
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಸಶಸ್ತ್ರ ಪಡೆಗಳ ಶೌರ್ಯ ಮತ್ತು ಧೈರ್ಯಕ್ಕೆ ನಮನ ಸಲ್ಲಿಸಿದ್ದು ಆಪರೇಷನ್ ಸಿಂಧೂರ್ ಅನ್ನು ದೇಶದ ಮಹಿಳೆಯರಿಗೆ ಅರ್ಪಿಸಿದರು. ಕಳೆದ ಕೆಲವು ದಿನಗಳಲ್ಲಿ ನಾವೆಲ್ಲರೂ ದೇಶದ ಸಾಮರ್ಥ್ಯ ಮತ್ತು ತಾಳ್ಮೆಯನ್ನು ನೋಡಿದ್ದೇವೆ. ನಾನು ಸಶಸ್ತ್ರ ಪಡೆಗಳು, ಮಿಲಿಟರಿ, ಗುಪ್ತಚರ ಸಂಸ್ಥೆ ಮತ್ತು ವಿಜ್ಞಾನಿಗಳಿಗೆ ವಂದಿಸುತ್ತೇನೆ ಎಂದು ಮೋದಿ ಹೇಳಿದರು. ಇಂದು, ನಾನು ಈ ಶೌರ್ಯ, ಧೈರ್ಯವನ್ನು (ಸಶಸ್ತ್ರ ಪಡೆಗಳ) ನಮ್ಮ ದೇಶದ ಪ್ರತಿಯೊಬ್ಬ ತಾಯಿಗೆ, ದೇಶದ ಪ್ರತಿಯೊಬ್ಬ ಸಹೋದರಿಗೆ ಮತ್ತು ದೇಶದ ಪ್ರತಿಯೊಬ್ಬ ಮಗಳಿಗೆ ಅರ್ಪಿಸುತ್ತೇನೆ ಎಂದರು.
ಆಪರೇಷನ್ ಸಿಂಧೂರ್ ಕೇವಲ ಹೆಸರಲ್ಲ. ಇದು ದೇಶದ ಕೋಟ್ಯಾಂತರ ಜನರ ಭಾವನೆಯ ಪ್ರತಿಬಿಂಬವಾಗಿದೆ. ಆಪರೇಷನ್ ಸಿಂಧೂರ್ ನ್ಯಾಯದ ಅವಿಚ್ಛಿನ್ನ ಪ್ರತಿಜ್ಞೆಯಾಗಿದೆ. ಮೇ 6ರ ತಡರಾತ್ರಿ ಮತ್ತು ಮೇ 7ರ ಬೆಳಿಗ್ಗೆ, ಇಡೀ ಜಗತ್ತು ಈ ಪ್ರತಿಜ್ಞೆಯು ಫಲಿತಾಂಶವಾಗಿ ಬದಲಾಗುವುದನ್ನು ಕಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಆಪರೇಷನ್ ಸಿಂಧೂರ್ ನಂತರ ಮೊದಲ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ಪಡೆಗಳು ಭಯೋತ್ಪಾದಕರ ಕಟ್ಟಡಗಳ ಮೇಲೆ ದಾಳಿ ಮಾಡಿದ್ದಲ್ಲದೆ, ಅವರ ಧೈರ್ಯವನ್ನೂ ಪುಡಿಪುಡಿ ಮಾಡಿವೆ ಎಂದು ಹೇಳಿದರು.
ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಿವೆ. ಭಾರತ ಇಷ್ಟೊಂದು ದೊಡ್ಡ ಹೆಜ್ಜೆಗಳನ್ನು ಇಡುತ್ತದೆ ಎಂದು ಭಯೋತ್ಪಾದಕರು ಕನಸು ಕಂಡಿರಲಿಲ್ಲ... ಭಾರತೀಯ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ದಾಳಿ ಮಾಡಿದಾಗ, ಅದು ಭಯೋತ್ಪಾದಕರ ಕಟ್ಟಡಗಳ ಮೇಲೆ ಮಾತ್ರವಲ್ಲ, ಅವರ ಧೈರ್ಯವನ್ನು ಮಣ್ಣಾಗಿಸಿದೆ ಎಂದರು.
ಭವಾಲ್ಪುರ್ ಮತ್ತು ಮುರಿಡ್ಕೆಯಂತಹ ಭಯೋತ್ಪಾದಕ ತಾಣಗಳು ಜಾಗತಿಕ ಭಯೋತ್ಪಾದನೆಯ ವಿಶ್ವವಿದ್ಯಾಲಯಗಳಾಗಿದ್ದವು. 9/11 ಅಥವಾ ಭಾರತದಲ್ಲಿ ನಡೆದ ದೊಡ್ಡ ಭಯೋತ್ಪಾದಕ ದಾಳಿಗಳು ಸೇರಿದಂತೆ ಜಗತ್ತಿನ ಎಲ್ಲಾ ದೊಡ್ಡ ಭಯೋತ್ಪಾದಕ ದಾಳಿಗಳಿಗೂ ಈ ಭಯೋತ್ಪಾದಕ ತಾಣಗಳಿಗೂ ಸಂಬಂಧಿಸಿವೆ ಎಂದು ಮೋದಿ ಹೇಳಿದರು.
Advertisement