Tirupati: ತಿಮ್ಮಪ್ಪನಿಗೆ 3.63 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಸಮರ್ಪಿಸಿದ ಸಂಜೀವ್ ಗೋಯೆಂಕಾ!

ಆರ್‌ಪಿ-ಸಂಜೀವ್ ಗೋಯೆಂಕಾ ಗ್ರೂಪ್‌ನ ಅಧ್ಯಕ್ಷ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ (LSG) ಮಾಲೀಕ ಸಂಜೀವ್ ಗೋಯೆಂಕಾ ಅವರು ಪವಿತ್ರ ತಿರುಮಲ ತಿರುಪತಿ ದೇವಸ್ಥಾನ (TTD) ದೇವಸ್ಥಾನಕ್ಕೆ ಸುಮಾರು 3.63 ಕೋಟಿ ಮೌಲ್ಯದ ಚಿನ್ನದ ಆಭರಣಗಳನ್ನು ಸಮರ್ಪಿಸಿದ್ದಾರೆ.
ತಿಮ್ಮಪ್ಪನಿಗೆ ಚಿನ್ನಾಭರಣ ಸಮರ್ಪಿಸಿದ ಸಂಜೀವ್ ಗೋಯಂಕಾ
ತಿಮ್ಮಪ್ಪನಿಗೆ ಚಿನ್ನಾಭರಣ ಸಮರ್ಪಿಸಿದ ಸಂಜೀವ್ ಗೋಯಂಕಾ
Updated on

ತಿರುಪತಿ: ಆರ್‌ಪಿ-ಸಂಜೀವ್ ಗೋಯೆಂಕಾ ಗ್ರೂಪ್‌ನ ಅಧ್ಯಕ್ಷ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ (LSG) ಮಾಲೀಕ ಸಂಜೀವ್ ಗೋಯೆಂಕಾ ಅವರು ಪವಿತ್ರ ತಿರುಮಲ ತಿರುಪತಿ ದೇವಸ್ಥಾನ (TTD) ದೇವಸ್ಥಾನಕ್ಕೆ ಸುಮಾರು 3.63 ಕೋಟಿ ಮೌಲ್ಯದ ಚಿನ್ನದ ಆಭರಣಗಳನ್ನು ಸಮರ್ಪಿಸಿದ್ದಾರೆ.

ಚಿನ್ನಾಭರಣದ ತೂಕ 5.267 ಕಿಲೋಗ್ರಾಂಗಳಷ್ಟಾಗಿದ್ದು ಚಿನ್ನದ ಆಭರಣಗಳ ಸೆಟ್ ಸೇರಿದ್ದು, ಇವುಗಳನ್ನು ಸಂಕೀರ್ಣವಾಗಿ ವಿನ್ಯಾಸಗೊಳಿಸಲಾಗಿದೆ. ಅಮೂಲ್ಯ ವಜ್ರಗಳು ಮತ್ತು ರತ್ನಗಳಿಂದ ಕೂಡಿದೆ. ಈ ಅಮೂಲ್ಯವಾದ ಕಾಣಿಕೆಗಳನ್ನು ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಭಾರತದ ಅತ್ಯಂತ ಪೂಜ್ಯ ಯಾತ್ರಾ ಸ್ಥಳಗಳಲ್ಲಿ ಒಂದಾದ ತಿರುಮಲ ದೇವಸ್ಥಾನದ ಪ್ರಧಾನ ದೇವರು ವೆಂಕಟೇಶ್ವರನಿಗೆ ಅರ್ಪಿಸಲಾಯಿತು.

ಔಪಚಾರಿಕ ಹಸ್ತಾಂತರ ಸಮಾರಂಭವು ದೇವಾಲಯ ಸಂಕೀರ್ಣದೊಳಗಿನ ರಂಗನಾಯಕಕುಲ ಮಂಟಪದಲ್ಲಿ ನಡೆಯಿತು. ಅಲ್ಲಿ ಚಿನ್ನವನ್ನು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಚಿ. ವೆಂಕಯ್ಯ ಚೌಧರಿ ಸ್ವೀಕರಿಸಿದರು. ಸಮಯದಲ್ಲಿ ಸಂಜೀವ್ ಗೋಯೆಂಕಾ ಅವರ ಕುಟುಂಬದೊಂದಿಗೆ ಇದ್ದರು.

ತಿಮ್ಮಪ್ಪನಿಗೆ ಚಿನ್ನಾಭರಣ ಸಮರ್ಪಿಸಿದ ಸಂಜೀವ್ ಗೋಯಂಕಾ
Hare Krishna temple: ಬೆಂಗಳೂರಿನ ಹರೇ ಕೃಷ್ಟ ದೇವಾಲಯ ISKCON Society Bengaluru ಗೆ ಸೇರಿದ್ದು; ಸುಪ್ರೀಂ ಕೋರ್ಟ್ ತೀರ್ಪು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com