ಪಹಲ್ಗಾಮ್ ದಾಳಿಯ ಉಗ್ರರು ಶ್ರೀಲಂಕಾಗೆ ಪಲಾಯನ? ಕೊಲಂಬೊ ವಿಮಾನ ನಿಲ್ದಾಣದಲ್ಲಿ ತಪಾಸಣೆ!
ನವದೆಹಲಿ: ಪಹಲ್ಗಾಮ್ ನಲ್ಲಿ ಹಿಂದೂಗಳ ಮಾರಣಹೋಮ ನಡೆಸಿದ್ದ ಉಗ್ರರು ಇದೀಗ ಚೆನ್ನೈ ಮೂಲಕ ಶ್ರೀಲಂಕಾಕ್ಕೆ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ.
ಮೇ 3ರಂದು ಚೆನ್ನೈನಿಂದ ಆಗಮಿಸಿದ ಶ್ರೀಲಂಕಾದ ಏರ್ಲೈನ್ಸ್ ವಿಮಾನವು ಬಂಡಾರನಾಯಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎ) ವಿಶೇಷ ಭದ್ರತಾ ಕಾರ್ಯಾಚರಣೆಯನ್ನು ಎದುರಿಸಿತು. ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಸಂಭಾವ್ಯ ಶಂಕಿತರ ಬಗ್ಗೆ ಭಾರತೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಭಾರತದಿಂದ ಎಚ್ಚರಿಕೆ ಬಂದಿದೆ ಎಂದು ಪೊಲೀಸ್ ಮಾಧ್ಯಮ ವಕ್ತಾರರು ದೃಢಪಡಿಸಿದರು. ಅದರ ನಂತರ ಶ್ರೀಲಂಕಾದ ಭದ್ರತಾ ಪಡೆಗಳು ವಿಮಾನ ಇಳಿದ ತಕ್ಷಣ ಅದನ್ನು ಶೋಧಿಸಿದವು.
UL 122 ವಿಮಾನವು ಬೆಳಿಗ್ಗೆ 11:59ಕ್ಕೆ ಕೊಲಂಬೊದಲ್ಲಿ ಲ್ಯಾಂಡ್ ಆಯಿತು. ಸ್ಥಳೀಯ ಅಧಿಕಾರಿಗಳು ಸಮಗ್ರ ಪರಿಶೀಲನೆಗೆ ನಡೆಸಿದರು ಎಂದು ಶ್ರೀಲಂಕಾ ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನದಲ್ಲಿ ಶಂಕಿತ ವ್ಯಕ್ತಿ ಇರುವ ಸಾಧ್ಯತೆ ಇದೆ ಎಂದು ಚೆನ್ನೈ ಪ್ರದೇಶ ನಿಯಂತ್ರಣ ಕೇಂದ್ರವು ಎಚ್ಚರಿಕೆ ನೀಡಿತ್ತು. ತನಿಖೆಯ ನಂತರ ವಿಮಾನವನ್ನು ಪರಿಶೀಲಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ದೃಢಪಡಿಸಿತು. ಆದರೆ ಭದ್ರತಾ ಕಾರ್ಯವಿಧಾನಗಳಿಂದಾಗಿ ಸಿಂಗಾಪುರಕ್ಕೆ ಮುಂದಿನ ವಿಮಾನ UL 308 ವಿಳಂಬವಾಯಿತು. ಶ್ರೀಲಂಕನ್ ಏರ್ಲೈನ್ಸ್ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಕಾಯ್ದುಕೊಳ್ಳಲು ಬದ್ಧವಾಗಿದೆ ಎಂದು ಹೇಳಿಕೆ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