ದೆಹಲಿಯಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ: ವಿಮಾನ ಹಾರಾಟ ವ್ಯತ್ಯಯ

ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ದೆಹಲಿ ವಿಮಾನ ನಿಲ್ದಾಣ, ಕಳೆದ ರಾತ್ರಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ, ಕೆಲವು ವಿಮಾನಗಳ ಮೇಲೆ ಪರಿಣಾಮ ಬೀರಿದೆ.
Rain in Delhi
ದೆಹಲಿಯಲ್ಲಿ ಮಳೆ
Updated on

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGIA) ಭಾನುವಾರ ಮುಂಜಾನೆ ಸುರಿದ ಭಾರಿ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ವಿಮಾನ ಕಾರ್ಯಾಚರಣೆಗಳಲ್ಲಿ ವ್ಯತ್ಯಯವುಂಟಾಗಿದೆ.

ವಿಮಾನ ನಿಲ್ದಾಣ ಅಧಿಕಾರಿಗಳ ಪ್ರಕಾರ, ಪ್ರತಿಕೂಲ ಹವಾಮಾನದಿಂದಾಗಿ ಕನಿಷ್ಠ 48 ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಪ್ರತಿಕೂಲ ಪರಿಸ್ಥಿತಿಗಳು ಹಲವಾರು ವಿಮಾನಯಾನ ಸಂಸ್ಥೆಗಳಲ್ಲಿ ವಿಳಂಬ ಮತ್ತು ರದ್ದತಿಗೆ ಕಾರಣವಾಗಿವೆ, Flightradar24.com ನ ದತ್ತಾಂಶದ ಪ್ರಕಾರ, ಪ್ರಯಾಣಿಕರು ಸರಾಸರಿ 30 ನಿಮಿಷಗಳಿಗಿಂತ ಹೆಚ್ಚು ನಿರ್ಗಮನ ವಿಳಂಬವನ್ನು ಅನುಭವಿಸಿದ್ದಾರೆ.

ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ದೆಹಲಿ ವಿಮಾನ ನಿಲ್ದಾಣ, ಕಳೆದ ರಾತ್ರಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ, ಕೆಲವು ವಿಮಾನಗಳ ಮೇಲೆ ಪರಿಣಾಮ ಬೀರಿದೆ. ಪ್ರಯಾಣಿಕರು ತಮ್ಮ ಹಾರಾಟದ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಲು ಮತ್ತು ಬದಲಾದ ಕಾಲಸ್ಥಿತಿಗೆ ವಿಮಾನಯಾನ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ.

Rain in Delhi
ದೆಹಲಿ-ಎನ್ ಸಿಆರ್ ನಲ್ಲಿ ಭಾರೀ ಮಳೆ, ಒರ್ವ ಸಾವು: ಹಲವು ಪ್ರದೇಶಗಳು ಜಲಾವೃತ

ಭಾರೀ ಮಳೆಯಿಂದಾಗಿ ಮೋತಿ ಬಾಗ್, ಮಿಂಟೋ ರಸ್ತೆ, ದೆಹಲಿ ಕಂಟೋನ್ಮೆಂಟ್ ಮತ್ತು ದೀನ್ ದಯಾಳ್ ಉಪಾಧ್ಯಾಯ ಮಾರ್ಗ ಪ್ರದೇಶಗಳಲ್ಲಿ ನೀರು ನಿಲ್ಲುವ ಸ್ಥಿತಿ ನಿರ್ಮಾಣವಾಯಿತು. ವಿಶೇಷವಾಗಿ ಧೌಲಾ ಕುವಾನ್ ಸುತ್ತಮುತ್ತ, ಪ್ರಮುಖ ಸಂಚಾರ ದಟ್ಟಣೆ ಉಂಟಾಗಿದೆ. ನಾನಕ್‌ಪುರ ಅಂಡರ್‌ಪಾಸ್ ತೀವ್ರವಾಗಿ ಜಲಾವೃತವಾಗಿದ್ದು, ಸಂಚಾರ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ.

ಉತ್ತರಾಖಂಡ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿಯೂ ಭಾರೀ ಮಳೆಯಾಗಿದೆ. ಭಾರತ ಹವಾಮಾನ ಇಲಾಖೆ (IMD) ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ರೆಡ್ ಅಲರ್ಟ್ ನೀಡಿತ್ತು, ಗುಡುಗು ಸಹಿತ ಮಳೆ ಮತ್ತು ಅತಿ ವೇಗದ ಗಾಳಿ ಬೀಸುವ ಮುನ್ಸೂಚನೆ ನೀಡಿತ್ತು.

ನೌಕಾಸ್ಟ್ ಎಚ್ಚರಿಕೆಯ ಭಾಗವಾಗಿ ನೀಡಲಾದ ಎಚ್ಚರಿಕೆಯು ಪಶ್ಚಿಮ ಮತ್ತು ವಾಯುವ್ಯದಿಂದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯನ್ನು ಉಲ್ಲೇಖಿಸಿದೆ. ರಾಜಧಾನಿಯ ಕೆಲವು ಭಾಗಗಳಲ್ಲಿ ತೀವ್ರವಾದ ಗುಡುಗು ಸಹಿತ ಚಟುವಟಿಕೆ, ಆಗಾಗ್ಗೆ ಮಿಂಚು ಮತ್ತು ಗಂಟೆಗೆ 40-60 ಕಿಮೀ ಅಥವಾ ಅದಕ್ಕಿಂತ ಹೆಚ್ಚಿನ ವೇಗದ ಗಾಳಿ ಬೀಸಬಹುದು ಎಂದು ಐಎಂಡಿ ಎಚ್ಚರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com