ಸಿದ್ದವಾಯ್ತು ಸ್ವದೇಶಿ ನಿರ್ಮಿತ ಅಗ್ಗದ ಐರನ್ ಡೋಮ್ Bhargavastra: Turkey, China ಡ್ರೋನ್ ದಾಳಿಗೆ ಸಿಕ್ತು ಪರಿಹಾರ, ಪರೀಕ್ಷೆ ಯಶಸ್ವಿ!

ಡ್ರೋನ್ ನಂತಹ ಸಣ್ಣ ಸಣ್ಣ ವಸ್ತುಗಳಿಗೂ ಭಾರತದ ದುಬಾರಿ ಏರ್ ಡಿಫೆನ್ಸ್ ಬಳಕೆ ಮಾಡಲಾಗುತ್ತಿತ್ತು. ಆದರೆ ಈ ಸಮಸ್ಯೆಗೆ ಇದೀಗ ಸ್ವದೇಶಿ ನಿರ್ಮಿತ 'ಅಗ್ಗದ ಐರನ್ ಡೋಮ್' ಖ್ಯಾತಿಯ 'ಭಾರ್ಗವಾಸ್ತ್ರ' ಪರಿಹಾರ ನೀಡಿದೆ.
Homegrown 'Bhargavastra' System
ಭಾರತದ ಐರನ್ ಡೋಮ್ ಭಾರ್ಗವಾಸ್ತ್ರ
Updated on

ನವದೆಹಲಿ: ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಗೆ ಆನೆ ಬಲ ಸಿಕ್ಕಿದ್ದು, ಸ್ವದೇಶಿ ನಿರ್ಮಿತ 'ಅಗ್ಗದ ಐರನ್ ಡೋಮ್' ಎಂದೇ ಖ್ಯಾತಿ ಪಡೆಯುತ್ತಿರುವ ಭಾರ್ಗವಾಸ್ತ್ರ (Bhargavastra) ಪರೀಕ್ಷೆ ಯಶಸ್ವಿಯಾಗಿದೆ.

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ನಂತರ ಭಾರತೀಯ ಸೇನೆ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಸಂಘರ್ಷ ಆರಂಭವಾಗಿತ್ತು.

ಈ ಹಂತದಲ್ಲಿ ಪಾಕಿಸ್ತಾನ ಸೇನೆ ಭಾರತದ ಮೇಲೆ ಡ್ರೋನ್, ಕ್ಷಿಪಣಿ ದಾಳಿ ನಡೆಸಿತ್ತು. ತಾನು ಟರ್ಕಿ ಮತ್ತು ಚೀನಾ ದೇಶಗಳಿಂದ ಪಡೆದ ಅತ್ಯಾಧುನಿಕ ಡ್ರೋನ್ ಗಳನ್ನೂ ಕೂಡ ಪಾಕಿಸ್ತಾನ ಭಾರತದ ಮೇಲಿನ ದಾಳಿಗೆ ಕಳುಹಿಸಿತ್ತು. ಈ ದಾಳಿಗಳೆಲ್ಲವನ್ನೂ ಭಾರತ ತನ್ನ ಏರ್ ಡಿಫೆನ್ಸ್ ಸಿಸ್ಟಮ್ ನಿಂದ ಯಶಸ್ವಿಯಾಗಿ ಹೊಡೆದುರುಳಿಸಿತ್ತು.

ಆದರೆ ಡ್ರೋನ್ ನಂತಹ ಸಣ್ಣ ಸಣ್ಣ ವಸ್ತುಗಳಿಗೂ ಭಾರತದ ದುಬಾರಿ ಏರ್ ಡಿಫೆನ್ಸ್ ಬಳಕೆ ಮಾಡಲಾಗುತ್ತಿತ್ತು. ಆದರೆ ಈ ಸಮಸ್ಯೆಗೆ ಇದೀಗ ಸ್ವದೇಶಿ ನಿರ್ಮಿತ 'ಅಗ್ಗದ ಐರನ್ ಡೋಮ್' ಖ್ಯಾತಿಯ 'ಭಾರ್ಗವಾಸ್ತ್ರ' ಪರಿಹಾರ ನೀಡಿದೆ.

ಭಾರತದ ರಕ್ಷಣಾ ಪಡೆಗೆ ರಣಭಯಂಕರ ಅಸ್ತ್ರ ಅಂದರೆ Counter Drone System ಸೇರ್ಪಡೆಯಾಗಿದ್ದು, ಇನ್ಮುಂದೆ ವಿರೋಧಿಗಳ ಡ್ರೋನ್‌ ಹಿಂಡುಗಳನ್ನು ಮಟ್ಟ ಹಾಕಲು ಭಾರತೀಯ ಸೇನೆಗೆ ಆನೆಬಲ ಬಂದಿದೆ. ಭಾರ್ಗವಸ್ತ್ರ (Bhargavastra) ಎಂಬ ಹೆಸರಿನ ಈ ಹಾರ್ಡ್ ಕಿಲ್ ಮೋಡ್ ಕೌಂಟರ್ ಡ್ರೋನ್ ಸಿಸ್ಟಮ್ ನ ಪ್ರಯೋಗ ಯಶಸ್ವಿಯಾಗಿದೆ.

