ಉತ್ತರ ಪ್ರದೇಶ: ಜ್ಯೂಸ್ ಅಂಗಡಿ ಮಾಲೀಕನಿಗೆ 7.79 ಕೋಟಿ ರೂ IT ನೋಟಿಸ್!

ಮಾರ್ಚ್ 18 ರಂದು ಜ್ಯೂಸ್ ಅಂಗಡಿ ಮಾಲೀಕ ಮೊಹಮ್ಮದ್ ರಹೀಸ್ ನೋಟಿಸ್ ಸ್ವೀಕರಿಸಿದಾಗಿನಿಂದ ಚಿಂತಾಕ್ರಾಂತರಾಗಿದ್ದಾರೆ.
Casual Images
ಸಾಂದರ್ಭಿಕ ಚಿತ್ರ
Updated on

ಅಲಿಘರ್: ಉತ್ತರ ಪ್ರದೇಶದ ಅಲಿಘರ್ ನ ಜಿಲ್ಲಾ ನ್ಯಾಯಾಲಯದ ಕಾಂಪೌಂಡ್ ನಲ್ಲಿ ಒಂದು ಸಣ್ಣ ಜ್ಯೂಸ್ ಅಂಗಡಿ ಇಟ್ಟುಕೊಂಡಿರುವ ಮಾರಾಟಗಾರರೊಬ್ಬರು ರೂ. 7.79 ಕೋಟಿ ಬಾಕಿ ಪಾವತಿಗಾಗಿ IT ನೋಟಿಸ್ ಸ್ವೀಕರಿಸಿದ ನಂತರ ಆಘಾತಕ್ಕೊಳಗಾಗಿದ್ದಾರೆ.

ಮಾರ್ಚ್ 18 ರಂದು ಜ್ಯೂಸ್ ಅಂಗಡಿ ಮಾಲೀಕ ಮೊಹಮ್ಮದ್ ರಹೀಸ್ ನೋಟಿಸ್ ಸ್ವೀಕರಿಸಿದಾಗಿನಿಂದ ಚಿಂತಾಕ್ರಾಂತರಾಗಿದ್ದಾರೆ. ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ, ತಕ್ಷಣವೇ ನೋಟಿಸ್ ವಿಷಯಗಳನ್ನು ತಿಳಿಯಲು ಸ್ನೇಹಿತರ ನೆರವನ್ನು ಪಡೆದಿದ್ದಾರೆ. ಅದರಲ್ಲಿ ಮಾರ್ಚ್ 28 ರೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಹೀಸ್, "ಆದಾಯ ತೆರಿಗೆ ವಕೀಲರನ್ನು ಸಂಪರ್ಕಿಸಲು ನನಗೆ ಸಲಹೆ ನೀಡಿದ್ದಾರೆ. ಪ್ರತಿಕ್ರಿಯೆ ತಿಳಿಸುವ ಮುನ್ನಾ ನನ್ನ ಬ್ಯಾಂಕ್ ಖಾತೆ ದಾಖಲೆ ಸಂಗ್ರಹಿಸಿಟ್ಟುಕೊಳ್ಳುವಂತೆ ಹೇಳಿದ್ದಾರೆ ಎಂದರು.

ದಿನವೊಂದಕ್ಕೆ ಕೇವಲ 400 ರೂಪಾಯಿ ಗಳಿಸುವ ರಹೀಸ್, ತನ್ನ ವೃದ್ಧ, ಅಸ್ವಸ್ಥ ತಂದೆ ತಾಯಿ ಸೇರಿದಂತೆ ಇಡೀ ಕುಟುಂಬವನ್ನು ಪೋಷಿಸುತ್ತಿದ್ದು, ಅನಿರೀಕ್ಷಿತ ನೋಟಿಸ್ ತನಗೆ ತೀವ್ರ ನೋವನ್ನುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ. ಈ ನೋಟಿಸ್ ತೀವ್ರ ಆತಂಕವನ್ನು ಉಂಟುಮಾಡಿದ್ದು, ನನ್ನ ರಕ್ತದೊತ್ತಡ ಹೆಚ್ಚಾಗಿದೆ. ಈ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕೆಂದು ನನಗೆ ತಿಳಿದಿಲ್ಲ ಎಂದರು.

Casual Images
GST: 32 ಸಾವಿರ ಕೋಟಿ ತೆರಿಗೆ ವಂಚನೆ ಆರೋಪ; Infosysಗೆ ಐಟಿ ಇಲಾಖೆ ನೋಟಿಸ್

ತನ್ನ ತಾಯಿ ಖಿನ್ನತೆಯಿಂದ ಬಳಲುತ್ತಿದ್ದಾರೆ. ಈ ನಡುವೆ ಬಂದಿರುವ ಐಟಿ ನೋಟಿಸ್ ನಿಂದ ಮತ್ತಷ್ಟು ಭಯ ಮತ್ತು ಅನಿಶ್ಚಿತತೆ ಹೆಚ್ಚಿಸಿದೆ ಎಂದು ಅವರು ಅಳಲು ತೋಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com