
ಗುಜರಾತ್: ಭಾರತ- ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಒಳನುಸುಕೋರನನ್ನು ಗಡಿ ಭದ್ರತಾ ಪಡೆ (BSF) ಗುಂಡಿಕ್ಕಿ ಹತ್ಯೆ ಮಾಡಿವೆ.
ಗಡಿಯಿಂದ ಭಾರತದೊಳಗೆ ಪ್ರವೇಶಿಸಲು ಯತ್ನಿಸಿದ ನುಸುಳುಕೋರನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಬನಸ್ಕಾಂತದಲ್ಲಿ ಅಂತಾರಾಷ್ಟ್ರೀಯ ಗಡಿ ದಾಟಿ ನಂತರದ ಭಾರತದ ಗಡಿ ಬೇಲಿಯತ್ತ ನುಗ್ಗಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ನೋಡಿದ ನಂತರ ಗಡಿ ಭದ್ರತಾ ಪಡೆಗಳು ಕಾರ್ಯೋನ್ಮುಖವಾದವು ಎಂದು BSF ಹೇಳಿಕೆಯಲ್ಲಿ ತಿಳಿಸಿದೆ.
ಒಳನುಸುಳುಕೋರನಿಗೆ ಭಾರತದ ಕಡೆಗೆ ಬಾರದಂತೆ ಎಚ್ಚರಿಕೆ ನೀಡಿದ್ದೇವು. ಆದರೂ, ಆತ ನಮ್ಮ ಮನವಿಗೆ ಸ್ಪಂದಿಸದೆ ಒಳನುಸುಳಲು ಯತ್ನಿಸಿದ್ದರಿಂದ ಗುಂಡಿನ ದಾಳಿ ನಡೆಸಲಾಯಿತು. ಪರಿಣಾಮ ಒಳನುಸುಳುಕೋರ ಸ್ಥಳದಲ್ಲಿಯೇ ಸಾವನ್ನಪ್ಪಿರುವುದಾಗಿ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.
Advertisement