
ಭೋಪಾಲ್: ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕ ಮನೋಹರ್‌ಲಾಲ್ ಧಕಾಡ್ ಅವರ ಸೆಕ್ಸ್ ವಿಡಿಯೋ ವಿವಾದ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಮತ್ತೋರ್ವ ಬಿಜೆಪಿ ನಾಯಕನ ಅಶ್ಲೀಲ ವಿಡಿಯೋ ಸುದ್ದಿಗೆ ಗ್ರಾಸವಾಗುತ್ತಿದೆ.
ಹೌದು.. ಮಧ್ಯಪ್ರದೇಶ ಬಿಜೆಪಿ ಹಿರಿಯ ನಾಯಕ ಹಾಗೂ ಸಿವ್ನಿ ಮಾಲ್ವಾದ ನಾಯಕ ಕಮಲ್ ರಘುವಂಶಿ ಅವರ ಹಳೆಯ ಅಶ್ಲೀಲ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಏಪ್ರಿಲ್ 29 ರಂದು (ಮಂಗಳವಾರ) ನಡೆದ ವಿವಾಹ ಸಮಾರಂಭದಲ್ಲಿ ರಘುವಂಶಿ ಮಹಿಳಾ ನರ್ತಕಿಯೊಂದಿಗೆ ಆಕ್ಷೇಪಾರ್ಹ ವರ್ತನೆಯಲ್ಲಿ ತೊಡಗಿರುವುದನ್ನು ಈ ವಿಡಿಯೋದಲ್ಲಿ ದಾಖಲಾಗಿದೆ.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಸ್ಥಳೀಯ ರಾಜಕಾರಣಿಗಳು ಸೇರಿದಂತೆ ದೊಡ್ಡ ಜನಸಮೂಹವೇ ಭಾಗವಹಿಸಿತ್ತು. ಅದೇ ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ನಾಯಕಿಯರೂ ಕೂಡ ಇದ್ದರು. ಆದರೂ ಯಾರೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಿಲ್ಲ.
ವೈರಲ್ ವೀಡಿಯೊದಲ್ಲಿ, ಕಮಲ್ ರಘುವಂಶಿ ಅವಳೊಂದಿಗೆ ಅನುಚಿತವಾಗಿ ವರ್ತಿಸಿ ಆಕೆಯನ್ನು ಚುಂಬಿಸಿ ಅಶ್ಲೀಲವಾಗಿ ವರ್ತಿಸಿದರು. ಈ ಘಟನೆಯನ್ನು ಕೆಲವರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡರು. ಈ ದೃಶ್ಯಗಳು ಈಗ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿವೆ.
ಕಾಂಗ್ರೆಸ್ ಆಕ್ರೋಶ
ಇನ್ನು ಮಧ್ಯ ಪ್ರದೇಶ ಬಿಜೆಪಿ ನಾಯಕರ ಈ ಅಶ್ಲೀಲ ವಿಡಿಯೋಗಳ ಕುರಿತು ಕಾಂಗ್ರೆಸ್ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಮಾತನಾಡಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ , 'ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರ ಅವಮಾನಕರ ಕೃತ್ಯಗಳಿಂದ ದೇಶವು ದಿಗ್ಭ್ರಮೆಗೊಂಡಿದೆ.
ಮೊದಲು, ಉತ್ತರ ಪ್ರದೇಶದ ಬಬನ್ ಸಿಂಗ್ ರಘುವಂಶಿ, ನಂತರ ಸಂಸದ ಮನೋಹರ್‌ಲಾಲ್ ಧಕಾಡ್ ಮತ್ತು ಈಗ ನರ್ಮದಾಪುರಂನ ಕಮಲ್ ರಘುವಂಶಿ. ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸಲು ನಾವು ನಂಬುವ ಪುರುಷರು ಇವರೇ?" ಎಂದು ಟ್ವೀಟ್ ಮಾಡಿದ್ದಾರೆ.
ಮೊದಲೇನಲ್ಲ
ಇನ್ನು ಬಿಜೆಪಿ ನಾಯಕರ ಅಶ್ಲೀಲ ವಿಡಿಯೋ ಪ್ರಕರಣ ಇದೇ ಮೊದಲೇನಲ್ಲ. ಇದಕ್ಕೂ ಮೊದಲು, ಬಲ್ಲಿಯಾ (ಯುಪಿ) ಯ ಬಿಜೆಪಿ ನಾಯಕ ಬಬನ್ ಸಿಂಗ್ ರಘುವಂಶಿ ಅವರು ಕೂಡ ಇದೇ ರೀತಿಯ ಅಶ್ಲೀಲ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದರು. ವಿಡಿಯೋದಲ್ಲಿ, ಅವರು ಬಿಹಾರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನರ್ತಕಿಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದರು.
Advertisement