
ನವದೆಹಲಿ: ಬೆಂಗಳೂರಿನ ಪ್ರಸಿದ್ಧ ಹರೇ ಕೃಷ್ಣ ದೇವಾಲಯ ನಿಯಂತ್ರಣದ ಬಗ್ಗೆ ದಶಕದ ಸುದೀರ್ಘ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್ ಇಸ್ಕಾನ್ ಬೆಂಗಳೂರು ಪರವಾಗಿ ತೀರ್ಪು ನೀಡಿದ್ದು, ಇಸ್ಕಾನ್ ಮುಂಬೈನ ಮಾಲೀಕತ್ವದ ಹಕ್ಕುಗಳನ್ನು ಕೊನೆಗೊಳಿಸಿದೆ.
ಬೆಂಗಳೂರಿನ ಸುಪ್ರಸಿದ್ಧ ಹರೇ ಕೃಷ್ಣ ದೇವಸ್ಥಾನದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ಕಾನೂನು ಹೋರಾಟ ಮುಕ್ತಾಯಗೊಂಡಿದ್ದು, ಭಾರತದ ಸುಪ್ರೀಂ ಕೋರ್ಟ್ ಇಸ್ಕಾನ್ ಬೆಂಗಳೂರು ಪರವಾಗಿ ತೀರ್ಪು ನೀಡಿದೆ.
ದಶಕಗಳಿಂದ ದೇವಸ್ಥಾನ ಮತ್ತು ಅದಕ್ಕೆ ಸಂಬಂಧಿಸಿದ ಶೈಕ್ಷಣಿಕ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ-ನೋಂದಾಯಿತ ಸಮಾಜಕ್ಕೆ ಈ ತೀರ್ಪು ಸಮಾಧಾನ ತಂದಿದೆ.
ಈ ಹಿಂದೆ ಇಸ್ಕಾನ್ ದೇವಸ್ಥಾನದ ನಿಯಂತ್ರಣವನ್ನು ಮುಂಬೈ ಇಸ್ಕಾನ್ ಗೆ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇಸ್ಕಾನ್ ಬೆಂಗಳೂರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್, 2009 ರ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು. ಅದು ದೇವಾಲಯದ ನಿಯಂತ್ರಣವನ್ನು ಇಸ್ಕಾನ್ ಬೆಂಗಳೂರಿಗೆ ನೀಡಿತ್ತು. ಅಲ್ಲದೇ ಮುಂಬೈ ವಿರುದ್ಧ ಶಾಶ್ವತ ತಡೆಯಾಜ್ಞೆಯನ್ನು ನೀಡಿತ್ತು.
Advertisement