ಭಾರತದ ಗಡಿಯಲ್ಲಿ ಬೇಹುಗಾರಿಕೆ: ಪಾಕಿಸ್ತಾನಿ ರೇಂಜರ್ಸ್‌ ಯೋಧ BSF ವಶಕ್ಕೆ..!

ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಜೈಪುರ: ಭಾರತದ ಗಡಿಯಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಪಾಕಿಸ್ತಾನಿ ರೇಂಜರ್ಸ್‌ ಯೋಧನನ್ನು ಭಾರತದ ಗಡಿ ಭದ್ರತಾ ಪಡೆ ಶನಿವಾರ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಪಾಕಿಸ್ತಾನಿ ರೇಂಜರ್‌ನನ್ನು ಬಂಧಿಸಿದ್ದಾರೆ. ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಭಾರತದ ಗಡಿಯಲ್ಲಿ ಬೇಹುಗಾರಿಕೆ ನಡೆಸುತ್ತಿದ್ದಾಗ ಬಹಾವಲ್ಪುರ್ ವಲಯದಿಂದ ಬಿಎಸ್‌ಎಫ್‌ ಪಾಕಿಸ್ತಾನಿ ರೇಂಜರ್‌ನನ್ನು ಬಂಧಿಸಿದ್ದಾಗಿ ವರದಿಯಾಗಿದೆ.

ಬಿಎಸ್‌ಎಫ್ ಕಾನ್‌ಸ್ಟೆಬಲ್ ಒಂದು ವಾರಕ್ಕೂ ಹೆಚ್ಚು ಕಾಲ ಪಾಕಿಸ್ತಾನದ ವಶದಲ್ಲಿದ್ದು, ಅವರ ಭವಿಷ್ಯ ಇನ್ನೂ ಅನಿಶ್ಚಿತವಾಗಿದೆ. ಭಾರತದಿಂದ ಬಲವಾದ ಪ್ರತಿಭಟನೆಯ ಹೊರತಾಗಿಯೂ ಯೋಧನನ್ನು ಹಸ್ತಾಂತರಿಸಲು ಪಾಕಿಸ್ತಾನ ನಿರಾಕರಿಸಿದೆ. ಈ ನಡುವಲ್ಲೇ ಪಾಕಿಸ್ತಾನಿ ರೇಂಜರ್ಸ್‌ ಯೋಧನನ್ನು ಬಿಎಸ್ಎಫ್ ಪಡೆ ವಶಕ್ಕೆ ಪಡೆದಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಉಗ್ರರು ನಡೆಸಿದ್ದ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು.

ಸಂಗ್ರಹ ಚಿತ್ರ
ಪಾಕಿಸ್ತಾನ ಗಡಿಯೊಳಗೆ ಆಕಸ್ಮಿಕವಾಗಿ ಹೋದ BSF ಯೋಧನ ಭವಿಷ್ಯ ಅತಂತ್ರ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com