ಅಶಿಸ್ತು ಪ್ರದರ್ಶಿಸಬೇಡಿ, ಗೌರವಯುತವಾಗಿ ನಡೆದುಕೊಳ್ಳಿ: ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಸ್ಪೀಕರ್ ಓಂ ಬಿರ್ಲಾ; Video ನೋಡಿ

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿನ್ನೆ ಬುಧವಾರ ಸರ್ಕಾರವು ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ್ದರು. ಕಳೆದ ಹಲವಾರು ದಿನಗಳಿಂದ ಸದನದಲ್ಲಿ ಮಾತನಾಡಲು ಅವಕಾಶವಿಲ್ಲ ಎಂದು ಹೇಳಿದ್ದರು.
Rahul Gandhi and Priyanka Gandhi
ರಾಹುಲ್ ಗಾಂಧಿ-ಪ್ರಿಯಾಂಕಾ ಗಾಂಧಿ
Updated on

ನವದೆಹಲಿ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಸ್ಪೀಕರ್ ಓಂ ಬಿರ್ಲಾ ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಸಂಸತ್ತಿನ ನೀತಿ ನಿಯಮಗಳು, ಸದನದ ಸಭ್ಯತೆ, ನಡವಳಿಕೆಗಳಿಗೆ ತಕ್ಕಂತೆ ನಡೆದುಕೊಳ್ಳಬೇಕೆಂದು ಬುದ್ದಿಮಾತು ಹೇಳಿರುವ ವಿಡಿಯೊವನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಆಡಳಿತಾರೂಢ ಬಿಜೆಪಿ ವಿಡಿಯೊವನ್ನು ಬಿಡುಗಡೆ ಮಾಡಿದೆ. ಅದು ಯಾವ ದಿನ ಎಂ0ದು ಉಲ್ಲೇಖಿಸಿಲ್ಲ, ಸದನದ ಕಲಾಪದ ಸಮಯದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿಯ ಕೆನ್ನೆ ಸವರುತ್ತಿರುವ ವಿಡಿಯೋ ಇದಾಗಿದೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿನ್ನೆ ಬುಧವಾರ ಸರ್ಕಾರವು ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ್ದರು. ಕಳೆದ ಹಲವಾರು ದಿನಗಳಿಂದ ಸದನದಲ್ಲಿ ಮಾತನಾಡಲು ಅವಕಾಶವಿಲ್ಲ ಎಂದು ಹೇಳಿದ್ದರು.

ಏನು ನಡೆಯುತ್ತಿದೆ ಎಂದು ನನಗೆ ತಿಳಿದಿಲ್ಲ. ನನಗೆ ಮಾತನಾಡಲು ಅವಕಾಶ ನೀಡುವಂತೆ ನಾನು ಸ್ಪೀಕರ್ ಅವರನ್ನು ವಿನಂತಿಸಿದೆ. ಆದರೆ ಅವರು ಓಡಿಹೋದರು. ಸದನವನ್ನು ನಡೆಸಲು ಇದು ಮಾರ್ಗವಲ್ಲ. ಸ್ಪೀಕರ್ ಸುಮ್ಮನೆ ಹೊರಟುಹೋದರು. ಅವರು ನನಗೆ ಮಾತನಾಡಲು ಬಿಡಲಿಲ್ಲ... ಅವರು ನನ್ನ ಬಗ್ಗೆ ಆಧಾರ ರಹಿತವಾದದ್ದನ್ನು ಹೇಳಿದರು... ಅಗತ್ಯ ಇಲ್ಲದಿದ್ದರೂ ಸದನವನ್ನು ಮುಂದೂಡಿದರು" ಎಂದು ಆರೋಪಿಸಿದ್ದರು.

ವೈರಲ್ ಆದ ವಿಡಿಯೊ

ಲೋಕಸಭೆ ಸದನದಲ್ಲಿ ಕಲಾಪ ಮಧ್ಯೆ ತಂಗಿ ಪ್ರಿಯಾಂಕಾ ಗಾಂಧಿ ಕುಳಿತಿದ್ದ ಕಡೆ ಹೋದ ರಾಹುಲ್ ಗಾಂಧಿ, ತಂಗಿ ಪ್ರಿಯಾಂಕಾ ಗಾಂಧಿಯ ಕೆನ್ನೆ ಸವರರಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಲೋಕಸಭೆಯಲ್ಲಿ ಅಶಿಸ್ತು ಪ್ರದರ್ಶಿಸಿದ್ದೀರಿ ಎಂದು ಸ್ಪೀಕರ್ ಓಂ ಬಿರ್ಲಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸದನದ ಘನತೆಯನ್ನು ಎತ್ತಿಹಿಡಿಯಲು ಸದಸ್ಯರು ಪಾಲಿಸಬೇಕಾದ ನಡವಳಿಕೆ ಹೇಗಿರಬೇಕು ಎಂಬುದು ತಿಳಿದುಕೊಳ್ಳಬೇಕೆಂದು ಹೇಳಿದರು.

ಕೆಲವು ದಿನಗಳ ಗೈರಿನ ಬಳಿಕ ರಾಹುಲ್ ಗಾಂಧಿ ನಿನ್ನೆ ಲೋಕಸಭೆಯಲ್ಲಿ ಕಾಣಿಸಿಕೊಂಡಿದ್ದರು. ರಾಹುಲ್ ಅವರನ್ನು ಖಂಡಿಸುವಾಗ ಬಿರ್ಲಾ ಬಹುಶಃ ಈ ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಈ ಸದನದಲ್ಲಿ ತಂದೆ, ಮಗಳು, ತಾಯಿ, ಗಂಡ, ಹೆಂಡತಿ ಯಾರೇ ಕೂಡ ಸದಸ್ಯರಾಗಿರಬಹುದು. ಆದರೆ ಅವರೊಂದಿಗೆ ವ್ಯವಹರಿಸುವಾಗ ನಿಯಮ 349ರ ಪ್ರಕಾರ ವರ್ತಿಸಬೇಕು ಎಂದು ಓಂ ಬಿರ್ಲಾ ಹೇಳಿದ್ದಾರೆ.

ವಿಡಿಯೋ ಕ್ಲಿಪ್‌ನಲ್ಲಿ ರಾಹುಲ್ ಹಜಾರದ ಮೂಲಕ ನಡೆದುಕೊಂಡು ಹೋಗುತ್ತಿರುವುದನ್ನು, ಪ್ರಿಯಾಂಕಾ ಕಡೆಗೆ ತಿರುಗಿ ಅವರ ಮುಖವನ್ನು ಮುಚ್ಚಿಕೊಳ್ಳುವುದನ್ನು ತೋರಿಸಲಾಗಿದೆ, ಆದರೆ ಅವರ ಪಕ್ಷದ ಸಹೋದ್ಯೋಗಿ ಮಾಣಿಕ್ಕಂ ಟ್ಯಾಗೋರ್ ಮಾತನಾಡುತ್ತಿದ್ದರು. ಕೆಲವು ದಿನಗಳ ಗೈರುಹಾಜರಿಯ ನಂತರ ರಾಹುಲ್ ಲೋಕಸಭೆಗೆ ಹಾಜರಾಗಿದ್ದರು.

Rahul Gandhi and Priyanka Gandhi
ಸದನ ನಡೆಸಲು ಯಾವುದೇ ಮಾರ್ಗವಿಲ್ಲ.. ಮಾತನಾಡಲು ಅವಕಾಶ ನೀಡುತ್ತಿಲ್ಲ: ಲೋಕಸಭಾ ಸ್ಪೀಕರ್ ವಿರುದ್ಧ Rahul Gandhi

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com