Punjab: ಪಾಕಿಸ್ತಾನ ಡ್ರೋನ್ ದಾಳಿಯಲ್ಲಿ ಒಂದೇ ಕುಟುಂಬದ ಮೂವರಿಗೆ ಗಾಯ; ಆರು ಗಡಿ ಜಿಲ್ಲೆಗಳಲ್ಲಿ ವಿದ್ಯುತ್ ವ್ಯತ್ಯಯ

ಜಮ್ಮು ಮತ್ತು ಕಾಶ್ಮೀರದ ಜಮ್ಮು ಮತ್ತು ಸಾಂಬಾ ಮತ್ತು ಪಂಜಾಬ್‌ನ ಪಠಾಣ್‌ಕೋಟ್, ಫಿರೋಜ್‌ಪುರ ಮತ್ತು ಫಜಿಲ್ಕಾದಲ್ಲಿ ಡ್ರೋನ್‌ಗಳು ಕಾಣಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.
The armed drone that was neutralised in Ferozepur fell and hit a house, injuring three members of a family.
ಫಿರೋಜ್‌ಪುರದಲ್ಲಿ ತಟಸ್ಥಗೊಳಿಸಲಾದ ಶಸ್ತ್ರಸಜ್ಜಿತ ಡ್ರೋನ್ ಮನೆ ಬಳಿ ಬಿದ್ದಿರುವ ದೃಶ್ಯ.(Photo | Special Arrangement)
Updated on

ಚಂಡೀಗಢ: ಪಾಕಿಸ್ತಾನವು ಶುಕ್ರವಾರ ರಾತ್ರಿ ಪಂಜಾಬ್‌ನ ಗಡಿ ಜಿಲ್ಲೆಗಳಿಗೆ ಡ್ರೋನ್‌ ದಾಳಿ ನಡೆಸಿದ್ದರಿಂದ ಫಿರೋಜ್‌ಪುರದ ಹಳ್ಳಿಯೊಂದರಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಗಾಯಗೊಂಡಿದ್ದಾರೆ. ಡ್ರೋನ್‌ಗಳನ್ನು ತಟಸ್ಥಗೊಳಿಸಿದಾಗ ಅನೇಕ ಸ್ಫೋಟಗಳು ಕೇಳಿಬಂದವು. ಆರು ಗಡಿ ಜಿಲ್ಲೆಗಳಾದ ಅಮೃತಸರ, ಗುರುದಾಸ್ಪುರ್, ಪಠಾಣ್‌ಕೋಟ್, ಫಿರೋಜ್‌ಪುರ, ಫಜಿಲ್ಕಾ ಮತ್ತು ತರಣ್ ತರಣ್ ನಲ್ಲಿ ವ್ಯಾಪಕ ವಿದ್ಯುತ್ ಕಡಿತಗೊಳಿಸಲಾಯಿತು.

ಜಮ್ಮು ಮತ್ತು ಕಾಶ್ಮೀರದ ಜಮ್ಮು ಮತ್ತು ಸಾಂಬಾ ಮತ್ತು ಪಂಜಾಬ್‌ನ ಪಠಾಣ್‌ಕೋಟ್, ಫಿರೋಜ್‌ಪುರ ಮತ್ತು ಫಜಿಲ್ಕಾದಲ್ಲಿ ಡ್ರೋನ್‌ಗಳು ಕಾಣಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ. ಖೈ ಫೆಮೆ ಕೆ ಗ್ರಾಮದ ಮನೆಯ ಮೇಲೆ ಒಂದು ಡ್ರೋನ್ ಬಿದ್ದು ಒಂದು ಕುಟುಂಬದ ಮೂವರು ಸದಸ್ಯರು ಗಾಯಗೊಂಡಿದ್ದಾರೆ. ಅವರನ್ನು ಲಖ್ವಿಂದರ್ ಸಿಂಗ್ ಅವರ ಮಗ ಮೋನು ಸಿಂಗ್ ಎಂದು ಗುರುತಿಸಲಾಗಿದೆ. ಲಖ್ವಿಂದರ್ ಅವರ ಪತ್ನಿ ಸುಖ್ವಿಂದರ್ ಕೌರ್. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

