Uttarakhand: ಏಷ್ಯಾದ ಅತಿದೊಡ್ಡ ಹುಲಿ 'Hercules'; 7 ಅಡಿ ಉದ್ದ, 300 ಕೆಜಿ ತೂಕ; ಪ್ರವಾಸಿಗರು ದಂಗು! Video

ನೈನಿತಾಲ್ ಜಿಲ್ಲೆಯ ರಾಮನಗರ ಅರಣ್ಯ ವಿಭಾಗದ ಟೆರೈ ಪಶ್ಚಿಮದ ಫಾಟೋ ಪ್ರವಾಸೋದ್ಯಮ ವಲಯದಲ್ಲಿ ಈ ದೈತ್ಯ ಹುಲಿ ಕಾಣಿಸಿಕೊಂಡಿದೆ.
Massive ‘Hercules’ tiger
ದೈತ್ಯ ಹುಲಿ ಹರ್ಕ್ಯುಲಸ್
Updated on

ಡೆಹ್ರಾಡೂನ್: ಉತ್ತರಾಖಂಡದಲ್ಲಿ ದೈತ್ಯ ಹುಲಿಯೊಂದು ಪ್ರವಾಸಿಗರ ದಂಗು ಬಡಿಸಿದ್ದು, ಸುಮಾರು 300 ಕೆಜೆ ತೂಕದ ಏಷ್ಯಾದ ಅತೀದೊಡ್ಡ ಹುಲಿ 'Hercules' ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಹೌದು.. ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಫಾಟೋ ವಲಯದಲ್ಲಿ ಕಾಣಿಸಿಕೊಂಡ ಈ ದೈತ್ಯ ಹುಲಿ ಕಾಣಿಸಿಕೊಂಡಿದ್ದು, ಈ ಹುಲಿಯ ಉದ್ದ ಸುಮಾರು 7 ಅಡಿ ಎಂದು ಅಂದಾಜಿಸಲಾಗಿದೆ. ಅಂತೆಯೇ ಇದುಬರೊಬ್ಬರಿ 300 ಕೆಜಿ ತೂಕ ಹೊಂದಿದೆ ಎಂದು ಹೇಳಲಾಗಿದ್ದು, ಇದು ಏಷ್ಯಾದ ಅತೀದೊಡ್ಡ ಹುಲಿ ಎನ್ನಲಾಗಿದೆ.

ನೈನಿತಾಲ್ ಜಿಲ್ಲೆಯ ರಾಮನಗರ ಅರಣ್ಯ ವಿಭಾಗದ ಟೆರೈ ಪಶ್ಚಿಮದ ಫಾಟೋ ಪ್ರವಾಸೋದ್ಯಮ ವಲಯದಲ್ಲಿ ಈ ದೈತ್ಯ ಹುಲಿ ಕಾಣಿಸಿಕೊಂಡಿದೆ. ಹುಲಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜನರು ಈ ಹುಲಿಗೆ 'ಹರ್ಕ್ಯುಲಸ್' ಎಂದು ಹೆಸರಿಟ್ಟಿದ್ದಾರೆ. ಈ ಹುಲಿಯನ್ನು ಫಾಟೋ ವಲಯದ ಅತಿದೊಡ್ಡ ಹುಲಿ ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ.

ಇತರೆ ಹುಲಿಗಳೊಂದಿಗೆ ಹೋಲಿಕೆ ಮಾಡಿದರೆ ಈ ಹುಲಿ ತುಂಬಾ ದೊಡ್ಡದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಫಾಟೋ ವಲಯದಲ್ಲಿ ಈ ಹಿಂದೆ ಇಷ್ಟು ದೊಡ್ಡ ಹುಲಿ ಕಾಣಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

Massive ‘Hercules’ tiger
1984 riots: 'ಕಾಂಗ್ರೆಸ್‌ನ ತಪ್ಪುಗಳು ನಾನು ಪಕ್ಷದಲ್ಲಿ ಇಲ್ಲದಿದ್ದಾಗ ಸಂಭವಿಸಿವೆ.. ಆದರೂ ನಾನೇ ಜವಾಬ್ದಾರಿ ವಹಿಸುವೆ'- Rahul Gandhi

