
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ನಡುವೆ, ಪಾಕಿಸ್ತಾನದೊಂದಿಗೆ ಮಾತುಕತೆ ನಡೆದರೆ ಅದು PoK ಬಿಟ್ಟು ತೊಲಗುವುದು, ಉಗ್ರರ ಹಸ್ತಾಂತರಕಷ್ಟೇ ಮಹತ್ವ ಎಂದು ಭಾರತ ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದೆ. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಮಾತುಕತೆ ಇರುವುದಿಲ್ಲ.
"ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ಒಂದೇ ಒಂದು ವಿಷಯ ಉಳಿದಿದೆ. ಅದು ಪಾಕ್ ಆಕ್ರಮಿತ ಕಾಶ್ಮೀರ (PoK) ಹಿಂತಿರುಗಿಸುವಿಕೆ. ಇದನ್ನು ಹೊರತುಪಡಿಸಿ ಮಾತನಾಡಲು ಏನೂ ಇಲ್ಲ. ಪಾಕಿಗಳು ಭಯೋತ್ಪಾದಕರನ್ನು ಹಸ್ತಾಂತರಿಸುವ ಬಗ್ಗೆ ಮಾತನಾಡಿದರೆ ನಾವು ಮಾತನಾಡಬಹುದು. ನಮಗೆ ಬೇರೆ ಯಾವುದೇ ವಿಷಯದ ಬಗ್ಗೆ ಮಾತನಾಡುವ ಉದ್ದೇಶವಿಲ್ಲ. ನಮಗೆ ಯಾವುದೇ ಮಧ್ಯಸ್ಥಿಕೆ ಬೇಡ. ನಮಗೆ ಯಾರ ಮಧ್ಯಸ್ಥಿಕೆಯೂ ಅಗತ್ಯವಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಪಹಲ್ಗಾಮ್ ಒಂದು ಪ್ರತ್ಯೇಕ ಘಟನೆಯಾಗಿದ್ದು, ಪಾಕಿಸ್ತಾನದ ವಿರುದ್ಧದ ಕ್ರಮವು ನಲವತ್ತು ವರ್ಷಗಳ ಭಯೋತ್ಪಾದನೆಯ ಪರಿಣಾಮವಾಗಿದೆ.
'ಕದನ ವಿರಾಮ' ಪದ ಏಕೆ ಬಳಸಲಿಲ್ಲ ಎಂಬುದರ ಕುರಿತು ಸರ್ಕಾರಿ ಮೂಲಗಳು, "ಆಪರೇಷನ್ ಸಿಂಧೂರ್ ಮುಗಿದಿಲ್ಲ. ನಾವು ಹೊಸ ಸಾಮಾನ್ಯ ಸ್ಥಿತಿಯಲ್ಲಿದ್ದೇವೆ. ಅದಕ್ಕಾಗಿಯೇ ನಾವು 'ಅರ್ಥಮಾಡಿಕೊಳ್ಳುವುದು' ಮತ್ತು ಗುಂಡಿನ ದಾಳಿಯನ್ನು ನಿಲ್ಲಿಸುವಂತಹ ಪದಗಳನ್ನು ಬಳಸುತ್ತಿದ್ದೇವೆ. ಜಗತ್ತು ಇದನ್ನು ಒಪ್ಪಿಕೊಳ್ಳಬೇಕು. ಪಾಕಿಸ್ತಾನ ಇದನ್ನು ಒಪ್ಪಿಕೊಳ್ಳಬೇಕು, ಅದು ಎಂದಿನಂತೆ ಮುಂದುವರಿಯಲು ಸಾಧ್ಯವಿಲ್ಲ" ಎಂದು ಹೇಳಿದರು.
ಮೇ 7ರಂದು ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿಯ ನಂತರ, ಭಾರತವು ಈ ದಾಳಿಗಳನ್ನು ನಾವು ನಡೆಸಿದ್ದೇವೆ ಎಂದು ಪಾಕಿಸ್ತಾನದ ಡಿಜಿಎಂಒಗೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಗಳು ಮಾತನಾಡಲು ಬಯಸಿದರೆ ಅವರು ಹಾಗೆ ಹೇಳಬಹುದಿತ್ತು. ಆದರೆ ಪಾಕಿಸ್ತಾನ ಮಾತನಾಡಲಿಲ್ಲ, ಬದಲಿಗೆ ದಾಳಿಗಳನ್ನು ಪ್ರಾರಂಭಿಸಿತು. ಮೇ 10ರಂದು ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಎಂಟು ವಾಯುನೆಲೆಗಳನ್ನು ನಾಶಪಡಿಸಿದ ಬಳಿಕ ಪಾಕಿಸ್ತಾನದ ಡಿಜಿಎಂಒ ಅವರಿಂದ ಕರೆ ಬಂದು ಅವರು ಕದನ ವಿರಾಮದ ಬಗ್ಗೆ ಮಾತನಾಡಿದರು ಮೂಲಗಳು ತಿಳಿಸಿವೆ.
Advertisement