Patna University student union ಚುನಾವಣೆ: ABVP ಭರ್ಜರಿ ಜಯ; 107 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆ!

ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯ ಫಲಿತಾಂಶಗಳು ತಡರಾತ್ರಿ ಘೋಷಣೆಯಾಗಿದ್ದು, ಈ ಬಾರಿ, PUSU ನ 107 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಒಬ್ಬ ವಿದ್ಯಾರ್ಥಿನಿ ಅಧ್ಯಕ್ಷೆ ಹುದ್ದೆಯನ್ನು ಗೆದ್ದಿದ್ದಾರೆ.
Patna University Student union Elections
ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಚುನಾವಣೆ ಗೆದ್ದ ಮೃಣಾಲಿನಿ
Updated on

ಪಾಟ್ನಾ: ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಗೆ ನಡೆದ ಚುನಾವಣೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಭರ್ಜರಿ ಜಯ ಸಾಧಿಸಿದ್ದು, 107 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ 'ಮಹಿಳಾ ಅಧ್ಯಕ್ಷೆ' ಆಯ್ಕೆಯಾಗಿದ್ದಾರೆ.

ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯ ಫಲಿತಾಂಶಗಳು ತಡರಾತ್ರಿ ಘೋಷಣೆಯಾಗಿದ್ದು, ಈ ಬಾರಿ, PUSU ನ 107 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಒಬ್ಬ ವಿದ್ಯಾರ್ಥಿನಿ ಅಧ್ಯಕ್ಷೆ ಹುದ್ದೆಯನ್ನು ಗೆದ್ದಿದ್ದಾರೆ. ಎಬಿವಿಪಿಯ ಮೈಥಿಲಿ ಮೃಣಾಲಿನಿ ಅಧ್ಯಕ್ಷೆ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಾರಿ, ಐದು ಪ್ರಮುಖ ಸ್ಥಾನಗಳ ಪೈಕಿ, ಮೂರು ಹುದ್ದೆಗಳು ವಿದ್ಯಾರ್ಥಿನಿಯರ ಪಾಲಾಗಿದೆ. ಸ್ವತಂತ್ರ ಅಭ್ಯರ್ಥಿ ಸಲೋನಿ ರಾಜ್ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು, NSUI ನ ಸೌಮ್ಯ ಶ್ರೀವಾಸ್ತವ ಖಜಾಂಚಿ ಹುದ್ದೆಯನ್ನು, ಸ್ವತಂತ್ರ ಅಭ್ಯರ್ಥಿ ಧೀರಜ್ ಉಪಾಧ್ಯಕ್ಷ ಹುದ್ದೆಯನ್ನು ಮತ್ತು NSUI ನ ರೋಹನ್ ಕುಮಾರ್ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಗೆದ್ದಿದ್ದಾರೆ.

ನಾವು ಮೂಲಭೂತ ವಿಷಯಗಳ ಮೇಲೆ ಕೆಲಸ ಮಾಡುತ್ತೇವೆ

ಗೆಲುವಿನ ನಂತರ, ಅಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾದ ಮೈಥಿಲಿ ಮೃಣಾಲಿನಿ ಮಾತನಾಡಿ, 'ಸಾಧ್ಯವಾದಷ್ಟು ಬೇಗ ಕೆಲಸವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. ಮೊದಲನೆಯದಾಗಿ ನಾವು ಮೂಲಭೂತ ವಿಷಯಗಳ ಮೇಲೆ ಕೆಲಸ ಮಾಡುತ್ತೇವೆ. ಶೀಘ್ರದಲ್ಲೇ ಪೊಲೀಸರು ಮತ್ತು ಆಡಳಿತವನ್ನು ಭೇಟಿ ಮಾಡುತ್ತೇನೆ. ಆರಂಭ ಚೆನ್ನಾಗಿದ್ದರೆ ಅಂತ್ಯವೂ ಚೆನ್ನಾಗಿರುತ್ತದೆ.

ಅತಿ ಹೆಚ್ಚು ಮತದಾನ

ರಾಜಕೀಯ ಪಕ್ಷಗಳ ವಿವಿಧ ಯುವ ಘಟಕಗಳು ನಡೆಸಿದ ತೀವ್ರ ಪ್ರಚಾರದ ಹೊರತಾಗಿಯೂ, ಶನಿವಾರ ನಡೆದ ಪಾಟ್ನಾ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (ಪಿಯುಎಸ್‌ಯು) ಚುನಾವಣೆಯಲ್ಲಿ ಕೇವಲ ಶೇ. 45.21% ಮಾತ್ರ ಮತದಾನವಾಗಿತ್ತು. ಆದಾಗ್ಯೂ, ಜಿಲ್ಲಾಡಳಿತವು ಜಾರಿಗೆ ತಂದ ಕಟ್ಟುನಿಟ್ಟಿನ ಭದ್ರತಾ ಕ್ರಮಗಳಿಂದಾಗಿ, ಚುನಾವಣೆ ಶಾಂತಿಯುತವಾಗಿ ನಡೆದಿದ್ದವು. ಪಾಟ್ನಾ ಕಾನೂನು ಕಾಲೇಜಿನಲ್ಲಿ ಅತಿ ಹೆಚ್ಚು ಅಂದರೆ ಶೇ.63.40 ರಷ್ಟು ಮತದಾನವಾಗಿದ್ದು, ಪಾಟ್ನಾ ವಿಜ್ಞಾನ ಕಾಲೇಜಿನಲ್ಲಿ ಶೇ.61.80 ರಷ್ಟು ಮತದಾನವಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಕಲೆ ಮತ್ತು ಕರಕುಶಲ ಕಾಲೇಜಿನಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದ್ದು, ಅಲ್ಲಿ ಕೇವಲ 17.69% ವಿದ್ಯಾರ್ಥಿಗಳು ಮತ ಚಲಾಯಿಸಿದ್ದರು. ವಾಣಿಜ್ಯ, ಶಿಕ್ಷಣ ಮತ್ತು ಕಾನೂನು ವಿಭಾಗಗಳು ಸಹ ಕಳಪೆ ಭಾಗವಹಿಸುವಿಕೆಯನ್ನು ಕಂಡವು ಮತ್ತು ಕೇವಲ 28.81% ವಿದ್ಯಾರ್ಥಿಗಳು ಮಾತ್ರ ಮತ ಚಲಾಯಿಸಿದ್ದರು. ಒಟ್ಟಾರೆ ಇಲ್ಲಿ ಶೇ. 45.21% ಮಾತ್ರ ಮತದಾನವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com