ತಮಿಳುನಾಡು: ಪರೀಕ್ಷೆಗೆ ಹೋಗಲು ಬಸ್ ಹಿಂದೆ ಓಡಿದ ವಿದ್ಯಾರ್ಥಿನಿ; ಬಸ್ ನಿಲ್ಲಿಸದ ಚಾಲಕನ ಅಮಾನತು

ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಸ್‌ನ ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಘಟನೆಯ ವಿಡಿಯೋ ಮಾಡಿದ್ದಾರೆ.
 ಬಸ್ ಹಿಂದೆ ಓಡಿದ ವಿದ್ಯಾರ್ಥಿನಿ
ಬಸ್ ಹಿಂದೆ ಓಡಿದ ವಿದ್ಯಾರ್ಥಿನಿ
Updated on

ತಿರುಪತ್ತೂರು: ತಮಿಳುನಾಡಿನ ಕೊಥಕೋಟೈನಲ್ಲಿ ನಿಗದಿತ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ ನಿಲ್ಲದ ಕಾರಣ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದ 12 ನೇ ತರಗತಿಯ ವಿದ್ಯಾರ್ಥಿನಿ ಮತ್ತು ಇನ್ನೊಬ್ಬ ಮಹಿಳೆ ಬಸ್‌ನ ಹಿಂದೆ ಓಡಿದ್ದಾರೆ.

ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಸ್‌ನ ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ಘಟನೆಯ ವಿಡಿಯೋ ಮಾಡಿದ್ದಾರೆ. ವಿದ್ಯಾರ್ಥಿನಿ ತನ್ನ ಸುರಕ್ಷತೆಯನ್ನು ಪಣಕ್ಕಿಟ್ಟು ಸ್ವಲ್ಪ ದೂರ ಬಸ್‌ನ ಹಿಂದೆ ಓಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿಗೆ. ಅಂತಿಮವಾಗಿ ಬಸ್ ನಿಲ್ಲಿಸಿ ಬಾಲಕಿಯನ್ನು ಹತ್ತಿಸಿಕೊಳ್ಳಲಾಗಿದೆ.

ಘಟನೆಯ ವೀಡಿಯೊ ವೈರಲ್ ಆದ ನಂತರ, ಸಾರಿಗೆ ಇಲಾಖೆಯು ಖಾಯಂ ಉದ್ಯೋಗಿಯಾಗಿರುವ ಬಸ್ ಚಾಲಕ ಎಸ್ ಮುನಿರಾಜ್ ಅವರನ್ನು ಅಮಾನತುಗೊಳಿಸಿದೆ ಮತ್ತು ಗುತ್ತಿಗೆ ಉದ್ಯೋಗಿಯಾಗಿರುವ ಕಂಡಕ್ಟರ್ ಅಶೋಕ್ ಕುಮಾರ್ ಅವರನ್ನು ಸೇವೆಯಿಂದಲೇ ವಜಾಗೊಳಿಸಲಾಗಿದೆ.

ಮೂಲಗಳ ಪ್ರಕಾರ, ಬಾಲಕಿ ನಿಮ್ಮಿಯಂಬಟ್ಟು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದು, ಪರೀಕ್ಷಾ ಕೇಂದ್ರವಾದ ಕೊಥಕೋಟೈನಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿದೆ.

ಘಟನೆ ನಡೆದ 30 ನಿಮಿಷಗಳಲ್ಲಿ ಚಾಲಕ ಮುನಿರಾಜ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು TNIE ಗೆ ಖಚಿತಪಡಿಸಿದ್ದಾರೆ.

“ನಿಯಮಗಳ ಪ್ರಕಾರ, ಯಾವುದೇ ಪ್ರಯಾಣಿಕರು ಇಲ್ಲದಿದ್ದರೂ ಚಾಲಕನು ಪ್ರತಿಯೊಂದು ಗೊತ್ತುಪಡಿಸಿದ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಬೇಕು. ದೂರದಿಂದ ವ್ಯಕ್ತಿಗಳು ಬರಬಹುದು. ಕಂಡಕ್ಟರ್ ಸಹ ಚಾಲಕನಿಗೆ ನಿಲ್ಲಿಸಲು ಸಿಗ್ನಲ್ ನೀಡಬೇಕು. ಈ ಘಟನೆಯಲ್ಲಿ ಇಬ್ಬರೂ ಕರ್ತವ್ಯ ಲೋಪ ಎಸಗಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com