ಅಂದು ಪಟೇಲರ ಮಾತನ್ನು ಯಾರೂ ಕೇಳಲಿಲ್ಲ, ಪರಿಣಾಮ 75 ವರ್ಷಗಳಿಂದ ಭಯೋತ್ಪಾದನೆ ಸಮಸ್ಯೆ ಎದುರಿಸುತ್ತಿದ್ದೇವೆ: ಪ್ರಧಾನಿ ಮೋದಿ

1947 ರಲ್ಲಿ, ಭಾರತ ಮಾತೆ ವಿಭಜನೆಯಾದಾಗ 'ಸರಪಳಿಯನ್ನು ಕತ್ತರಿಸುವ ಬದಲು ತೋಳುಗಳನ್ನು ಕತ್ತರಿಸಲಾಯಿತು. ದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಲಾಯಿತು.
Narendra Modi
ನರೇಂದ್ರ ಮೋದಿ
Updated on

ಗಾಂಧಿನಗರ(ಗುಜರಾತ್): ನಾನು ಕಳೆದ ಎರಡು ದಿನಗಳಿಂದ ಗುಜರಾತ್‌ನಲ್ಲಿದ್ದೇನೆ, ನಿನ್ನೆ ನಾನು ವಡೋದರಾ, ದಾಹೋದ್, ಭುಜ್, ಅಹಮದಾಬಾದ್ ಮತ್ತು ಇಂದು ಬೆಳಿಗ್ಗೆ ಗಾಂಧಿನಗರಕ್ಕೆ ಭೇಟಿ ನೀಡಿದ್ದೇನೆ. ಎಲ್ಲಿ ಹೋದರೂ ಕೇಸರಿ ಸಮುದ್ರದ ಅಬ್ಬರದಂತೆ ದೇಶಪ್ರೇಮದ ಅಲೆ ಭಾಸವಾಗುತ್ತಿತ್ತು. ಕೇಸರಿ ಸಮುದ್ರದ ಅಬ್ಬರ, ತ್ರಿವರ್ಣ ಧ್ವಜ, ಹೃದಯದಲ್ಲಿ ಮಾತೃಭೂಮಿಯ ಮೇಲಿನ ಅಪಾರ ಪ್ರೀತಿ.. ಇದೊಂದು ಅವಿಸ್ಮರಣೀಯ ದೃಶ್ಯವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೇಹ ಎಷ್ಟೇ ಆರೋಗ್ಯಕರವಾಗಿದ್ದರೂ, ಮುಳ್ಳು ಚುಚ್ಚಿದರೆ, ಇಡೀ ದೇಹಕ್ಕೆ ತೊಂದರೆಯಾಗುತ್ತದೆ. ಈಗ ನಾವು ಆ ಮುಳ್ಳನ್ನು ತೆಗೆದುಹಾಕಲು ನಿರ್ಧರಿಸಿದ್ದೇವೆ ಎಂದರು. 1947 ರಲ್ಲಿ, ಭಾರತ ಮಾತೆ ವಿಭಜನೆಯಾದಾಗ 'ಸರಪಳಿಯನ್ನು ಕತ್ತರಿಸುವ ಬದಲು ತೋಳುಗಳನ್ನು ಕತ್ತರಿಸಲಾಯಿತು. ದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಲಾಯಿತು.

ಅದೇ ರಾತ್ರಿ ಕಾಶ್ಮೀರದಲ್ಲಿ ಮೊದಲ ಭಯೋತ್ಪಾದಕ ದಾಳಿ ನಡೆಯಿತು. ಪಾಕಿಸ್ತಾನವು ಮುಜಾಹಿದ್ದೀನ್ ಹೆಸರಿನಲ್ಲಿ ಭಯೋತ್ಪಾದಕರನ್ನು ಬಳಸಿಕೊಂಡು ದೇಶದ ಒಂದು ಭಾಗವನ್ನು ವಶಪಡಿಸಿಕೊಂಡಿತು. ಆ ದಿನ, ಈ ಮುಜಾಹಿದ್ದೀನ್‌ಗಳನ್ನು ಕೊಂದಿದ್ದರೆ, ಸರ್ದಾರ್ ಪಟೇಲ್ ಅವರ ಆಶಯ ನಮಗೆ ಪಿಒಕೆ ಸಿಗುವವರೆಗೆ ನಮ್ಮ ಸಶಸ್ತ್ರ ಪಡೆಗಳು ನಿಲ್ಲಬಾರದು ಎಂಬುದಾಗಿತ್ತು. ಆದರೆ ಯಾರೂ ಅವರ ಮಾತನ್ನು ಕೇಳಲಿಲ್ಲ, ಪರಿಣಾಮ ನಾವು ಕಳೆದ 75 ವರ್ಷಗಳಿಂದ ಭಯೋತ್ಪಾದನೆ ಸಮಸ್ಯೆ ಎದುರಿಸುತ್ತಿದ್ದೇವೆ ಎಂದರು.

ಪಹಲ್ಗಾಮ್ ಕೂಡ ಇದಕ್ಕೆ ಒಂದು ಉದಾಹರಣೆಯಾಗಿದೆ. ನಾವು ಪಾಕಿಸ್ತಾನದೊಂದಿಗೆ ಯುದ್ಧ ಮಾಡಿ ಅವರನ್ನು ಮೂರು ಬಾರಿ ಸೋಲಿಸಿದ್ದೆವು. ಇದು ಧೈರ್ಯಶಾಲಿಗಳ ಭೂಮಿ. ಇಲ್ಲಿಯವರೆಗೆ, ನಾವು ಪ್ರಾಕ್ಸಿ ಯುದ್ಧ ಎಂದು ಕರೆಯುತ್ತಿದ್ದೆವು, ಮೇ 6 ರ ನಂತರ ಕಂಡುಬಂದ ದೃಶ್ಯಗಳ ನಂತರ, ಅದನ್ನು ಪ್ರಾಕ್ಸಿ ಯುದ್ಧ ಎಂದು ಕರೆಯಲು ಸಾಧ್ಯವಿಲ್ಲ.

ಭಯೋತ್ಪಾದಕ ಅಡಗುತಾಣಗಳನ್ನು ಕೇವಲ 22 ನಿಮಿಷಗಳಲ್ಲಿ ಗುರುತಿಸಿ ನಾಶಪಡಿಸಿದಾಗ, ಅದು ನಿರ್ಣಾಯಕ ಕ್ರಮವಾಗಿತ್ತು. ಈ ಬಾರಿ, ಎಲ್ಲವನ್ನೂ ಕ್ಯಾಮೆರಾಗಳ ಮುಂದೆ ನಡೆಸಿದ್ದು, ಇನ್ನು ಯಾರೂ ಪುರಾವೆ ಕೇಳಲು ಸಾಧ್ಯವಿಲ್ಲ ಎಂದರು.

Narendra Modi
'ಪ್ರತಿಯೊಬ್ಬ ಭಾರತೀಯನ ಸಂಕಲ್ಪ ಭಯೋತ್ಪಾದನೆ ನಿರ್ಮೂಲನೆ; ಆಪರೇಷನ್ ಸಿಂಧೂರ್ ಬದಲಾಗುತ್ತಿರುವ ಭಾರತದ ಮುಖ: 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com