಿಂಧೆ ಗದ್ದಾರ್" ಎಂದ ಕುನಾಲ್ ಕಾಮ್ರ: ಕಾಮಿಡಿಯನ್ ಸ್ಥಿತಿ ಈಗ ಟ್ರಾಜಿಡಿ; ಮುಂಬೈ ನಿಂದ ಪಲಾಯನ

ಮುಂಬೈನ ಹ್ಯಾಬಿಟ್ಯಾಟ್ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಾಸ್ಯನಟ ಕುನಾಲ್ ಕಮ್ರಾ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜಕೀಯ ಪಕ್ಷ ಬದಲಾಯಿಸಿದ್ದಕ್ಕಾಗಿ ಪರೋಕ್ಷ ಟೀಕೆ ಮಾಡಿ ಗದ್ದಾರ್ ಎಂದು ಕರೆದಿದ್ದರು.
Kamra- Shidne
ಕಾಮ್ರಾ- ಶಿಂಧೆ online desk
Updated on

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಉಲ್ಲೇಖಿಸಿ ಹಾಸ್ಯನಟ ಕುನಾಲ್ ಮಾಡಿದ 'ಗದ್ದಾರ್'/'ದೇಶದ್ರೋಹಿ' ಹೇಳಿಕೆ ದೇಶಾದ್ಯಂತ ಭಾರಿ ಸುದ್ದಿಯಾಗುತ್ತಿದೆ.

ಮುಂಬೈನ ಹ್ಯಾಬಿಟ್ಯಾಟ್ ಸ್ಟುಡಿಯೋ, ಸ್ಟ್ಯಾಂಡ್-ಅಪ್ ಹಾಸ್ಯ ಕಾರ್ಯಕ್ರಮಗಳಿಗೆ ಜನಪ್ರಿಯ ಸ್ಥಳವಾಗಿದ್ದು, ಅಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಾಸ್ಯನಟ ಕುನಾಲ್ ಕಮ್ರಾ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜಕೀಯ ಪಕ್ಷ ಬದಲಾಯಿಸಿದ್ದಕ್ಕಾಗಿ ಪರೋಕ್ಷ ಟೀಕೆ ಮಾಡಿ ಗದ್ದಾರ್ ಎಂದು ಕರೆದಿದ್ದರು.

1997 ರ ಚಲನಚಿತ್ರ ದಿಲ್ ತೋ ಪಾಗಲ್ ಹೈ ನ ಹಿಂದಿ ಹಾಡಿನ ಮಾರ್ಪಡಿಸಿದ ಆವೃತ್ತಿಯನ್ನು ಕಮ್ರಾ ಏಕ್ ನಾಥ್ ಶಿಂಧೆ ಅವರನ್ನು ಟೀಕಿಸಲು ಬಳಸಿದ್ದಾರೆ. 2022 ರಲ್ಲಿ ಶಿಂಧೆ ತನ್ನ ಮಾಜಿ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಬಿಜೆಪಿಯ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕುನಾಲ್ ಕಮ್ರಾ ಈಗ ಸಂಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ಯಾವುದೇ ಅಧಿಕೃತ ಹೇಳಿಕೆ ಅಥವಾ ಸಂದರ್ಶನ ನೀಡಲು ಬಯಸುವುದಿಲ್ಲ ಎಂದು ಕಮ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ನ್ಯಾಯಾಲಯ ಕೇಳಿದರೆ ಮಾತ್ರ ಈ ವಿಷಯದಲ್ಲಿ ಕ್ಷಮೆಯಾಚಿಸುವುದಾಗಿ ಕಮ್ರಾ ಹೇಳಿದ್ದಾರೆ.

Kamra- Shidne
ಶಿಂಧೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: 'ಕೀಳು ಮಟ್ಟದ ಕಮೆಂಟ್‌' ಮಾಡುವುದು ಕುನಾಲ್ ಕಾಮ್ರಾಗೆ ಹೊಸದೇನಲ್ಲ- ದೇವೇಂದ್ರ ಫಡ್ನವೀಸ್

ಸಿಎಂ ಫಡ್ನವೀಸ್ ಖಂಡನೆ

ಕಾಮ್ರಾ ಶಿಂಧೆ ಕುರಿತು ನೀಡಿರುವ ಹೇಳಿಕೆಗಳನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತೀವ್ರವಾಗಿ ಖಂಡಿಸಿದ್ದಾರೆ. ವಾಕ್ ಸ್ವಾತಂತ್ರ್ಯದ ನೆಪದಲ್ಲಿ ಅಜಾಗರೂಕತೆಯನ್ನು ಸಹಿಸುವುದಿಲ್ಲ ಎಂದು ಫಡ್ನವೀಸ್ ಹೇಳಿದ್ದಾರೆ.

ಕುನಾಲ್ ಕಮ್ರಾ ಕ್ಷಮೆಯಾಚಿಸುವವರೆಗೂ ನಾವು ಅವರನ್ನು ಬಿಡುವುದಿಲ್ಲ: ಶಿವಸೇನಾ ನಾಯಕ ಸಂಜಯ್ ನಿರುಪಮ್

"ಕುನಾಲ್ ಕಮ್ರಾ ತಮ್ಮ ಹೇಳಿಕೆಗೆ ಕ್ಷಮೆಯಾಚಿಸುವವರೆಗೂ ನಾವು ಅವರನ್ನು ಬಿಡುವುದಿಲ್ಲ. ನಮ್ಮ ಜನರು ಅವರನ್ನು ಹುಡುಕುತ್ತಿದ್ದಾರೆ, ಆದರೆ ಅವರು ಮುಂಬೈನಲ್ಲಿಲ್ಲ ಮತ್ತು ಬಹುಶಃ ಇಲ್ಲಿಂದ ಪಲಾಯನ ಮಾಡಿದ್ದಾರೆ ಎಂದು ನಮಗೆ ತಿಳಿದುಬಂದಿದೆ. ಅವರು ಕ್ಷಮೆಯಾಚಿಸುವವರೆಗೂ ನಾವು ಅವರನ್ನು ಬಿಡುವುದಿಲ್ಲ..." ಎಂದು ಶಿವಸೇನಾ ನಾಯಕ ಸಂಜಯ್ ನಿರುಪಮ್ ಹೇಳಿದರು.

Kamra- Shidne
Watch | ಏಕನಾಥ್ ಶಿಂಧೆ ಕುರಿತು ಟೀಕೆ; ಕಾಮಿಡಿಯನ್‌ ಕುನಾಲ್ ಕಾಮ್ರಾ ಸ್ಟುಡಿಯೋ ಧ್ವಂಸ

ಕಮ್ರಾ ವಿರುದ್ಧ ಈಗಾಗಲೇ MIDC ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ ಎಂದು ನಿರುಪಮ್ ದೃಢಪಡಿಸಿದ್ದು ಕಮ್ರಾಗೆ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು. "ಪ್ರಸ್ತುತ, MIDC ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ FIR ದಾಖಲಾಗಿದೆ, ಆದರೆ ಅವರು ಕ್ಷಮೆಯಾಚಿಸದಿದ್ದರೆ, ಕಾನೂನು ತನ್ನ ರೀತಿಯಲ್ಲಿ ಕೆಲಸ ಮಾಡುತ್ತದೆ ಮತ್ತು ನಾವು ನಮ್ಮ ರೀತಿಯಲ್ಲಿ ನಮ್ಮ ಕೆಲಸವನ್ನು ಮಾಡುತ್ತೇವೆ" ಎಂದು ನಿರುಪಮ್ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com