'ಗೌರವದ ಪ್ರಶ್ನೆ': ಶಿಷ್ಟಾಚಾರ ಉಲ್ಲಂಘಿಸಿದ ಮಹಾರಾಷ್ಟ್ರ ಸರ್ಕಾರದ ವಿರುದ್ಧ CJI ಗವಾಯಿ ಬಹಿರಂಗ ಅಸಮಾಧಾನ!

ಇದು ಗೌರವದ ಪ್ರಶ್ನೆಯಾಗಿದೆ. ಶಿಷ್ಟಾಚಾರವನ್ನು ಪಾಲಿಸುವಂತೆ ನಾನು ಅವರನ್ನು ಒತ್ತಾಯಿಸುತ್ತಿಲ್ಲ ಮತ್ತು ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ಗಮನ ಸೆಳೆಯಬೇಕು ಎಂದು ಸಹ ನನಗೆ ಅನಿಸುತ್ತಿಲ್ಲ.
Justice B R Gavai
ನ್ಯಾಯಮೂರ್ತಿ ಬಿ ಆರ್ ಗವಾಯಿ
Updated on

ಮುಂಬೈ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ತಮ್ಮ ತವರು ರಾಜ್ಯ ಮಹಾರಾಷ್ಟ್ರಕ್ಕೆ ಭಾನುವಾರ ಭೇಟಿ ನೀಡಿರುವ ಬಿ.ಆರ್. ಗವಾಯಿ ಅವರು, ಶಿಷ್ಟಾಚಾರದ ಉಲ್ಲಂಘನೆಯ ಬಗ್ಗೆ ಬಹಿರಂಗವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಮಹಾರಾಷ್ಟ್ರ ಮತ್ತು ಗೋವಾ ಬಾರ್ ಕೌನ್ಸಿಲ್ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಗವಾಯಿ, ರಾಜ್ಯದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಅಥವಾ ನಗರ ಪೊಲೀಸ್ ಆಯುಕ್ತರು ತಮ್ಮನ್ನು ಸ್ವಾಗತಿಸಲು ಬರದಿರುವುದನ್ನು ಎತ್ತಿ ತೋರಿಸಿದರು ಮತ್ತು ಪ್ರಜಾಪ್ರಭುತ್ವದ ಮೂರು ಸ್ತಂಭಗಳು ಸಮಾನವಾಗಿದ್ದು, ಪರಸ್ಪರ ಗೌರವ ತೋರಿಸಬೇಕು ಮತ್ತು ಪರಸ್ಪರ ಗೌರವ ನೀಡಬೇಕು ಎಂದು ಒತ್ತಿ ಹೇಳಿದರು.

"ಮಹಾರಾಷ್ಟ್ರದವರಾದ ಸಿಜೆಐ ಮೊದಲ ಬಾರಿಗೆ ಬಂದಾಗ ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಅಥವಾ ಮುಂಬೈ ಪೊಲೀಸ್ ಆಯುಕ್ತರು ಅಲ್ಲಿಗೆ ಬರಲು ಬಯಸದಿದ್ದರೆ, ಅದು ಸರಿಯೇ ಅಥವಾ ತಪ್ಪು ಎಂಬುದು ಅವರಿಗೆ ಬಿಟ್ಟಿದ್ದು" ಎಂದು ಸಿಜೆಐ ಗವಾಯಿ ಬೇಸರ ವ್ಯಕ್ತಪಡಿಸಿದರು.

ಇದು ಗೌರವದ ಪ್ರಶ್ನೆಯಾಗಿದೆ. ಶಿಷ್ಟಾಚಾರವನ್ನು ಪಾಲಿಸುವಂತೆ ನಾನು ಅವರನ್ನು ಒತ್ತಾಯಿಸುತ್ತಿಲ್ಲ ಮತ್ತು ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ಗಮನ ಸೆಳೆಯಬೇಕು ಎಂದು ಸಹ ನನಗೆ ಅನಿಸುತ್ತಿಲ್ಲ. ಆದರೆ ಜನರಿಗೆ ಈ ಬಗ್ಗೆ ತಿಳಿಸಬೇಕಾದ ಅಗತ್ಯವಿದೆ ಎಂದು ಸಿಜೆಐ ಹೇಳಿದರು.

Justice B R Gavai
Watch | ಭಾರತದ 52ನೇ ಸಿಜೆಐ ಆಗಿ ನ್ಯಾಯಮೂರ್ತಿ ಬಿ ಆರ್ ಗವಾಯಿ ಪ್ರಮಾಣ ವಚನ

"ಒಂದು ಸಂಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥರು ಮೊದಲ ಬಾರಿಗೆ ರಾಜ್ಯಕ್ಕೆ ಬಂದಾಗ, ವಿಶೇಷವಾಗಿ ಅವರು ಕೂಡ ಆ ರಾಜ್ಯಕ್ಕೆ ಸೇರಿದವರಾಗಿದ್ದರೆ, ಅವರು ನೀಡಿದ ಗೌರವ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಅವರೇ ಯೋಚಿಸಬೇಕು" ಎಂದು ಗವಾಯಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

"ನನ್ನ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದರೆ, 142ನೇ ವಿಧಿಯ ನಿಬಂಧನೆಗಳನ್ನು ಪರಿಗಣಿಸುತ್ತಿದ್ದರು" ಎಂದು ಗವಾಯಿ ಹೇಳಿದರು.

ಭಾರತೀಯ ಸಂವಿಧಾನದ 142 ನೇ ವಿಧಿಯು ಸುಪ್ರೀಂ ಕೋರ್ಟ್‌ಗೆ ತನ್ನ ಮುಂದೆ ಬಾಕಿ ಇರುವ ಯಾವುದೇ ಪ್ರಕರಣ ಅಥವಾ ವಿಷಯದಲ್ಲಿ ಸಂಪೂರ್ಣ ನ್ಯಾಯ ಒದಗಿಸಲು ಅಗತ್ಯವೆಂದು ಪರಿಗಣಿಸಲಾದ ತೀರ್ಪುಗಳು ಅಥವಾ ಆದೇಶಗಳನ್ನು ಹೊರಡಿಸುವ ಅಧಿಕಾರವನ್ನು ನೀಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com