"ಫಿರೋಜ್‌ಪುರದಲ್ಲಿ ಭಾರೀ ಡ್ರೋನ್ ದಾಳಿ ನಡೆದಿದ್ದು, ಡ್ರೋನ್ ಅನ್ನು ನಿಷ್ಕ್ರಿಯಗೊಳಿಸಲಾಗಿದೆ. ಅದು ಫಿರೋಜ್‌ಪುರ ಬಳಿಯ ಖೈ ಫೆಮೆ ಕೆ ಗ್ರಾಮದಲ್ಲಿರುವ ಮನೆ ಮೇಲೆ ಬೆಂಕಿಯ ಉಂಡೆಯಾಗಿ ಬಿದ್ದಿದೆ. ಒಂದೇ ಕುಟುಂಬದ ಮೂವರು ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ ಸಮಯದಲ್ಲಿ ಆ ಮಹಿಳೆ ಅಡುಗೆ ಮಾಡುತ್ತಿದ್ದಳು ಮತ್ತು ಅವರಿಗೆ ಹೆಚ್ಚಿನ ಸುಟ್ಟ ಗಾಯಗಳಾಗಿವೆ. ಅಲ್ಲದೆ ಆಕೆಯ ಪತಿ ಮತ್ತು ಮಗನಿಗೂ ಕೂಡ ಸುಟ್ಟು ಗಾಯಗಳಾಗಿವೆ."

ಗ್ರಾಮವು ಸೇನಾ ಕಂಟೋನ್ಮೆಂಟ್‌ಗೆ ಹತ್ತಿರದಲ್ಲಿದೆ ಮತ್ತು ಡ್ರೋನ್ ದಾಳಿಯು ಬಹುಶಃ ಅಲ್ಲಿನ ಸೇನಾ ನೆಲೆಯನ್ನು ಹೊಡೆಯುವ ಟಾರ್ಗೆಟ್ ಹೊಂದಿರಬಹುದು. ಆದರೆ ಅದು ತಪ್ಪಿ ಗ್ರಾಮದಲ್ಲಿ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು, ಪಾಕಿಸ್ತಾನ ಸೇನೆಯು ಶುಕ್ರವಾರ ಸಂಜೆ ಈ ಗಡಿ ಪಟ್ಟಣದಲ್ಲಿ ಸರಣಿ ಡ್ರೋನ್‌ಗಳನ್ನು ಹಾರಿಸಿತು. ಹಲವಾರು ಕೆಂಪು ಬಣ್ಣದ ಹಾರುವ ವಸ್ತುಗಳು (ಸ್ವರ್ಮ್ ಡ್ರೋನ್‌ಗಳು) ಒಂದರ ನಂತರ ಒಂದರಂತೆ ಬರುತ್ತಿರುವುದನ್ನು ಕಾಣಬಹುದು.

ಶುಕ್ರವಾರ ಸಂಜೆ ದಕ್ಷಿಣ ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣ ಮತ್ತು ಅವಂತಿಪೋರಾ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಬೃಹತ್ ಡ್ರೋನ್ ದಾಳಿಗಳು ನಡೆದವು.

PAK DRONE
ಪಾಕ್ ಡ್ರೋನ್ ದಾಳಿ ಪತನ

ಈ ಸ್ಥಳಗಳ ಜೊತೆಗೆ, ಉತ್ತರದ ಬಾರಾಮುಲ್ಲಾದಿಂದ ದಕ್ಷಿಣದ ಭುಜ್‌ವರೆಗೆ, ಅಂತರರಾಷ್ಟ್ರೀಯ ಗಡಿ ಮತ್ತು ಪಾಕಿಸ್ತಾನದೊಂದಿಗಿನ ನಿಯಂತ್ರಣ ರೇಖೆಯ ಉದ್ದಕ್ಕೂ 26 ಸ್ಥಳಗಳಲ್ಲಿ ಡ್ರೋನ್‌ಗಳು ಕಂಡುಬಂದಿವೆ. ಸೇನಾ ಹೇಳಿಕೆಯ ಪ್ರಕಾರ, ನಾಗರಿಕರು ಮತ್ತು ಮಿಲಿಟರಿ ಟಾರ್ಗೆಟ್ ಗಳಿಗೆ ಸಂಭಾವ್ಯ ಬೆದರಿಕೆಯನ್ನುಂಟುಮಾಡುವ ಶಂಕಿತ ಶಸ್ತ್ರಸಜ್ಜಿತ ಡ್ರೋನ್‌ಗಳು ಇವುಗಳಲ್ಲಿ ಸೇರಿವೆ.

ಬಾರಾಮುಲ್ಲಾ, ಶ್ರೀನಗರ, ಅವಂತಿಪೋರಾ, ನಾಗ್ರೋಟಾ, ಜಮ್ಮು, ಫಿರೋಜ್‌ಪುರ, ಪಠಾಣ್‌ಕೋಟ್, ಫಾಜಿಲ್ಕಾ, ಲಾಲ್‌ಗಢ್ ಜಟ್ಟಾ, ಜೈಸಲ್ಮೇರ್, ಬಾರ್ಮರ್, ಭುಜ್, ಕುವಾರ್‌ಬೆಟ್ ಮತ್ತು ಲಖಿ ನಲಾ ಈ ಸ್ಥಳಗಳಲ್ಲಿ ಸೇರಿವೆ.

