Rahul Gandhi
ರಾಹುಲ್ ಗಾಂಧಿ

ಕಾಂಗ್ರೆಸ್ ಹೋರಾಡಿದ್ದು ಬ್ರಿಟಿಷ್ ಸಾಮ್ರಾಜ್ಯ ವಿರುದ್ಧ, ಅದರ ಜೊತೆ ಬಿಜೆಪಿ-ಆರ್‌ಎಸ್‌ಎಸ್‌ ಹೋಲಿಕೆ ಮಾಡುವುದು ತಮಾಷೆ: ರಾಹುಲ್ ಗಾಂಧಿ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೂರು ನಿಗದಿತ ಸಭೆಗಳಲ್ಲಿ ಮೊದಲನೆ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಲಿಷ್ಠ ಕಾಂಗ್ರೆಸ್ ಸ್ಥಾಪನೆಗೆ ಮತ್ತು ನ್ಯಾಯಯುತ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕೆಂದು ಕರೆ ನೀಡಿದರು.
Published on

ನವದೆಹಲಿ: ದೇಶದಲ್ಲಿ ಕಠಿಣ ಸೈದ್ಧಾಂತಿಕ ಯುದ್ಧ ನಡೆಯುತ್ತಿದ್ದು, ಈ ದೇಶಕ್ಕಾಗಿ ಕಾಂಗ್ರೆಸ್ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿತ್ತು, ಕಾಂಗ್ರೆಸ್ ಜೊತೆ ಬಿಜೆಪಿ-ಆರ್ ಎಸ್ ಎಸ್ ನ್ನು ಹೋಲಿಕೆ ಮಾಡುವುದು ತಮಾಷೆ ವಿಷಯ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೂರು ನಿಗದಿತ ಸಭೆಗಳಲ್ಲಿ ಮೊದಲನೆ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಲಿಷ್ಠ ಕಾಂಗ್ರೆಸ್ ಸ್ಥಾಪನೆಗೆ ಮತ್ತು ನ್ಯಾಯಯುತ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕೆಂದು ಕರೆ ನೀಡಿದರು.

ನಮ್ಮ ಪಾತ್ರವಿಲ್ಲದೆ ಪಕ್ಷವು ಅಭಿವೃದ್ಧಿ ಹೊಂದಲು, ಯಶಸ್ವಿಯಾಗಲು ಸಾಧ್ಯವಿಲ್ಲ. ನಮ್ಮ ಹೋರಾಟವು ಆರ್‌ಎಸ್‌ಎಸ್-ಬಿಜೆಪಿ ವಿರುದ್ಧ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕ, ಪ್ರತಿಯೊಂದು ಸಮುದಾಯವು ಕನಸು ಕಾಣುವ ಮತ್ತು ಸಾಧಿಸುವ ಹಕ್ಕನ್ನು ಹೊಂದಿರುವ ಭಾರತಕ್ಕಾಗಿ ಇದೆ. ಒಟ್ಟಾಗಿ, ನಾವು ಬಲವಾದ ಕಾಂಗ್ರೆಸ್ ಮತ್ತು ನ್ಯಾಯಯುತ ಭಾರತವನ್ನು ನಿರ್ಮಿಸುತ್ತೇವೆ ಎಂದು ಸಭೆಯ ನಂತರ ವಾಟ್ಸಾಪ್ ಚಾನೆಲ್ ನಲ್ಲಿ ಮಾಡಿರುವ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ತಮ್ಮ ವಾಟ್ಸಾಪ್ ಚಾನೆಲ್‌ನಲ್ಲಿ ಹಂಚಿಕೊಂಡ ಸಭೆಯ ವೀಡಿಯೊದಲ್ಲಿ, ಕಾಂಗ್ರೆಸ್ ಸೈದ್ಧಾಂತಿಕ ಯುದ್ಧವನ್ನು ನಡೆಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ.