Homegrown 'Bhargavastra' System
Game-changer: DRDO ನಿರ್ಮಿತ Iron Dome ಪಾಕಿಸ್ತಾನದ ಡ್ರೋನ್ ದಾಳಿಗಳನ್ನು ವಿಫಲಗೊಳಿಸಿದ್ದು ಹೇಗೆ?

ಪ್ರಯೋಗಾರ್ಥ ಉಡಾವಣೆ ಯಶಸ್ವಿ

ಈ ಕೌಂಟರ್-ಡ್ರೋನ್ ವ್ಯವಸ್ಥೆಯಲ್ಲಿ ಬಳಸಲಾದ ಮೈಕ್ರೋ ರಾಕೆಟ್‌ಗಳನ್ನು ಒಡಿಶಾದ ಗೋಪಾಲ್‌ಪುರದ ಸೀವರ್ಡ್ ಫೈರಿಂಗ್ ರೇಂಜ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಯೋಗ ಯಶಸ್ವಿಯಾಗಿದೆ. ಮೇ 13ರಂದು ಸೇನಾ ವಾಯು ರಕ್ಷಣಾ (ಎಎಡಿ) ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ 3 ಪ್ರಯೋಗಗಳನ್ನು ನಡೆಸಲಾಯಿತು.

2 ಸೆಕೆಂಡುಗಳ ಒಳಗೆ ಎರಡು ರಾಕೆಟ್‌ಗಳನ್ನು ಸಾಲ್ವೋ ಮೋಡ್‌ನಲ್ಲಿ ಹಾರಿಸುವ ಮೂಲಕ ಪ್ರಯೋಗ ನಡೆಸಲಾಯಿತು. ಎಲ್ಲ ನಾಲ್ಕು ರಾಕೆಟ್‌ಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದವು ಮತ್ತು ನಿಗದಿತ ಗುರಿಯನ್ನು ಯಶಸ್ನಿಯಾಗಿ ತಲುಪಿದವು ಎಂದು ಮೂಲಗಳು ತಿಳಿಸಿವೆ.

ಏನಿದು ಭಾರ್ಗವಾಸ್ತ್ರ?

ಭಾರತವು ಸ್ವದೇಶಿ ನಿರ್ಮಿತ ಹಾರ್ಡ್ ಕಿಲ್ ಮೋಡ್ ಕೌಂಟರ್ ಡ್ರೋನ್ ವ್ಯವಸ್ಥೆಯ (Counter drone system in hard kill mode) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ಈ ಆಯುಧಕ್ಕೆ ಭಾರ್ಗವಾಸ್ತ್ರ (Bhargavastra) ಎಂದು ಹೆಸರಿಡಲಾಗಿದೆ. ಈ ಹಾರ್ಡ್ ಕಿಲ್ ಮೋಡ್ ಕೌಂಟರ್ ಡ್ರೋನ್ ಶತ್ರು ಪಡೆಯ ಡ್ರೋನ್‌ ದಾಳಿಯನ್ನು ಧ್ವಂಸ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಭಾರತಕ್ಕೆ ಆನೆಬಲ ಬಂದಂತಾಗಿದೆ.

ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ (Solar Defence and Aerospace Limited-SDAL) ಕಡಿಮೆ ವೆಚ್ಚದ ಕೌಂಟರ್ ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದು ಹೆಚ್ಚುತ್ತಿರುವ ಡ್ರೋನ್ ಬೆದರಿಕೆಯನ್ನು ಯಶಸ್ವಿಯಾಗಿ ಎದುರಿಸಲು ನೆರವಾಗುತ್ತದೆ. ಈ ಭಾರ್ಗವಾಸ್ತ್ರ ಎಂಬ ಹೆಸರಿನ ಈ ಹಾರ್ಡ್ ಕಿಲ್ ಮೋಡ್ ಕೌಂಟರ್ ಡ್ರೋನ್ ವ್ಯವಸ್ಥೆಯನ್ನು ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ SDAL ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.

ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್ ಪ್ರಕಾರ, ಭಾರ್ಗವಾಸ್ತ್ರವು ದೊಡ್ಡ ಪ್ರಮಾಣದ ಡ್ರೋನ್ ದಾಳಿಗಳನ್ನು ಎದುರಿಸಲು ಹೊಸ ತಂತ್ರಜ್ಞಾನದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಸಾಬೀತಾಗಿದೆ. ಈ ಯಶಸ್ಸಿನೊಂದಿಗೆ, ಈ ವ್ಯವಸ್ಥೆಯು ಭವಿಷ್ಯದಲ್ಲಿ ಭಾರತದ ಡ್ರೋನ್ ವಿರೋಧಿ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ ಮತ್ತು ಆಧುನಿಕ ಬೆದರಿಕೆಗಳ ವಿರುದ್ಧ ಹೋರಾಡಲು ಸೈನ್ಯಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದೆ.