ಬಾರಾಮುಲ್ಲಾ, ಶ್ರೀನಗರ, ಅವಂತಿಪೋರಾ, ನಾಗ್ರೋಟಾ, ಜಮ್ಮು, ಫಿರೋಜ್‌ಪುರ, ಪಠಾಣ್‌ಕೋಟ್, ಫಾಜಿಲ್ಕಾ, ಲಾಲ್‌ಗಢ್ ಜಟ್ಟಾ, ಜೈಸಲ್ಮೇರ್, ಬಾರ್ಮರ್, ಭುಜ್, ಕುವಾರ್‌ಬೆಟ್ ಮತ್ತು ಲಖಿ ನಲಾ ಈ ಸ್ಥಳಗಳಲ್ಲಿ ಸೇರಿವೆ.

ಮಾಹಿತಿಯ ಪ್ರಕಾರ, ಈ ಡ್ರೋನ್‌ಗಳಲ್ಲಿ ಕೆಲವು ಸ್ಫೋಟಕಗಳನ್ನು ಹೊತ್ತೊಯ್ಯುತ್ತಿದ್ದವು ಮತ್ತು ಅವುಗಳಲ್ಲಿ ಕೆಲವು ಕಣ್ಗಾವಲುಗಾಗಿ ಉದ್ದೇಶಿಸಲಾಗಿತ್ತು. ಏತನ್ಮಧ್ಯೆ, ಫಿರೋಜ್‌ಪುರ ನಗರದ ಪ್ರಮುಖ ಸೇತುವೆಗಳು ಮತ್ತು ಇತರ ಕಾರ್ಯತಂತ್ರದ ಸ್ಥಾಪನೆಗಳ ಭದ್ರತೆಯನ್ನು ಸೇನಾ ಸಿಬ್ಬಂದಿ ವಹಿಸಿಕೊಂಡಿದ್ದಾರೆ.

ಮನೆ ಹಾನಿಗೊಳಗಾದ ಗ್ರಾಮಕ್ಕೆ ತಂಡಗಳನ್ನು ಕಳುಹಿಸಲಾಗಿದೆ ಎಂದು ಫಿರೋಜ್‌ಪುರದ ಉಪ ಆಯುಕ್ತ ದೀಪ್ಶಿಖಾ ಶರ್ಮಾ ತಿಳಿಸಿದ್ದಾರೆ.

ರಾಜ್ಯದ ಆರು ಗಡಿ ಜಿಲ್ಲೆಗಳಲ್ಲಿ ರಾತ್ರಿ 8 ಗಂಟೆಗೆ ಸೈರನ್‌ಗಳು ಮೊಳಗುತ್ತಿದ್ದಂತೆ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಯಿತು ಮತ್ತು ಅಧಿಕಾರಿಗಳು ವಿದ್ಯುತ್ ಸರಬರಾಜನ್ನು ಆಫ್ ಮಾಡಿದರು ಎಂದು ಮೂಲಗಳು ತಿಳಿಸಿವೆ. ಗಡಿ ಜಿಲ್ಲೆಗಳಲ್ಲದೆ, ಹೋಶಿಯಾರ್‌ಪುರದಲ್ಲಿಯೂ ವಿದ್ಯುತ್ ಕಡಿತಗೊಳಿಸಲಾಯಿತು. ಫಿರೋಜ್‌ಪುರ, ಅಮೃತಸರ ಮತ್ತು ಪಠಾಣ್‌ಕೋಟ್‌ಗಳಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ಸ್ಥಳೀಯರು ಹೇಳಿದ್ದಾರೆ.

ಗುರುವಾರ ರಾತ್ರಿಯೂ ಸಹ, ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಶುಕ್ರವಾರ ಬೆಳಿಗ್ಗೆ 5.30 ರ ಸುಮಾರಿಗೆ ವಿದ್ಯುತ್ ಪೂರೈಕೆ ಮರಳಿತು.

The armed drone that was neutralised in Ferozepur fell and hit a house, injuring three members of a family.
ಜಮ್ಮು ಸೇರಿದಂತೆ ವಿವಿಧೆಡೆ ಮತ್ತೆ ಪಾಕ್ ಡ್ರೋನ್ ದಾಳಿ: 'ಸುದರ್ಶನ ಚಕ್ರ'ದಿಂದ ಧ್ವಂಸಗೊಳಿಸಿದ ಭಾರತೀಯ ಸೇನೆ! ವರದಿಗಳು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com