ಭಾರತದ ಬಗ್ಗೆ ಎರಡು ದೃಷ್ಟಿಕೋನಗಳಿವೆ, ಭಾರತದ ಬಗ್ಗೆ ಎರಡು ಪರಿಕಲ್ಪನೆಗಳಿವೆ. ಒಂದು ಕಡೆ ಆರ್‌ಎಸ್‌ಎಸ್ ಪರಿಕಲ್ಪನೆ ಇದೆ, ಅದೆಂದರೆ ಸರ್ವಾಧಿಕಾರ, ಶ್ರೇಣಿ ವ್ಯವಸ್ಥೆ, ಕೆಳಜಾತಿಯ ದಮನ, ದುರ್ಬಲ ವರ್ಗಗಳ ದಮನ, ಮಹಿಳೆಯರ ದಮನ, ಮಹಿಳೆಯರಿಗೆ ಅಗೌರವ -- ಮತ್ತು ಇನ್ನೊಂದು ಕಡೆ ಕಾಂಗ್ರೆಸ್ ಸಿದ್ಧಾಂತವಿದೆ, ಅದು ನಮಗೆ ಸ್ವಾತಂತ್ರ್ಯವನ್ನು ನೀಡಿತು, ಅದು ಎಲ್ಲರನ್ನೂ ಸಮಾನವಾಗಿ ಪರಿಗಣಿಸುತ್ತದೆ ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಹೇಳಿದರು.

ಕಾಂಗ್ರೆಸ್ ಸಿದ್ಧಾಂತವು ಎಲ್ಲಾ ಜಾತಿಗಳನ್ನು, ಎಲ್ಲಾ ಧರ್ಮಗಳನ್ನು ಸಮಾನವಾಗಿ ಪರಿಗಣಿಸುತ್ತದೆ. ಭಾರತವನ್ನು ನ್ಯಾಯಯುತ ಮತ್ತು ಸಾಮರಸ್ಯದ ಸ್ಥಳವನ್ನಾಗಿ ಮಾಡಲು ಬಯಸುತ್ತದೆ ಎಂದರು.

Rahul Gandhi
ರಾಹುಲ್ ಗಾಂಧಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡದ ಸರ್ಕಾರ: ಇಂಡಿಯಾ ಬ್ಲಾಕ್ ನಿಂದ ಸ್ಪೀಕರ್ ಭೇಟಿ

ಬಿಜೆಪಿಯ ವಿಭಜನೆ ನಿಮಗೆ ಗೊತ್ತಿದೆ. ಈಸ್ಟ್ ಇಂಡಿಯಾ ಕಂಪನಿ ಕಾರ್ಯನಿರ್ವಹಿಸುತ್ತಿದ್ದಂತೆ ಇಬ್ಬರು ಅಥವಾ ಮೂವರು ಉದ್ಯಮಿಗಳು ಕಾರ್ಯನಿರ್ವಹಿಸುತ್ತಿರುವುದನ್ನು ನೀವು ನೋಡಬಹುದು. ಅವರು ಎಲ್ಲವನ್ನೂ ಹೊಂದಿದ್ದಾರೆ, ಅವರು ಮಾಧ್ಯಮವನ್ನು ಹೊಂದಿದ್ದಾರೆ, ಅವರು ಟೆಲಿಕಾಂ ಮೂಲಸೌಕರ್ಯವನ್ನು ಹೊಂದಿದ್ದಾರೆ, ಅವರು ಬಯಸುವ ಯಾವುದನ್ನಾದರೂ ಪಡೆಯುತ್ತಾರೆ, ಅವರಿಗೆ ಭೂಮಿ ಸಿಗುತ್ತದೆ, ಅವರು ಬಂದರುಗಳನ್ನು ಬಯಸಿದರೆ, ಅವರಿಗೆ ಬಂದರುಗಳನ್ನು ಪಡೆಯುತ್ತಾರೆ, ಅವರು ರಕ್ಷಣಾ ಒಪ್ಪಂದಗಳನ್ನು ಬಯಸಿದರೆ, ಅವರಿಗೆ ರಕ್ಷಣಾ ಒಪ್ಪಂದಗಳು ಸಿಗುತ್ತವೆ ಎಂದರು.

