NOTAM: ವಾಯುಮಾರ್ಗ ಸ್ಥಗಿತ ಇನ್ನೂ 1 ತಿಂಗಳು ಮುಂದುವರಿಕೆ; ಪಾಕಿಸ್ತಾನಕ್ಕೆ ಭಾರತ ತಿರುಗೇಟು!

ಪಾಕಿಸ್ತಾನದ ವಿಮಾನಗಳಿಗೆ ಭಾರತವು NOTAM (ವಾಯುಗಾಮಿಗಳಿಗೆ ಸೂಚನೆ) ಅನ್ನು ಒಂದು ತಿಂಗಳ ಕಾಲ ವಿಸ್ತರಿಸಿದ್ದು, ಜೂನ್ 23, 2025 ರವರೆಗೆ ಇದು ಜಾರಿಯಲ್ಲಿರುತ್ತದೆ ಎನ್ನಲಾಗಿದೆ.
India extends NOTAM for Pakistan flights for one month
ವಾಯುಮಾರ್ಗ ನಿರ್ಬಂಧ (ಸಂಗ್ರಹ ಚಿತ್ರ)
Updated on

ನವದೆಹಲಿ: ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ದೇಶಗಳು ಪರಸ್ಪರ ತನ್ನ ವಾಯುಮಾರ್ಗ ಸ್ಥಗಿತಗೊಳಿಸಿದ್ದು, ಇದೀಗ ವಾಯುಮಾರ್ಗ ಸ್ಥಗಿತತೆಯನ್ನು ಭಾರತ ಸರ್ಕಾರ ಇನ್ನೂ 1 ತಿಂಗಳು ಮುಂದುವರೆಸಿದೆ.

ಪಾಕಿಸ್ತಾನದ ವಿಮಾನಗಳಿಗೆ ಭಾರತವು NOTAM (ವಾಯುಗಾಮಿಗಳಿಗೆ ಸೂಚನೆ) ಅನ್ನು ಒಂದು ತಿಂಗಳ ಕಾಲ ವಿಸ್ತರಿಸಿದ್ದು, ಜೂನ್ 23, 2025 ರವರೆಗೆ ಇದು ಜಾರಿಯಲ್ಲಿರುತ್ತದೆ ಎನ್ನಲಾಗಿದೆ.

ಪಾಕಿಸ್ತಾನದಲ್ಲಿ ನೋಂದಾಯಿಸಲಾದ ACFT ಗಳು ಮತ್ತು ಮಿಲಿಟರಿ ವಿಮಾನಗಳು ಸೇರಿದಂತೆ ಪಾಕಿಸ್ತಾನಿ ವಿಮಾನಯಾನ ಸಂಸ್ಥೆಗಳು/ನಿರ್ವಾಹಕರು ನಿರ್ವಹಿಸುವ/ಮಾಲೀಕತ್ವ ಹೊಂದಿರುವ ಅಥವಾ ಗುತ್ತಿಗೆ ಪಡೆದ ACFT ಗಳಿಗೆ ಭಾರತೀಯ ವಾಯುಪ್ರದೇಶ ಬಳಕೆಗೆ ಹೇರಲಾಗಿದ್ದ ನಿರ್ಬಂಧವನ್ನು ಇನ್ನೂ ಒಂದು ತಿಂಗಳ ಕಾಲ ಮುಂದುವರೆಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.

India extends NOTAM for Pakistan flights for one month
ಅಪಾಯಕ್ಕೆ ಸಿಲುಕಿದ್ದ ದೆಹಲಿ-ಶ್ರೀನಗರ ಇಂಡಿಗೋ ವಿಮಾನಕ್ಕೆ ತನ್ನ ವಾಯುಸೀಮೆ ಬಳಸಲು ಮನವಿ ತಿರಸ್ಕರಿಸಿದ ಪಾಕಿಸ್ತಾನ; Video

ಪಾಕ್ ಗೆ ತಿರುಗೇಟು

ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ ಉಭಯ ದೇಶಗಳ ನಡುವೆ ಉಂಟಾಗಿದ ಉದ್ವಿಗ್ನತೆ ಕದನ ವಿರಾಮ ಘೋಷಣೆ ಬಳಿಕ ಶಮನವಾಗಿತ್ತು. ಅದಾಗ್ಯೂ ಪಾಕಿಸ್ತಾನ ಸರ್ಕಾರ ಇತ್ತೀಚೆಗೆ ತನ್ನ ವಾಯುಮಾರ್ಗವನ್ನು ಭಾರತಕ್ಕೆ ಮುಚ್ಚುವ ನಿರ್ಧಾರವನ್ನು ಇನ್ನೂ ಒಂದು ತಿಂಗಳು ಮುಂದುವರೆಸಿತ್ತು.

ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಭಾರತವು ಕೈಗೊಂಡ ಕ್ರಮಗಳಿಗೆ ಪ್ರತಿಕ್ರಿಯಾತ್ಮಕವಾಗಿ ಪಾಕಿಸ್ತಾನವು ತನ್ನ ವಾಯುಮಾರ್ಗವನ್ನು ಮುಚ್ಚಿತ್ತು. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ನಿಯಮದ ಪ್ರಕಾರ ಒಂದು ತಿಂಗಳಿಗಿಂತ ಹೆಚ್ಚು ಅವಧಿ ವಾಯುಮಾರ್ಗವನ್ನು ನಿರ್ಬಂಧಿಸುವಂತಿಲ್ಲ.

ಅಪಾಯ ಎಂದರೂ ವಾಯುಮಾರ್ಗ ಅನುಮತಿಸದ 'ಪಾಪಿ'ಸ್ತಾನ

ಇನ್ನು ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಆಲಿಕಲ್ಲು ಅಪ್ಪಳಿಸಿ ಅದರ ಮೂಗು ಛಿದ್ರವಾದ ಹಿನ್ನಲೆಯಲ್ಲಿ ಪ್ರಯಾಣಿಕರ ರಕ್ಷಿಸಲು ಪಾಕ್‌ ವಾಯುಗಡಿ ಬಳಸಲು ಇಂಡಿಗೋ ಮಾಡಿದ್ದ ಮನವಿಯನ್ನು ಪಾಕಿಸ್ತಾನ ನಿರಾಕರಿಸಿತ್ತು.

ಇಂಡಿಗೋ ವಿಮಾನವು ಪ್ರಕ್ಷುಬ್ಧತೆಯನ್ನು ತಪ್ಪಿಸಲು ಸ್ವಲ್ಪ ಸಮಯದವರೆಗೆ ಪಾಕಿಸ್ತಾನದ ವಾಯುಸೀಮೆ ಬಳಸಲು ಅನುಮತಿ ಕೋರಿತ್ತು. ಆದರೆ ಲಾಹೋರ್‌ ವಾಯು ಸಂಚಾರ ನಿಯಂತ್ರಣವು ಈ ವಿನಂತಿಯನ್ನು ತಿರಸ್ಕರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com