ವಿಶೇಷತೆ ಏನು?

ಈ ಭಾರ್ಗವಾಸ್ತ್ರ ದೊಡ್ಡ ಪ್ರಮಾಣದ ಡ್ರೋನ್ ದಾಳಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ನೆರವಾಗಲಿದೆ. ಭಾರ್ಗವಸ್ತ್ರವು 2.5 ಕಿ.ಮೀ. ದೂರದಲ್ಲಿನ ಸಣ್ಣ ಡ್ರೋನ್‌ಗಳನ್ನು ಗುರುತಿಸುವ ಮತ್ತು ಆಗಸದಲ್ಲೇ ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ. 6 ಕಿ.ಮೀ ದೂರದಲ್ಲೇ ಚಿಕ್ಕ ಡ್ರೋನ್ ಗಳನ್ನು ಗುರುತಿಸುವ ಸಾಮರ್ಥ್ಯ ಇದಕ್ಕಿದ್ದು, ಏಕಕಾಲದಲ್ಲಿ ಬರೊಬ್ಬರಿ 64 ಕ್ಷಿಪಣಿಗಳನ್ನು ಶತ್ರುಗಳ ಗುರಿಗಳ ಮೇಲೆ ಹಾರಿಸಬಲ್ಲದಾಗಿದೆ.

ಭವಿಷ್ಯದ ಸಮೂಹ ಡ್ರೋನ್ ದಾಳಿಗಳನ್ನು ಸಮರ್ಥವಾಗಿ ಥಟಸ್ಥಗೊಳಿಸುವುದಕ್ಕಾಗಿಯೇ ಇದನ್ನು ತಯಾರಿಸಲಾಗಿದೆ. ಈ ವ್ಯವಸ್ಥೆಯು ಭವಿಷ್ಯದಲ್ಲಿ ಭಾರತದ ಡ್ರೋನ್ ವಿರೋಧಿ ಸಾಮರ್ಥ್ಯಗಳನ್ನು ಬಲಪಡಿಸಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಜತೆಗೆ ತಂತ್ರಜ್ಞಾನ ಆಧಾರಿತ ಶತ್ರುಗಳ ದಾಳಿಯನ್ನು ಹಿಮ್ಮೆಟ್ಟಿಸಲು ಇದು ಪ್ರಮುಖ ಪಾತ್ರ ವಹಿಸಲಿದೆ ಎಂದು ತಜ್ಞರು ಹೇಳಿದ್ದಾರೆ.

ಮೇಕ್ ಇನ್ ಇಂಡಿಯಾ

ಇನ್ನು ಈ ಭಾರ್ಗವಾಸ್ತ್ರ ಯೋಜನೆಯನ್ನು 'ಮೇಕ್ ಇನ್ ಇಂಡಿಯಾ' ಯೋಜನೆಯ ಭಾಗವಾಗಿ ನಿರ್ಮಿಸಲಾಗಿದ್ದು, ಭಾರತದ ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ. ಎತ್ತರದ ಪ್ರದೇಶಗಳೂ ಸೇರಿದಂತೆ ವೈವಿಧ್ಯಮಯ ಭೂಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವಂತೆಯೂ ಇದನ್ನು ವಿನ್ಯಾಸಗೊಳಿಸಲಾಗಿದೆ.

ಭಾರ್ಗವಾಸ್ತ್ರ ಹೆಸರೇಕೆ?

ಮಹಾಭಾರತದಲ್ಲಿ ಕೆಲವು ವಿನಾಶಕಾರಿ ಅಸ್ತ್ರಗಳನ್ನು ಬಳಸಲಾಗಿತ್ತು. ಇವುಗಳಲ್ಲಿ ಒಂದು ಭಾರ್ಗವಾಸ್ತ್ರವಾಗಿದ್ದು, ಇದಕ್ಕೆ ಭಾರ್ಗವ ಪರಶುರಾಮರ ಹೆಸರಿಡಲಾಗಿದೆ. ಈಗ ಈ ಹೆಸರಿನಿಂದ ಸ್ಫೂರ್ತಿ ಪಡೆದು, ಭಾರತವು ಅತ್ಯಾಧುನಿಕ ಮೈಕ್ರೋ-ಕ್ಷಿಪಣಿ ಆಧಾರಿತ ಪ್ರತಿ-ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಅದಕ್ಕೆ ಭಾರ್ಗವಾಸ್ತ್ರ ಎಂದು ಹೆಸರಿಟ್ಟಿದೆ. ಅಂತೆಯೇ ಇದನ್ನು ಭಾರತದ ಅಗ್ಗದ ಐರನ್ ಡೋಮ್ ಎಂದೂ ಕರೆಯಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com