ಅಜ್ಮೀರ್: ಐದು ಅಂತಸ್ತಿನ ಹೋಟೆಲ್ ನಲ್ಲಿ ಭಾರಿ ಬೆಂಕಿ, ನಾಲ್ವರು ಸಾವು; ಪ್ರಾಣ ಉಳಿಸಿಕೊಳ್ಳಲು ಕಿಟಕಿಯಿಂದ ಹಾರಿದ ಗೆಸ್ಟ್ ಗಳು! Video

"ಡಿಗ್ಗಿ ಬಜಾರ್ ಪ್ರದೇಶದ ಹೋಟೆಲ್ ವೊಂದರಲ್ಲಿ ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದೆ. ಪೊಲೀಸ್ ತಂಡ ಸ್ಥಳದಲ್ಲಿದೆ.
A woman reportedly threw her child from a window to save it as the fire broke out
ಮಹಿಳೆಯೊಬ್ಬರು ಹೋಟೆಲ್ ನ ಕಿಟಕಿಯಿಂದ ಎಸೆದ ಮಗುವಿನ ಚಿತ್ರ
Updated on

ಜೈಪುರ: ರಾಜಸ್ಥಾನದ ಅಜ್ಮೀರ್‌ನ ಡಿಗ್ಗಿ ಬಜಾರ್ ಪ್ರದೇಶದ ಹೋಟೆಲ್‌ವೊಂದರಲ್ಲಿ ಗುರುವಾರ ಬೆಳಂಬೆಳಿಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡು ನಾಲ್ವರು ಸಾವನ್ನಪ್ಪಿದ್ದಾರೆ. ಐದು ಅಂತಸ್ತಿನ ಹೋಟೆಲ್‌ನಲ್ಲಿ ತಂಗಿದ್ದ ಕೆಲವು ಅತಿಥಿಗಳು ಕಿಟಕಿಗಳಿಂದ ಹಾರಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಡಿಗ್ಗಿ ಬಜಾರ್ ಪ್ರದೇಶದ ಹೋಟೆಲ್ ವೊಂದರಲ್ಲಿ ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದೆ. ಪೊಲೀಸ್ ತಂಡ ಸ್ಥಳದಲ್ಲಿದೆ. ಇದಕ್ಕಿದಂತೆ ಸಂಭವಿಸಿ ಬೆಂಕಿ ಅನಾಹುತದಲ್ಲಿ ಇಬ್ಬರು ಪುರುಷರು, ಒಬ್ಬ ಮಹಿಳೆ ಮತ್ತು ಮಗು ಸೇರಿದಂತೆ ನಾಲ್ವರು ಉಸಿರುಗಟ್ಟುವಿಕೆ ಮತ್ತು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ" ಎಂದು ಜೆಎಲ್‌ಎನ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಅನಿಲ್ ಸಮರಿಯಾ ತಿಳಿಸಿದ್ದಾರೆ.

ಹೋಟೆಲ್‌ಗೆ ಕಿರಿದಾದ ಮಾರ್ಗವು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೆಚ್ಚುವರಿ ಎಸ್ಪಿ ಹಿಮಾಂಶು ಜಂಗಿದ್ ತಿಳಿಸಿದ್ದಾರೆ.

ಸ್ಫೋಟದ ಶಬ್ದ ಕೇಳಿದ ನಂತರ ತನ್ನ ಹೆಂಡತಿಯೊಂದಿಗೆ ಹೋಟೆಲ್ ನಿಂದ ಹೊರಗೆ ಓಡಿ ಹೊರಗೆ ಬಂದೆ. ಮಹಿಳೆಯೊಬ್ಬರು ಕಿಟಕಿಯಿಂದ ನನ್ನ ಮಡಿಲಲ್ಲಿ ತನ್ನ ಮಗುವನ್ನು ಎಸೆದರು. ಆಕೆ ಕಟ್ಟಡದಿಂದ ಜಿಗಿಯಲು ಪ್ರಯತ್ನಿಸಿದರು. ಆದರೆ ನಾವು ಆಕೆಯನ್ನು ತಡೆದೆವು ಎಂದು ಹೋಟೆಲ್‌ನಲ್ಲಿ ತಂಗಿದ್ದ ಮಂಗಿಲಾ ಕಲೋಸಿಯಾ ಘಟನೆ ಕುರಿತು ವಿವರಿಸಿದರು. ಒಬ್ಬ ವ್ಯಕ್ತಿಯು ಕಿಟಕಿಯಿಂದ ಜಿಗಿದು ತಲೆಗೆ ಗಾಯಗಳಾಗಿವೆ ಎಂದು ಅವರು ಹೇಳಿದರು.

A woman reportedly threw her child from a window to save it as the fire broke out
Watch | ಕೋಲ್ಕತ ಹೋಟೆಲ್​ನಲ್ಲಿ ಅಗ್ನಿ ಅವಘಡ: 15 ಮಂದಿ ಸಜೀವ ದಹನ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com