ಪುಣೆ ಪೋರ್ಷೆ ಅಪಘಾತ ಪ್ರಕರಣದಲ್ಲಿ ರಕ್ತದ ಮಾದರಿ ತಿರುಚಿದ್ದ ವೈದ್ಯ ಈಗ ಕಿಡ್ನಿ ಕಸಿ ಜಾಲದಲ್ಲಿ ಬಂಧನ

"ಕಿಡ್ನಿ ಜಾಲ ಪ್ರಕರಣದಲ್ಲಿ ನಾವು ಡಾ. ಅಜಯ್ ಟವರೆ ಅವರನ್ನು ವಶಕ್ಕೆ ಪಡೆದಿದ್ದೇವೆ ಮತ್ತು ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು" ಎಂದು ಉಪ ಪೊಲೀಸ್ ಆಯುಕ್ತ(ಅಪರಾಧ) ನಿಖಿಲ್ ಪಿಂಗಲೆ ಹೇಳಿದ್ದಾರೆ.
ಡಾ. ಅಜಯ್ ಟವರೆ
ಡಾ. ಅಜಯ್ ಟವರೆ
Updated on

ಪುಣೆ: ಪುಣೆಯ ಪ್ರಮುಖ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಕಿಡ್ನಿ ಕಸಿ ಜಾಲಕ್ಕೆ ಸಂಬಂಧಿಸಿದಂತೆ ಪುಣೆಯ ಸಸೂನ್ ಜನರಲ್ ಆಸ್ಪತ್ರೆಯ ಮಾಜಿ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಅಜಯ್ ಟವರೆ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆಯ ಕಲ್ಯಾಣಿ ನಗರದಲ್ಲಿ 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಬಾಲಕನ ರಕ್ತದ ಮಾದರಿ ತಿರುಚಿದ ಆರೋಪದ ಮೇಲೆ ಕಳೆದ ವರ್ಷ ಬಂಧನಕ್ಕೊಳಗಾಗಿದ್ದ ಟವರೆ ಅವರನ್ನು ಈಗ ಕಿಡ್ನಿ ಕಸಿ ಜಾಲದಲ್ಲಿ ಬಂಧಿಸಿದ್ದು, ಯೆರ್ವಾಡಾ ಕೇಂದ್ರ ಜೈಲಿನಲ್ಲಿದ್ದಾರೆ.

ಇಲ್ಲಿನ ಪ್ರಮುಖ ಖಾಸಗಿ ಆಸ್ಪತ್ರೆಯಾದ ರೂಬಿ ಹಾಲ್ ಕ್ಲಿನಿಕ್‌ನಲ್ಲಿ 2022 ರಲ್ಲಿ ನಡೆದ ಮೂತ್ರಪಿಂಡ ಕಸಿ ಜಾಲಕ್ಕೆ ಸಂಬಂಧಿಸಿದಂತೆ ನಗರ ಅಪರಾಧ ವಿಭಾಗವು ಟವರೆಯನ್ನು ಈಗ ವಶಕ್ಕೆ ಪಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಾ. ಅಜಯ್ ಟವರೆ
ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ: ಮತ್ತಿಬ್ಬರ ಬಂಧನ, ರಕ್ತದ ಮಾದರಿ ವಿನಿಮಯ ಆರೋಪ

"ಕಿಡ್ನಿ ಜಾಲ ಪ್ರಕರಣದಲ್ಲಿ ನಾವು ಡಾ. ಅಜಯ್ ಟವರೆ ಅವರನ್ನು ವಶಕ್ಕೆ ಪಡೆದಿದ್ದೇವೆ ಮತ್ತು ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು" ಎಂದು ಉಪ ಪೊಲೀಸ್ ಆಯುಕ್ತ(ಅಪರಾಧ) ನಿಖಿಲ್ ಪಿಂಗಲೆ ಹೇಳಿದ್ದಾರೆ.

ಡಾ. ಅಜಯ್ ಟವರೆ ಅವರು 2022 ರಲ್ಲಿ, ಮೂತ್ರಪಿಂಡ ಕಸಿ ಮಾಡಲು ಅನುಮೋದನೆ ನೀಡಿದ ಪ್ರಾದೇಶಿಕ ಅಧಿಕಾರ ಸಮಿತಿಯ ಮುಖ್ಯಸ್ಥರಾಗಿದ್ದರು.

ಆ ವರ್ಷದ ಮಾರ್ಚ್‌ನಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಮೇ 2022 ರಲ್ಲಿ ರೂಬಿ ಹಾಲ್ ಕ್ಲಿನಿಕ್‌ನ ವ್ಯವಸ್ಥಾಪಕ ಟ್ರಸ್ಟಿ ಮತ್ತು ಅದರ ಕೆಲವು ಉದ್ಯೋಗಿಗಳು ಸೇರಿದಂತೆ 15 ಜನರ ವಿರುದ್ಧ ಪ್ರಕರಣ ದಾಖಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com