ಕೇರಳ: ಟ್ರೇಡ್ ಯೂನಿಯನ್ ಕಾರ್ಯಕರ್ತನ ಹತ್ಯೆ ಪ್ರಕರಣ; ಆರು PFI ಕಾರ್ಯಕರ್ತರಿಗೆ ಎರಡು ಪಟ್ಟು ಜೀವಾವಧಿ ಶಿಕ್ಷೆ, ಭಾರಿ ಮೊತ್ತದ ದಂಡ!

ಆರು ಕಾರ್ಯಕರ್ತರಿಗೆ ಡಬಲ್ ಜೀವಾವಧಿ ಶಿಕ್ಷೆ ಹಾಗೂ ಒಟ್ಟು 13 ಲಕ್ಷ ರೂ. ದಂಡವನ್ನೂ ವಿಧಿಸಿದೆ. ರಾಜಕೀಯ ಪ್ರೇರಿತ ಕೊಲೆ ಪ್ರಕರಣ ಬಲವಾದ ವಿಧಿವಿಜ್ಞಾನ ಮತ್ತು ಡಿಜಿಟಲ್ ಸಾಕ್ಷ್ಯಗಳ ಮೂಲಕ ಸಾಬೀತಾಗಿದೆ
Murder Accused
ಕೊಲೆ ಆರೋಪಿಗಳು
Updated on

ತ್ರಿಶೂರ್: 2021 ರಲ್ಲಿ ನಡೆದಿದ್ದ ಟ್ರೇಡ್ ಯೂನಿಯನ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕ್ರಿಶೂರ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿಷೇಧಿತ ಪಾಂಪ್ಯುಲರ್ ಫ್ರಾಂಟ್ ಆಫ್ ಇಂಡಿಯಾದ (PFI) ನ ಆರು ಕಾರ್ಯಕರ್ತರಿಗೆ ಎರಡು ಪಟ್ಟು ಜೀವಾವಧಿ ಶಿಕ್ಷೆ ಹಾಗೂ ಒಟ್ಟು 13 ಲಕ್ಷ ರೂ. ದಂಡವನ್ನೂ ವಿಧಿಸಿದೆ. ರಾಜಕೀಯ ಪ್ರೇರಿತ ಕೊಲೆ ಪ್ರಕರಣ ಬಲವಾದ ವಿಧಿವಿಜ್ಞಾನ ಮತ್ತು ಡಿಜಿಟಲ್ ಸಾಕ್ಷ್ಯಗಳ ಮೂಲಕ ಸಾಬೀತಾಗಿದೆ

'ನಾಚು' ಎಂದು ಕರೆಯಲಾಗುತ್ತಿದ್ದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU) ಕಾರ್ಯಕರ್ತ ಶಮೀರ್ ನನ್ನು ರಾಜಕೀಯ ದ್ವೇಷದಿಂದ ಅಕ್ಟೋಬರ್ 22, 2021 ರಂದು ಹಾಡಹಗಲಿನಲ್ಲಿಯೇ ಹತ್ಯೆ ಮಾಡಲಾಗಿತ್ತು.

ಮನ್ನುತ್ತಿಯಲ್ಲಿ ಆಟೊರಿಕ್ಷಾದಲ್ಲಿ ಬಂದ ಆರೋಪಿಗಳು ಶಮೀರ್ ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಸೋಮವಾರ ಶಿಕ್ಷೆಗೆ ಗುರಿಯಾದವರಲ್ಲಿ ಕೊಲೆಯಲ್ಲಿ ನೇರವಾಗಿ ಭಾಗಿಯಾದ ಮೂವರು ಹಾಗೂ ಪಿತೂರಿಯಲ್ಲಿ ಭಾಗಿಯಾದ ಮೂವರು ಇದ್ದಾರೆ.

ಆರೋಪಿಗಳ ವಿರುದ್ಧ 68 ಸಾಕ್ಷಿಗಳು, 200 ಕ್ಕೂ ಹೆಚ್ಚು ದಾಖಲೆಗಳು ಮತ್ತು 22 ವಸ್ತುಗಳ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್ ಹಾಜರುಪಡಿಸಿತು. ಸೈಬರ್ ಫೋರೆನ್ಸಿಕ್ಸ್, ಡಿಎನ್ಎ ವರದಿಗಳು ಮತ್ತು ಇತರ ವೈಜ್ಞಾನಿಕ ಪುರಾವೆಗಳು ಅಪರಾಧವನ್ನು ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ.

ಕಳೆದ ತಿಂಗಳು ಪ್ರತ್ಯೇಕ ಪ್ರಕರಣದಲ್ಲಿ 2022 ರಲ್ಲಿ ಪಾಲಕ್ಕಾಡ್‌ನಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ಶ್ರೀನಿವಾಸನ್ ಹತ್ಯೆಯ ಪ್ರಮುಖ ಆರೋಪಿ ಶಮ್ಲಾದ್ ನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು.

Murder Accused
ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ: ಎಲ್ಲಾ ಒಂಬತ್ತು ಅಪರಾಧಿಗಳಿಗೆ 'ಸಾಯುವವರೆಗೆ ಜೈಲು ಶಿಕ್ಷೆ'

ಮಲಪ್ಪುರಂನ ಮಂಜೇರಿಯ PFI ಸದಸ್ಯ ಶಮ್ನಾದ್ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಆತನ ತಲೆಗೆ 7 ಲಕ್ಷ ರೂ. ಬಹುಮಾನ ಕೂಡಾ ಘೋಷಿಸಿತ್ತು. ಎನ್‌ಐಎ ಸತತ ಪ್ರಯತ್ನದ ಬಳಿಕ ಕೊನೆಗೂ ಎರ್ನಾಕುಲಂನಲ್ಲಿ ಸಿಕ್ಕಿಬಿದ್ದಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com