ಕೋಮು ರಾಜಕೀಯವೇ ಎಲ್ಲಾ ಸಮಸ್ಯೆಗಳಿಗೆ ಮೂಲ: ಅರವಿಂದ್ ಕೇಜ್ರಿವಾಲ್

ರಾಷ್ಟ್ರ ರಾಜಧಾನಿಯಲ್ಲಿ ದೀರ್ಘ ವಿದ್ಯುತ್ ಕಡಿತಕ್ಕಾಗಿ ದೆಹಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಟೀಕಿಸಿದ ಕೇಜ್ರಿವಾಲ್, "ಇತ್ತೀಚಿನ ದಿನಗಳಲ್ಲಿ, ದೆಹಲಿಯಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದರು.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ಕಳೆದ 75 ವರ್ಷಗಳಿಂದ ಮುಖ್ಯವಾಹಿನಿಯ ಪಕ್ಷಗಳು ಅನುಸರಿಸುತ್ತಿರುವ ಹಿಂದೂ-ಮುಸ್ಲಿಂ ಎಂಬ ಕೋಮು ರಾಜಕೀಯವೇ ದೇಶದ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.

ಪಕ್ಷದ ವಿದ್ಯಾರ್ಥಿ ವಿಭಾಗ - ಪರ್ಯಾಯ ರಾಜಕೀಯಕ್ಕಾಗಿ ವಿದ್ಯಾರ್ಥಿಗಳ ಸಂಘ(ಎಎಸ್ಎಪಿ) ಉದ್ಘಾಟಿಸಿ ಮಾತನಾಡಿದ ದೆಹಲಿ ಮಾಜಿ ಮುಖ್ಯಮಂತ್ರಿ, ಪ್ರಸ್ತುತ ಬಿಜೆಪಿ ಆಡಳಿತವು ನಗರದ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿದರು.

"ನಮ್ಮ ದೇಶವು ಬಹಳಷ್ಟು ಸಮಸ್ಯೆಗಳ ವಿರುದ್ಧ ಹೋರಾಡುತ್ತಿದೆ. ಜನರಿಗೆ ಸರಿಯಾದ ಆಹಾರ ಅಥವಾ ಶಿಕ್ಷಣ ಇಲ್ಲ. ಇದು ಏಕೆ ನಡೆಯುತ್ತಿದೆ? ಏಕೆಂದರೆ ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಕಳೆದ 75 ವರ್ಷಗಳಿಂದ ಕೇವಲ ರಾಜಕೀಯ ಮಾಡುತ್ತಿವೆ" ಎಂದು ಹೇಳಿದರು.

"ಈ ಪಕ್ಷಗಳು ನಮ್ಮ ಶಾಲಾ ಮಕ್ಕಳಿಗೆ ಹಿಂದೂ-ಮುಸ್ಲಿಂ ಬಗ್ಗೆ ಮಾತ್ರ ಕಲಿಸುತ್ತಿವೆ. ಇದು ನಮ್ಮ ದೇಶದ ಸಮಸ್ಯೆಗಳಿಗೆ ಮೂಲ ಕಾರಣ" ಎಂದು ಕೇಜ್ರಿವಾಲ್ ತಿಳಿಸಿದರು.

ಅರವಿಂದ್ ಕೇಜ್ರಿವಾಲ್
ಪಂಜಾಬ್ ಸಿಎಂ ಅಧಿಕೃತ ನಿವಾಸದಲ್ಲಿ ಕೇಜ್ರಿವಾಲ್ ಪುತ್ರಿ ವಿವಾಹ; ಭಗವಂತ್ ಮಾನ್ ವಿರುದ್ಧ ಬಿಜೆಪಿ, ಕಾಂಗ್ರೆಸ್ ವಾಗ್ದಾಳಿ

ಎಎಸ್ಎಪಿ ಬಗ್ಗೆ ಮಾತನಾಡಿದ ಕೇಜ್ರಿವಾಲ್, ಈ ವೇದಿಕೆಯಡಿಯಲ್ಲಿ ದೇಶಾದ್ಯಂತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಗುಂಪುಗಳನ್ನು ರಚಿಸಲಾಗುವುದು ಎಂದು ಹೇಳಿದರು.

ರಾಷ್ಟ್ರ ರಾಜಧಾನಿಯಲ್ಲಿ ದೀರ್ಘ ವಿದ್ಯುತ್ ಕಡಿತಕ್ಕಾಗಿ ದೆಹಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಟೀಕಿಸಿದ ಕೇಜ್ರಿವಾಲ್, "ಇತ್ತೀಚಿನ ದಿನಗಳಲ್ಲಿ, ದೆಹಲಿಯಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಹಿಂದೆಂದೂ ಹೀಗೆ ಆಗಿರಲಿಲ್ಲ. ಮೂರು ತಿಂಗಳೊಳಗೆ, ಅವರು(ಬಿಜೆಪಿ) ದೆಹಲಿಯಲ್ಲಿ ಶಿಕ್ಷಣವನ್ನು ಹಾಳುಮಾಡಲು ಪ್ರಾರಂಭಿಸಿದ್ದಾರೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com