ಕಾಂಗ್ರೆಸ್ ನಿರ್ಮಿಸಲು ಉದ್ದೇಶಿಸಿರುವ ಭಾರತ ಇದಲ್ಲ ಎಂದು ರಾಹುಲ್ ಗಾಂಧಿ ಹೇಳಿದರು, ಎಲ್ಲರೂ ಶ್ರೇಷ್ಠತೆಯನ್ನು ಆಶಿಸುವ ಮತ್ತು ಎಲ್ಲರೂ ಕನಸು ಕಾಣುವಂತಹ ಭಾರತವನ್ನು ನಿರ್ಮಿಸಲು ಪಕ್ಷವು ಉದ್ದೇಶಿಸಿದೆ ಎಂದು ಹೇಳಿದರು.

ನಮ್ಮ ಹೋರಾಟವು ಕಠಿಣ ಹೋರಾಟವಾಗಿದೆ, ಆದರೆ ನಾವು ಮೊದಲು ಹೆಚ್ಚು ಕಷ್ಟಕರವಾದ ಹೋರಾಟಗಳನ್ನು ಮಾಡಿದ್ದೇವೆ. ಕಾಂಗ್ರೆಸ್ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ್ದು, ಆರ್‌ಎಸ್‌ಎಸ್ ಮತ್ತು ಬಿಜೆಪಿ ಬ್ರಿಟಿಷ್ ಸಾಮ್ರಾಜ್ಯದ ಮುಂದೆ ತಮಾಷೆಯಾಗಿದೆ ಎಂದರು.

ಬಲಿಷ್ಠ ಜಿಲ್ಲಾ ಘಟಕ ಮುಖ್ಯ

ನಾವು ಬಿಜೆಪಿಯನ್ನು ಸೋಲಿಸಲು ಸಮರ್ಥರಾಗಿದ್ದೇವೆ, ಆದರೆ ಬಲವಾದ ಜಿಲ್ಲಾ ಘಟಕವಿಲ್ಲದೆ ನಾವು ಎಂದಿಗೂ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಜಿಲ್ಲಾಧ್ಯಕ್ಷರಿಂದ ನಾವು ಏನನ್ನು ನಿರೀಕ್ಷಿಸುತ್ತೇವೆ ಎಂದರೆ ನೀವು ಪಕ್ಷವನ್ನು ಬೆಳೆಸುತ್ತೀರಿ, ಹೆಚ್ಚಿನ ಸದಸ್ಯರನ್ನು ತರುತ್ತೀರಿ ಮತ್ತು ಸಮರ್ಥ ನಾಯಕರನ್ನು ತರುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದರು,

ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸುವ ಉದ್ದೇಶದಿಂದ, ಕಾಂಗ್ರೆಸ್‌ನ ಉನ್ನತ ನಾಯಕತ್ವವು ಜಿಲ್ಲಾ ಘಟಕದ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಮುಂಬರುವ ರಾಜ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ದೀರ್ಘಾವಧಿಯ ಕಾರ್ಯತಂತ್ರದೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಒತ್ತಾಯಿಸಿತು.

ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಜಿಲ್ಲಾ ಮುಖ್ಯಸ್ಥರೊಂದಿಗೆ ಇಂತಹ ಸಭೆಯನ್ನು ಆಯೋಜಿಸಿದ್ದು, ಇದರಲ್ಲಿ 13 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ 338 ಜಿಲ್ಲಾ ಮುಖ್ಯಸ್ಥರು ಭಾಗವಹಿಸಿದ್ದರು. ಏಪ್ರಿಲ್ 3 ಮತ್ತು 4 ರಂದು ಇಲ್ಲಿ ಎರಡು ಸಭೆಗಳನ್ನು ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com