'ಪಹಲ್ಗಾಮ್‌ ದಾಳಿಗೆ 3 ದಿನ ಮೊದಲೇ ಮೋದಿಗೆ ಮಾಹಿತಿ ಇತ್ತು, ಹೀಗಾಗಿ ಕಾಶ್ಮೀರ ಭೇಟಿ ರದ್ದು ಮಾಡಿದ್ರು; ಆದ್ರೆ ಅಮಾಯಕರು ಬಲಿಯಾದ್ರು'; Video

ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರ "ಗುಪ್ತಚರ ವೈಫಲ್ಯ"ವನ್ನು ಒಪ್ಪಿಕೊಂಡಿದೆ. ದಾಳಿ ಬಗ್ಗೆ ಅವರಿಗೆ ಮಾಹಿತಿ ಇದ್ದರೂ, ಅವರು ಏಕೆ ಭದ್ರತೆಯನ್ನು ಹೆಚ್ಚಿಸಲಿಲ್ಲ?...
ರಾಂಚಿಯಲ್ಲಿ ಮಲ್ಲಿಕಾರ್ಜುನ ಖರ್ಗೆ
ರಾಂಚಿಯಲ್ಲಿ ಮಲ್ಲಿಕಾರ್ಜುನ ಖರ್ಗೆ
Updated on

ರಾಂಚಿ: ಕಳೆದ ತಿಂಗಳು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ "ಮೂರು ದಿನ ಮೊದಲೇ" ಗುಪ್ತಚರ ವರದಿಯನ್ನು ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಾಶ್ಮೀರ ಭೇಟಿಯನ್ನು ರದ್ದುಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರ "ಗುಪ್ತಚರ ವೈಫಲ್ಯ"ವನ್ನು ಒಪ್ಪಿಕೊಂಡಿದೆ. ದಾಳಿ ಬಗ್ಗೆ ಅವರಿಗೆ ಮಾಹಿತಿ ಇದ್ದರೂ, ಅವರು ಏಕೆ ಭದ್ರತೆಯನ್ನು ಹೆಚ್ಚಿಸಲಿಲ್ಲ?... ದಾಳಿಗೆ ಮೂರು ದಿನಗಳ ಮೊದಲು ಪ್ರಧಾನಿ ಮೋದಿಗೆ ಗುಪ್ತಚರ ವರದಿಯನ್ನು ಕಳುಹಿಸಲಾಗಿದೆ. ಆದ್ದರಿಂದ ಅವರು ಕಾಶ್ಮೀರಕ್ಕೆ ಭೇಟಿ ನೀಡುವ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದರು ಎಂಬುದನ್ನು ನಾನು ಪತ್ರಿಕೆಯಲ್ಲಿ ಓದಿದ್ದೇನೆ..." ಎಂದು ಖರ್ಗೆ ಹೇಳಿದ್ದಾರೆ.

ಪ್ರಧಾನಿ ಮೋದಿ ಕಾಶ್ಮೀರ ಭೇಟಿ ರದ್ದುಗೊಳಿಸಿದರು. ಆದರೆ ಅಮಾಯಕರು ಬಲಿಯಾದರು. ಜನರನ್ನು ರಕ್ಷಿಸಲು ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚಿಸಲಿಲ್ಲ. ಅವರು ಭದ್ರತಾ ವೈಫಲ್ಯದ ಹೊಣೆ ಹೊರಬೇಕು ಎಂದು ಕಾಂಗ್ರೆಸ್ ಅಧ್ಯಕ್ಷರು ಆಗ್ರಹಿಸಿದರು.

"ನಿಮ್ಮ ಭದ್ರತೆ ದೃಷ್ಟಿಯಿಂದ ನೀವು ಅಲ್ಲಿಗೆ ಭೇಟಿ ನೀಡುವುದು ಸೂಕ್ತವಲ್ಲ ಎಂದು ಗುಪ್ತಚರ ವರದಿ ಹೇಳಿದಾಗ, ಜನರನ್ನು ರಕ್ಷಿಸಲು ನೀವು ಭದ್ರತಾ ಪಡೆ, ಗುಪ್ತಚರ ಸಂಸ್ಥೆಗಳು, ಸ್ಥಳೀಯ ಪೊಲೀಸರು ಮತ್ತು ಗಡಿ ಪಡೆಗೆ ಏಕೆ ತಿಳಿಸಲಿಲ್ಲ? ನಿಮಗೆ ಮಾಹಿತಿ ಸಿಕ್ಕಾಗ, ನೀವು ನಿಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದೀರಿ. ಆದರೆ ಅಲ್ಲಿ ಬಲಿಯಾದ ಅಮಾಯಕ ಪ್ರವಾಸಿಗರನ್ನು ರಕ್ಷಿಸಲು ಹೆಚ್ಚಿನ ಪಡೆಗಳನ್ನು ಏಕೆ ಕಳುಹಿಸಲಿಲ್ಲ...?" ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ನಡೆದ 'ಸಂವಿಧಾನ್ ಬಚಾವೋ' ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷರು, "ಸರ್ವಪಕ್ಷ ಸಭೆಯಲ್ಲಿ, ನೀವು (ಪ್ರಧಾನಿ ಮೋದಿ) ಗುಪ್ತಚರ ವೈಫಲ್ಯವನ್ನು ಒಪ್ಪಿಕೊಂಡಿದ್ದೀರಿ" ಎಂದು ಹೇಳಿದರು.

ರಾಂಚಿಯಲ್ಲಿ ಮಲ್ಲಿಕಾರ್ಜುನ ಖರ್ಗೆ
ಜಾತಿ ಗಣತಿಯಲ್ಲಿ ತೆಲಂಗಾಣ ಮಾದರಿ ಅಳವಡಿಸಿಕೊಳ್ಳಿ, ಮೀಸಲಾತಿ ಮೇಲಿನ ಶೇ 50 ರಷ್ಟು ಮಿತಿ ತೆಗೆದುಹಾಕಿ: ಪ್ರಧಾನಿ ಮೋದಿಗೆ ಖರ್ಗೆ ಆಗ್ರಹ

"ಗುಪ್ತಚರ ವೈಫಲ್ಯವನ್ನು ಒಪ್ಪಿಕೊಂಡಾಗ ಪಹಲ್ಗಾಮ್ ದಾಳಿಯ ಜೀವಹಾನಿಗೆ ಕೇಂದ್ರವೇ ಹೊಣೆಗಾರನಾಗಬೇಕಲ್ಲವೇ" ಎಂದು ಖರ್ಗೆ ಪ್ರಶ್ನಿಸಿದರು.

"ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಯಾವುದೇ ಕ್ರಮಕ್ಕೆ" ಕಾಂಗ್ರೆಸ್ ಕೇಂದ್ರದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಖರ್ಗೆ ಘೋಷಿಸಿದರು. ಏಕೆಂದರೆ ದೇಶ "ಪಕ್ಷ, ಧರ್ಮ ಮತ್ತು ಜಾತಿಯನ್ನು ಮೀರಿದ್ದು ಮತ್ತು ಸರ್ವೋಚ್ಚ" ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com