ಪ್ರವಾಸಿಗರ ಕ್ಯಾಮೆರಾ ಕಣ್ಣಿಗೆ ಸಿಕ್ಕ ದೈತ್ಯಹುಲಿ

ಇತ್ತೀಚೆಗೆ ಫಾಟೋ ವಲಯದ ಸಫಾರಿಯ ಸಮಯದಲ್ಲಿ ಪ್ರವಾಸಿಗರು ದೈತ್ಯ ಹುಲಿಯನ್ನು ನೋಡಿದ್ದಾರೆ. ಕೂಡಲೇ ಪ್ರವಾಸಿಗರು ಅದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಈ ಹುಲಿಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮ ವ್ಯಾಪಕ ವೈರಲ್ ಆಗುತ್ತಿದ್ದು, ಫಾಟೋ ವಲಯದಲ್ಲಿ ಹುಲಿಯನ್ನು ಅತಿದೊಡ್ಡ ಹುಲಿ ಎಂದು ಪರಿಗಣಿಸಲಾಗಿದೆ. ಫಾಟೊ ವಲಯದಲ್ಲಿ ನಾನು ಇಲ್ಲಿಯವರೆಗೆ ಇಷ್ಟು ದೊಡ್ಡ ಹುಲಿಯನ್ನು ನೋಡಿಲ್ಲ ಎಂದು ರಾಮನಗರ ಟೆರೈ ಪಶ್ಚಿಮ ಅರಣ್ಯ ವಿಭಾಗದ ಡಿಎಫ್‌ಒ ಪ್ರಕಾಶ್ ಆರ್ಯ ಹೇಳಿದ್ದಾರೆ.

ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕ ದೀಪ್ ರಾಜ್ವರ್ ಈ ಹುಲಿ ಬಗ್ಗೆ ಮಾತನಾಡಿದ್ದು, 'ಈ ಹುಲಿ ನಿಜವಾಗಿಯೂ ದೊಡ್ಡದಾಗಿದೆ. ಫಾಟೊ ವಲಯದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಹುಲಿ ಕಾಣಿಸಿಕೊಂಡಿದೆ ಎಂದು ಹೇಳಿದರು.

ಬಫರ್ ವಲಯದಲ್ಲಿ ಭಾರೀ ಹುಲಿಗಳು

ಜಿಮ್ ಕಾರ್ಬೆಟ್ ಕೊಂದ ಬ್ಯಾಚುಲರ್ ಆಫ್ ಪಾವಲ್‌ಗಢ್ 9 ಅಡಿ ಉದ್ದ ಮತ್ತು 300 ಕೆಜಿಗಿಂತ ಹೆಚ್ಚು ತೂಕವಿತ್ತು, ಅಂದರೆ, ಈ ದಾಖಲೆ ಈಗಾಗಲೇ ಅಸ್ತಿತ್ವದಲ್ಲಿದೆ ಎಂದು ಅವರು ಹೇಳಿದರು. ಬಫರ್ ವಲಯದ ಹುಲಿಗಳು ಹೆಚ್ಚಾಗಿ ಭಾರವಾಗಿ ಕಾಣುತ್ತವೆ, ಏಕೆಂದರೆ ಇಲ್ಲಿ ಹೆಚ್ಚಿನ ಬೇಟೆಯ ಲಭ್ಯತೆ ಇರುತ್ತದೆ. ಕೋರ್ ವಲಯದ ಹುಲಿಗಳು ಬೇಟೆಯಾಡಲು ಹೆಚ್ಚು ಶ್ರಮಿಸಬೇಕಾಗುತ್ತದೆ.

ಇದರಿಂದಾಗಿ ಅವು ಸ್ನಾಯುಗಳು ಮತ್ತು ಕಡಿಮೆ ತೂಕ ಹೊಂದಿರುತ್ತವೆ. 'ವಿರಾಟ್' ಎಂದು ಕರೆಯಲ್ಪಡುವ ಸೀತಾಬಾನಿಯ ಮತ್ತೊಂದು ಬೃಹತ್ ಹುಲಿಯನ್ನು ಸಹ ತಾನು ಸೆರೆಹಿಡಿದಿದ್ದೇನೆ ಮತ್ತು ಅದು 9 ಅಡಿಗಿಂತ ಹೆಚ್ಚು ಎತ್ತರವಿದೆ, ಅಂದರೆ, ಭಾರತದಲ್ಲಿ ದೊಡ್ಡ ಹುಲಿಗಳ ಕೊರತೆಯಿಲ್ಲ ಎಂದು ದೀಪ್ ರಾಜ್ವರ್ ಹೇಳಿದರು.

ಅಂದಹಾಗೆ ರಾಷ್ಟ್ರೀಯವಾಗಿ, 2022 ರ ಜನಗಣತಿಯು ಭಾರತದ ಒಟ್ಟು ಹುಲಿಗಳ ಸಂಖ್ಯೆ 3,682 ರಿಂದ 3,925 ರ ನಡುವೆ ಇರಬಹುದೆಂದು ಅಂದಾಜಿಸಿದೆ, ಮಧ್ಯಪ್ರದೇಶ 785 ರೊಂದಿಗೆ ಪ್ರಥಮ ಸ್ಥಾನದಲ್ಲಿದೆ ಮತ್ತು ಕರ್ನಾಟಕ 563 ರೊಂದಿಗೆ ಎರಡನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com