ಜಮ್ಮು: ಪಾಕಿಸ್ತಾನ ಶೆಲ್ ದಾಳಿಯಲ್ಲಿ BSF ಯೋಧ ಹುತಾತ್ಮ, ಏಳು ಮಂದಿಗೆ ಗಾಯ

ಸಬ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಇಮ್ತೇಯಾಜ್ ಅವರು ಹುತಾತ್ಮರಾಗಿರುವುದಾಗಿ ಹಿರಿಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Mohammed Imteyaz
ಹುತಾತ್ಮ ಸಬ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಇಮ್ತೇಯಾಜ್
Updated on

ಜಮ್ಮು: ಜಮ್ಮುವಿನ ಅಂತರಾಷ್ಟ್ರೀಯ ಗಡಿಯಲ್ಲಿ ಶನಿವಾರ ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ ಎಸ್ ಪುರ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದೆ. ಸಬ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಇಮ್ತೇಯಾಜ್ ಅವರು ಹುತಾತ್ಮರಾಗಿರುವುದಾಗಿ ಹಿರಿಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನವು ಆರಂಭಿಸಿದ ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಇಮ್ತೇಯಾಜ್ ಗಾಯಗೊಂಡು ಹುತಾತ್ಮರಾದರೆ, ಇತರ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Mohammed Imteyaz
ಕದನ ವಿರಾಮ ಉಲ್ಲಂಘನೆ: ಇದಕ್ಕೆ ಪಾಕಿಸ್ತಾನವೇ ಸಂಪೂರ್ಣ ಹೊಣೆ- ವಿಕ್ರಮ್ ಮಿಸ್ರಿ

ಸಬ್ ಇನ್ಸ್‌ಪೆಕ್ಟರ್ ಎಂಡಿ ಇಮ್ತೇಯಾಜ್ ಅವರು ರಾಷ್ಟ್ರದ ಸೇವೆಯಲ್ಲಿ ಮಾಡಿದ ಅತ್ಯುನ್ನತ ತ್ಯಾಗವನ್ನು ಗೌರವಿಸುತ್ತೇವೆ ಎಂದು ಎಂದು ಪಡೆಯ ಜಮ್ಮು ಗಡಿಭಾಗವು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com