ಕದನ ವಿರಾಮ: ಶಾಂತಿಯುತ ಮಾರ್ಗ ಕಂಡುಕೊಂಡಿದ್ದಕ್ಕೆ ಮೋದಿ ಸರ್ಕಾರವನ್ನು ರಾಜಕೀಯವಾಗಿ ಶಿಕ್ಷಿಸಬಾರದು!

ಕೆಲವು ಟಿವಿ ಸುದ್ದಿ ವಾಹಿನಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಹವಾನಿಯಂತ್ರಿತ ಸ್ಟುಡಿಯೋಗಳು ಮತ್ತು ಡ್ರಾಯಿಂಗ್ ರೂಮ್‌ಗಳಲ್ಲಿ ಕುಳಿತು ಕದನ ವಿರಾಮವನ್ನು ಟೀಕಿಸುವವರು, ಗಡಿಗಳಲ್ಲಿ ತಮ್ಮ ಕುಟುಂಬಗಳೊಂದಿಗೆ ಸಮಯ ಕಳೆಯಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಶಾಂತಿಯುತ ಮಾರ್ಗಗಳನ್ನು ಕಂಡುಕೊಂಡಿದ್ದಕ್ಕಾಗಿ 'ರಾಜಕೀಯವಾಗಿ ಶಿಕ್ಷೆಗೆ ಗುರಿಪಡಿಸಬಾರದು' ಮತ್ತು ವಿರೋಧ ಪಕ್ಷಗಳು ರಾಜಕೀಯವನ್ನು ಮೀರಿ ಶಾಂತಿ ಮತ್ತು ಸ್ಥಿರತೆಗಾಗಿ ನಡೆದ ನಿಜವಾದ ಪ್ರಯತ್ನಗಳನ್ನು ಬೆಂಬಲಿಸಬೇಕು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮಂಗಳವಾರ ಹೇಳಿದ್ದಾರೆ.

'ಎಲ್ಲ ವಿರೋಧ ಪಕ್ಷಗಳು ಕೀಳುಮಟ್ಟದ ಟೀಕೆ ಅಥವಾ ರಾಜಕೀಯ ಪ್ರೇರಿತವಾಗಿ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಪಹಲ್ಗಾಮ್ ಘಟನೆಯು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದ ಎಲ್ಲ ಧ್ವನಿಗಳನ್ನು ಒಂದುಗೂಡಿಸಿದಂತೆ, ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ಶಾಂತಿ ಪ್ರಕ್ರಿಯೆಯ ಸುತ್ತಲೂ ರಾಷ್ಟ್ರೀಯ ಒಮ್ಮತ ಮೂಡಿಸುವ ಅಗತ್ಯವಿದೆ' ಎಂದು ಮುಫ್ತಿ X ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರಂತಹ ನಾಯಕರು ಉದ್ವಿಗ್ನ ಸಮಯದಲ್ಲೂ ಗಡಿಯಾಚೆಗಿನ ಮಾತುಕತೆಗಳಿಂದ ಭದ್ರತೆ ಅಥವಾ ಸಾರ್ವಭೌಮತ್ವವನ್ನು ರಾಜಿ ಮಾಡಿಕೊಳ್ಳದಿರಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ಹೇಳಿದರು.

'ಶಾಂತಿಯುತ ಮಾರ್ಗಗಳನ್ನು ಕಂಡುಕೊಂಡಿದ್ದಕ್ಕಾಗಿ ಮೋದಿ ಸರ್ಕಾರವನ್ನು ರಾಜಕೀಯವಾಗಿ ಶಿಕ್ಷಿಸಬಾರದು. ಇದು ದ್ವಿಪಕ್ಷೀಯ ರಾಜತಾಂತ್ರಿಕತೆಯ ಸಮಯ, ವಿಭಜನೆಯಲ್ಲ. ವಿರೋಧ ಪಕ್ಷಗಳು ರಾಜಕೀಯವನ್ನು ಮೀರಿ ಶಾಂತಿ ಮತ್ತು ಸ್ಥಿರತೆಗಾಗಿ ನಿಜವಾದ ಪ್ರಯತ್ನಗಳನ್ನು ಬೆಂಬಲಿಸಬೇಕು' ಎಂದು ಮುಫ್ತಿ ಹೇಳಿದರು.

ಕೆಲವು ಟಿವಿ ಸುದ್ದಿ ವಾಹಿನಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಹವಾನಿಯಂತ್ರಿತ ಸ್ಟುಡಿಯೋಗಳು ಮತ್ತು ಡ್ರಾಯಿಂಗ್ ರೂಮ್‌ಗಳಲ್ಲಿ ಕುಳಿತು ಕದನ ವಿರಾಮವನ್ನು ಟೀಕಿಸುವವರು, ಗಡಿಗಳಲ್ಲಿ ತಮ್ಮ ಕುಟುಂಬಗಳೊಂದಿಗೆ ಸಮಯ ಕಳೆಯಬೇಕು. ಸಾವು ಮತ್ತು ವಿನಾಶದ ದೈನಂದಿನ ವಾಸ್ತವವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಮುಫ್ತಿ, ಮಾಧ್ಯಮಗಳು ದೇಶದ ಗಮನವನ್ನು ಬೇರೆಡೆಗೆ ಸೆಳೆಯುತ್ತಿವೆ' ಎಂದು ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ
ಭಾರತ, ಪಾಕ್ ಸಂಯಮ ಕಾಯ್ದುಕೊಳ್ಳಬೇಕು, ಮಾತುಕತೆ ಮುಂದುವರಿಸಬೇಕು: ಮೆಹಬೂಬಾ ಮುಫ್ತಿ ಮನವಿ

'ನಮ್ಮ ದೇಶದಲ್ಲಿನ ಮತಾಂಧ ಗುಂಪುಗಳು ಬಹಳ ಹಿಂದೆಯೇ ಸತ್ತಿರುವ ಮೊಘಲ್ ಚಕ್ರವರ್ತಿ ಔರಂಗಜೇಬನನ್ನು ಶಿಕ್ಷಿಸಲು ಈಗ ಅಂಗಡಿಗಳನ್ನು ಧ್ವಂಸ ಮಾಡುತ್ತಿದ್ದರೆ, ಮಸೀದಿಗಳನ್ನು ಕೆಡವುತ್ತಿದ್ದರೆ ಮತ್ತು ಸಮಾಧಿಗಳನ್ನು ಅಗೆಯುತ್ತಿದ್ದರೆ, ಗಡಿಯುದ್ದಕ್ಕೂ ಅವರ ಹೆಸರಿನ ಏರ್ ವೈಸ್ ಮಾರ್ಷಲ್ ಔರಂಗಜೇಬ್ ಅಹ್ಮದ್ ಆಧುನಿಕ ವಾಯು ಯುದ್ಧಕ್ಕಾಗಿ ತನ್ನ ಪಡೆಗಳಿಗೆ ತರಬೇತಿ ನೀಡುತ್ತಿದ್ದಾರೆ' ಎಂದಿದ್ದರು.

'ದೇಶವನ್ನು ಅದರ ನಿಜವಾದ ಸವಾಲುಗಳು ಮತ್ತು ಆದ್ಯತೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಿರುವ ದೂರದರ್ಶನ ಚಾನೆಲ್‌ಗಳ ಹೆಚ್ಚುತ್ತಿರುವ ವಿಷಕಾರಿ ನಿರೂಪಣೆಗಳ ಬಗ್ಗೆ ಭಾರತ ಎಚ್ಚರಗೊಳ್ಳುವ ಸಮಯ ಬಂದಿದೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com